ಜೀಲ್ಲಾ ಸುದ್ದಿಗಳು
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಕಳುಹಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ವ್ಯಕ್ತಿಗೆ ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಕೆಂಭಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅಮಲಿಹಾಳ ಗ್ರಾಮದ ರೇವಣಸಿದ್ದಪ್ಪ ತಂದೆ ಮಾಳಪ್ಪ ಪೂಜಾರಿ
ಎನ್ನುವ ವ್ಯಕ್ತಿ ಬೆಂಗಳೂರಿನಿಂದ ಬಂದ ಯಡಹಳ್ಳಿ ಗ್ರಾಮದ ಇಬ್ಬರು ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸುಳ್ಳು ಸಂದೇಶವನ್ನು ಹರಿಬಿಡುವ ಮೂಲಕ ಸಾರ್ವಜನಿಕರಲ್ಲಿ ಭಯ ಹಾಗೂ ಆತಂಕದ ವಾತಾವರಣ ಮೂಡಿಸಿದ್ದಲ್ಲದೆ ವದಂತಿಯನ್ನು ಹಬ್ಬಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾನೆ
ಈ ವ್ಯಕ್ತಿಯ ಬಗ್ಗೆ ಜಾಲ ಬೀಸಿದ ಕೆಂಭಾವಿ ಪೊಲೀಸರು ಸದ್ಯ ಆ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈ ವ್ಯಕ್ತಿಯ ಬಗ್ಗೆ ಪ್ರಕರಣ ದಾಖಲಾಗಿದೆ.
ವರದಿ
ರಾಘವೇಂದ್ರ ಮಾಸ್ತರ
Be the first to comment