ಜೀಲ್ಲಾ ಸುದ್ದಿಗಳು
ಜಾಹಿರಾತು
ಧಾರಾವಾಡ : ಜಿಲ್ಲಾ ಪಂಚಾಯತಿ ವತಿಯಿಂದ ಕರೋನಾ ವಿರುದ್ಧದ ಹೋರಾಟದಲ್ಲಿ ನಮ್ಮೊಡನೆ ಕೈ ಜೋಡಿಸಿ ಎಂಬ ವಾಕ್ಯದ ಅಡಿಯಲ್ಲಿ ಜನತಾ ಪೌಂಡೇಶನ ತಡಕೋಡ ಇವರ ನೇತೃತ್ವದಲ್ಲಿ ಶಾಸಕ ಅಮೃತ ದೇಸಾಯಿ ಉಪಸ್ಥಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಕೊರೋನಾ ವೈರಸ್ ಕುರಿತಂತೆ ಅರಿವು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವ್ಯಯಕ್ತಿಕ ಸ್ವಚ್ಛತೆ ಕಾಪಡಿಕೊಳ್ಳುವುದು, ಸಾಬೂನಿನಿಂದ ಕೈ ತೊಳೆಯುವುದು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಕೈ ವಸ್ತ್ರ ಉಪಯೋಗಿಸುವದು,
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರು ಸಲಹೆ ಪಡೆಯುವುದು ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜನತಾ ಪೌಂಡೇಶನ್ ಅಧ್ಯಕ್ಷ ವೀರಣ್ಣ ಹೊಸಮನಿ. ಪೌಂಡೇಶನ್ ಕಾರ್ಯದರ್ಶಿ ಈರಣ್ಣಾ ಬಾರಕೇರ. ಜಿಲ್ಲಾ ಪೋಲೀಸ್ ಉಪ ಅಧೀಕ್ಷರು ಧಾರವಾಡ ಗ್ರಾಮೀಣ ವೃತ್ತ ರವಿ ನಾಯಕ್. ಪ್ರಸಾದ್ ಫಣಿಕರ್. ಗರಗ ಪೋಲೀಸ್ ನೀರಿಕ್ಷಕರು ಈರಪ್ಪ ಕರಗನ್ನವರ. ಪಿಎಸ್ಐ ವಿಠ್ಠಲ ಕುರಬಗಟ್ಟಿ. ಶಿವನಗೌಡ ಪಾಟೀಲ. ಮಡಿವಾಳಪ್ಪ ಉಳ್ಳಾಗಡ್ಡಿ. ಯಲ್ಲಪ್ಪ ಹೊಳೆಪ್ಪನವರ. ಡಾ.ಆರ್.ಎನ್.ಪತ್ತಾರ. ಆಶಾ ಸಹಾಯಕಿ ನಾಗರತ್ನಾ. ಆರೋಗ್ಯ ಸಹಾಯಕ ಎಸ್.ಎಲ್. ಸುತಾರ. ಎಸ್.ಎಲ್. ಪಾದಗಟ್ಟಿ ಭಾಗವಹಿಸಿದ್ದರು.
Be the first to comment