ಜೀಲ್ಲಾ ಸುದ್ದಿಗಳು
ಜಾಹೀರಾತು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ತುಪ್ಪಕ್ಕನಹಳ್ಳಿ ಗ್ರಾಮದ ಸಹ ಶಿಕ್ಷಕ ಡಿ.ಬಸಪ್ಪನನ್ನು ಬೇರೆಡೆಗೆ ವಗಾ೯ಹಿಸಬೇಕೆಂದು ಶಾಲೆಯ ಭಡ್ತಿ ಮುಖ್ಯ ಶಿಕ್ಷಕ ಬಿ.ದುರುಗಪ್ಪ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು.ಗ್ರಾಮಸ್ಥರು.ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. *ಗಂಭೀರ ಆರೋಪಗಳು-* ಗ್ರಾಮದಲ್ಲಿ ಶಿಕ್ಷಕ ಡಿ.ಬಸಪ್ಪರ ಕುರಿತು ಬಿಸಿಯೂಟ ಸಿಬ್ಬಂಧಿಯೊಂದಿಗೆ ದುನ೯ಡತೆ ಹಾಗು ಶಾಲಾವಧಿಯಲ್ಲಿ ಅನಗತ್ಯ ಗೈರು.ಶಾಲಾಭಿವೃದ್ಧಿ ನಿಧಿ ದುಬ೯ಳಕೆ.ಕೆಲರಾತ್ರಿಹೊತ್ತು ಮತ್ತು ರಜಾದಿನಗಳಲ್ಲಿ ಶಾಲಾಕೊಠಡಿಗಳನ್ನು ಮಧ್ಯದ ಪಾಟಿ೯ ಮೋಜು ಮಸ್ಥಿಗೆದುಬ೯ಳಕೆ.ಗ್ರಾಮದಲ್ಲಿ ಗುಂಪುಗಾರಿಕೆ ಮಾಡಿ ಗಲಭೆ ಸೃಷ್ಠಿಸುವುದು.ಶಾಸಕರ ಸಂಸದರ ಹೆಸರೇಳಿಕೊಂಡು ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮದ ಹಿರಿಯರನ್ನು ಮುಖಂಡರನ್ನು ಬೆಧರಿಸುವುದು ಸೇರಿದಂತೆ ಹಲವು ಆರೋಪಗಳಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಿಕ್ಷಣಾಧಿಕಾರಿ ಧಕ್ಷತೆ ತೋರಲಿ- ಶಾಲೆಯ ಮಕ್ಕಳ ಭವಿಷ್ಯದ ಹಿತದೃಷ್ಠಿ ಹಾಗೂ ಗ್ರಾಮದಲ್ಲಿ ಶಾಂತಿ ನೆಲಸಲಿಕ್ಕಾಗಿ ಶಿಕ್ಷಕ ಬಸಪ್ಪನನ್ನು ವಗಾ೯ಹಿಸಿ ಎಂದು ಈ ಹಿಂದೆ ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಆದರೆ ಏನೂ ಪ್ರಯೋಜನವಾಗಿಲ್ಲ.ಶಿಕ್ಷಣ ಇಲಾಖಾ ಮುಖ್ಯ ನಿಧೇ೯ಶಕರಿಗೆ.ಶಿಕ್ಷಣ ಸಚಿವರಿಗೆ ಶಾಸಕರಿಗೆ ಹಾಗು ಸಂಸದರಿಗೆ ದೂರು ನೀಡಿ ವಗಾ೯ವಣೆಗೆ ಒತ್ತಾಯಿಸಲಾಗಿದೆ.ಕಾರಣ ಶಿಕ್ಷಣಾಧಿಕಾರಿ ಶೀಘ್ರವೇ ಶಿಕ್ಷಕ ಡಿ.ಬಸಪ್ಪನನ್ನು ಬೇರೆಡೆಗೆ ವಗಾ೯ಹಿಸಿ ಆದೇಶಿಸಿ ಧಕ್ಷತೆ ತೋರಿ ಮನವಿಗೆ ಸ್ಪಂದಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಅವರೇ ಕಳಂಕ ತಂದು ಕೊಂಡಂತಾಗುತ್ತದೆ ಎಂದು ಶಿಕ್ಷಣಾಧಿಕಾರಿಗಳಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಡಿ.ಬಸಪ್ಪನ ದೊಂಬರಾಟ-
