ನಿರಾತಂಕದಿಂದ ಪ್ರಾರಂಭಗೊಂಡ ಚಿಕ್ಕ ಜೋಗಿಹಳ್ಳಿ ಸಂತೆ ಪೊಲೀಸರಿಂದ ನಿಂತಿತು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆಯಿಂದಲೇ ಭಾರೀ ಜನಸ್ಥೊಮದೊಂದಿಗೆ ನಿರ‍ತಂಕವಾಗಿ ಸಂತೆ ಜರುಗಿತು.ಕೂಡ್ಲಿಗಿ ತಾಲೂಕು ಆಡಳಿತ ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ರವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗು ಆರೋಗ್ಯ ಇಲ‍ಾಖೆಯವರು ಕೊರೋನಾ ವಿರುದ್ಧ ಲಾಕ್ ಡೌನ್ ಮೂಲಕ ತಾಲೂಕನ್ನು ಕೊರೋನಾ ಸೋಂಕು ಪ್ರವೇಶಿಸದಂತೆ ನಿತ್ಯ ಹಗಲು ರಾತ್ರಿ ಸೆಣಸಾಡುತ್ತಿದ್ದಾರೆ.ಆದರೆ ಇಲ್ಲಿಯ ಜನಕ್ಕೆ ಸಂತೆಮಾಡುವುದೇ ಹಬ್ಬವಾಗಿ ಬಿಟ್ಟಿದೆ.ಗ್ರಾಮೀಣ ಭಾಷೆಯಲ್ಲಿ ಅಜ್ಜಿಗೆ ಅಜ್ಜನಕಾಟ.. ಮೊಮ್ಮಗಳಿಗೆ..ಅದೇನೋ…ಕಾಟವಂತೆ..ಹಾಗಾಗಿದೆ ಇಲ್ಲಿಯ ಪರಿಸ್ಥಿತಿ.

ಅಂದರೆ ಸಕಾ೯ರದ ಆದೇಶಕ್ಕೆ ತಾಲೂಕು ಆಡಳಿತದ ಸೂಚನೆಗೆ ಇಲ್ಲಿ ಕವಡೆಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದಥ೯.ಸಕ‍ಾ೯ರ ನಿತ್ಯ ಮಾದ್ಯಮಗಳ ಮೂಲಕ ಲಾಕ್ ಡೌನ್ ಲಾಕ್ ಡೌನ್ ಎಂದು ಬೊಬ್ಬೆ ಹೊಡೆದು ಕೊಳ್ಳುತ್ತಿದೆ.ತಾಲೂಕು ಆಡಳಿತಾಧಿಕಾರಿಗಳು ಪೊಲೀಸ್ ಇಲಾಖಾಧಿಕಾರಿಗಳು ಆರೋಗ್ಯ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಯಂದಿಗೆ ಹಗಲು ರಾತ್ರಿ ಕಾಯ೯ನಿವ೯ಹಿಸುತ್ತಿದ್ದಾರೆ. ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳ ಪ್ರಾಮಾಣಿಕತೆ.ಕಾಯ೯ಧಕ್ಷತೆ ಎಂತಹದ್ದು ಎಂಬುದಕ್ಕೆ ಚಿಕ್ಕಜೋಗಿಹಳ್ಳಿ ಸಂತೆ ಸಾಕ್ಷಿಯಾಗಿದೆ.ಸಂತೆ ಪ್ರಾರಂಭಗೊಂಡ ಕೆಲಗಂಟೆಗಳ ನಂತರ ತಾಲೂಕಾಡಳಿತಕ್ಕೆ ಮಾಹಿತಿದೊರಕಿದ್ದು.ಕಂದಾಯ ಇಲಾಖಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ದಾಳಿನಡೆಸಿ ಸಂತೆಯನ್ನು ತೆರವುಗೊಳಿಸಿದ್ದಾರೆ.

ಜಾಗೃತಿ ಮೂಡಿಸುವಲ್ಲಿ ವಿಫಲ– ರೈತಾಪಿ ವಗ೯ ಮುಗ್ದ ಅನಕ್ಷರಸ್ಥ ಜನತೆ ಗ್ರಾಮೀಣ ಭಾಗದಲ್ಲಿದ್ದು.ಜನರಿಗೆ ಕೊರೋನಾ ರೊಗದ ಗಾಂಭೀರತೆ ಮತ್ತು ಸಕಾ೯ರ ಘೋಷಿಸಿರುವ ಲಾಕ್ ಡೌನ್ ಕುರಿತಾದ ಮಾಹಿತಿ ತಲುಪಿಸುವಲ್ಲಿ ಮತ್ತು ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿವಗ೯ ಸಂಪೂಣ೯ ವಿಫಲವಾಗಿದೆ ಎಂದು ಕೆಲ ಜನಪ್ರತಿನಿಧಿಗಳು.ಸಂಘ ಸಂಸ್ಥೆಗಳ ಪಾದಾಧಿಕಾರಿಗಳು ದೂರಿದ್ದಾರೆ.

Be the first to comment

Leave a Reply

Your email address will not be published.


*