ಜೀಲ್ಲಾ ಸುದ್ದಿಗಳು
ಜಾಹೀರಾತು
ಅಂಬಿಗ ನ್ಯೂಸ್ ಡೆಸ್ಕ್
ಸುರಪುರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಇಡೀ ದೇಶಕ್ಕೆ ಕರೆ ನೀಡಿರುವ ಜನತಾ ಕರ್ಪ್ಯೂ ವನ್ನು ಕ್ಷೇತ್ರದ ಜನತೆ ಬೆಂಬಲಿಸುವವರ ಜೊತೆಗೆ ಯಶಸ್ವಿಯಾಗಿ ಪಾಲಿಸಬೇಕೆಂದು ಶಾಸಕ ರಾಜುಗೌಡ ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಪತ್ರಿಕೆಯೊಂದಕ್ಕೆ ಶನಿವಾರ ದೂರವಾಣಿ ಮೂಲಕ ಮಾತನಾಡಿದ ಅವರು ದೇಶದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜನರಿಂದ ಜನರಿಗಾಗಿ ಜನರೇ ಹೇರುವ ಜನತಾ ಕರ್ಪ್ಯೂ ಮಾರ್ಚ್ 22ರಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಮಾಡುವಂತೆ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಜನತಾ ಕರ್ಪ್ಯೂ ಪಾಲಿಸಬೇಕು ಎಂದು ಕೋರಿದ್ದಾರೆ.
ಅಂದು ಯಾರೂ ಮನೆಯಿಂದ ಹೊರ ಬರಬೇಡಿ, ಮಾರುಕಟ್ಟೆಗೆ ಹೋಗ್ಬೇಡಿ, ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಲಭಿಸುತ್ತದೆ. ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಪ್ರಧಾನಿಯವರ ಆದೇಶ ಪಾಲಿಸಿ, ಜನತಾ ಕರ್ಫ್ಯೂ ಗೆ ಜೊತೆಯಾಗಿ ಮಹಾಮಾರಿ ಕೊರೋನಾ ತಡೆಗಟ್ಟಬೇಕಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರಕಾರ ಸಹ ಕೊರೋನಾ ವೈರಸ್ ಸೋಂಕು ತಡೆಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕೋರೋನಾ ವಿರುದ್ಧ ಹೋರಾಟ ನಡೆಸಿರುವುದು ಶ್ಲಾಘನೀಯ. ವಿಶ್ವವನ್ನೆ ಕಾಡುತ್ತಿರುವ ಕೊರೋನಾ ವೈರಸ್ ರೋಗವನ್ನು ತಡೆಯಲು ಜನಜಾಗೃತಿಯೇ ದಿವ್ಯ ಔಷಧವಾಗಿದೆ.
ಜನರು ಸ್ವಚ್ಛತೆ ಕಾಪಾಡಿಕೊಂಡು ಜನದಟ್ಟಣೆಯಿಂದ ದೂರ ಇರುವ ಮೂಲಕ ರೋಗ ಹರಡದಂತೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
Be the first to comment