ಬಸಪ್ಪನ ಮೇಲೆಬಂದಿರುವ ಆರೋಪಗಳ ಸತ್ಯಾ ಸತ್ಯತೆ ತಿಳಿಯಲು ಆತನನ್ನು ತಾವು ಸಂಪಕಿ೯ಸಿದರೆ ಯಾರೇನು ಮಾಡಿಕೊಂಡರೂ ತನ್ನ ವಗಾ೯ಹಿಸಲು ಆಗೋಲ್ಲ ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೀನಿ ಅಂತ ಬೊಬ್ಬೆಹಾಕುತ್ತಾನೆ ಬಸಪ್ಪ.ಕೆಲವೊಮ್ಮೆ ತಾನೇ ಬೇರೆಡೆಗೆ ವಗಾ೯ವಣೆ ಬಯಸಿ ಮನವಿ ಮಾಡಿಕೊಂಡಿದ್ದು. ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಸ್ಪಂದಿಸುತ್ತಿಲ್ಲ ಅವರೇ ತನ್ನ ಬಳಿ ಕಾಲಾವಕಾಶ ಕೋರಿದ್ದಾರೆ. ಎಂದು ಬಸಪ್ಪ ಬೊಗಳೆ ಬಿಡುತ್ತಾನೆ ಎಂದು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.ತಾವು ಅಧಿಕಾರಿಗಳಲ್ಲಿ ವಿಚಾರಿಸಲಾಗಿ. ವಗಾ೯ಣೆಗೆ ಆದೇಶಿಸಿದರೆ. ಶಾಸಕರು ಸಂಸದರಿಂದ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ವಗಾ೯ವಣೆ ರದ್ದುಗೊಳಿಸುವಂತೆ ಒತ್ತಡ ಹೇರಿಸುತ್ತಾನೆಂದು ಶಿಕ್ಷಣಾಧಿಕಾರಿಗಳು ತಮ್ಮ ಬಳಿ ಹೇಳಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. *ಪ್ರತಿಭಟನೆ ಎಚ್ಚರಿಕೆ-* ಒಟ್ಟಾರೆಯಾಗಿ ತುಪ್ಫಕ್ಕನಹಳ್ಳಿ ಸಹಿ ಪ್ರಾ ಶಾಲೆಗೆ ಹಾಗೂ ಇಡೀ ಗ್ರಾಮಕ್ಕೆ ತಲೆನೋವಾಗಿದ್ದು.ಹತ್ತಾರು ಆರೋಪಗಳಿಗೆ ಗುರಿಯಾಗಿರುವ ಶಿಕ್ಷಕ ಡಿ.ಬಸಪ್ಪನನ್ನು ವಾರದೊಳಗೆ ವಗಾ೯ಹಿಸಿ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸದಿದ್ದಲ್ಲಿ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಮತ್ತು ಶಿಕ್ಷಣಾಧಿಕಾರಿಗಳ ವಿರುದ್ಧ ಇಲಾಖೆಯ ಮೇಲಾಧಿಕಾರಿಗಳಿಗೆ ಮತ್ತು ಸಚಿವರಿಗೆ ಮಾಧ್ಯಮದವರಿಗೆ ಲಿಖಿತ ದೂರು ನೀಡಲಾಗುವುದೆಂದು ಎಚ್ಚರಿಸಲಾಗಿದೆ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ದೊಡ್ಡೀರಪ್ಪ.ಉಪಾಧ್ಯಕ್ಷ ರೇವಣಸಿದ್ದಪ್ಪ.ದೇವೇಂದ್ರಪ್ಪ.ಯಂಕಣ್ಣ.ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
Be the first to comment