ಮೋದಿಯವರ ಜನತಾ ಕರ್ಫ್ಯೂಗೆ ಜೈ ಎಂದ ಯಾದಗಿರಿ ಜಿಲ್ಲೆಯ ಜನತೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಯಾದಗಿರಿ:ಹೌದು ಜಗತ್ತಿಗೆ ಮಹಾಮಾರಿಯಂತೆ ಕಂಟಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನಿಡಿದ್ದರು ಇದಕ್ಕೆ ದೇಶಾದ್ಯಂತ ಉತ್ತಮವಾದ ವ್ಯಾಪಕ ಪ್ರಕ್ರಿಯೆ ವ್ಯಕ್ತವಾಗಿದೆ.

ಯಾದಗಿರಿ ಜಿಲ್ಲೆಯಾದ್ಯಂತ ಸಾರ್ವಜನಿಕರು ಜನತಾ ಕರ್ಫ್ಯೂ ಗೆ ಕೈ ಜೊಡಿಸಿದ್ದು ಹಲವು ನಗರಗಳು ಸೇರಿದಂತೆ ಪ್ರತಿ ಹಳ್ಳಿಗಳು ಸಂಪೂರ್ಣ ಸ್ಥಬ್ದವಾಗಿವೆ.

ಸುರಪುರ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಗಿದೆ ಇನ್ನು ಅಲ್ಲಲ್ಲಿ ತಗೆದಿದ್ದ ಅಂಗಡಿ ಮಾಲಿಕರಿಗೆ ನಗರಸಭೆ ಅಧಿಕಾರಿಗಳು ಬೇಟಿ ನೀಡಿ ಖಡಕ್ ಆದೇಶ ನೀಡಿ ಬಂದ್ ಮಾಡಿಸಿದ್ದಾರೆ.

ಬಸ್ ಗಳಿಲ್ಲದೆ ಬೀಕೊ ಎನ್ನುತ್ತಿರುವ ಬಸ್ ನಿಲ್ದಾಣದಲ್ಲಿ ಮಾಹಿತಿ ಇಲ್ಲದೆ ಹಳ್ಳಿಗಳಿಂದ ಬಂದ ಕೆಲ ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇನ್ನೂ ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಚಿತವಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಪ್ರತಿಯೊಬ್ಬರ ಗಮನಕ್ಕೂ ಬರಲಿ ಅನ್ನೋ ಉದ್ದೇಶದಿಂದ ವಿಶೇಷವಾಗಿ ನಮಾಜ್ ಸಮಯದಲ್ಲಿ ಮಸಿದಿಗಳಿಂದ ಧ್ವನಿವರ್ಧಕಗಳಲ್ಲಿ ಹೇಳುವ ಮೂಲಕ
ಡಂಗೂರಗಳನ್ನು ಸಾರಿ ಜನತಾ ಕರ್ಫ್ಯೂ ವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿದೆ.

 

Be the first to comment

Leave a Reply

Your email address will not be published.


*