ನಮ್ಮವರು ಹೆಮ್ಮೆಯವರು
ಜಾಹೀರಾತು
ಹುಕ್ಕೇರಿ: ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಹೆಮ್ಮೆಯ ಯೋಧÀ ಪ್ರಶಾಂತ ಕಲ್ಲಪ್ಪಾ ಬಾಗೇವಾಡಿ ಅವರಿಗೆ ಸೇನೆಯಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಲ್ಲಿ ಒಂದಾಗಿರುವ ‘ಸೇನಾ ಪದಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಮ್ಮು-ಕಾಶ್ಮೀರದ ಉದಮಪೂರದಲ್ಲಿ ದಿನಾಂಕ 27/02/2020ರಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರ ಭಾಗದ ಭೂ ಸೇನಾ ಮುಖ್ಯಸ್ಥ ಲೇಪ್ಟಿನೆಂಟ್ ಜನರಲ್ ಯೋಗೇಶಕುಮಾರ ಜೋಶಿ ಅವರಿಂದ ಸೇನಾಪದಕ ಪಡೆದಿರುತ್ತಾರೆ.
ಯೋಧರ ಪರಿಚಯ : ಬಡಕುಟುಂಬದ ತಂದೆ ಕಲ್ಲಪ್ಪಾ ತಾಯಿ ಅನ್ನಪೂರ್ಣಾ ಇವರ ಉದರದಲ್ಲಿ ದಿ: 01-03-1988ರಂದು ಜನಿಸಿದ ತೃತೀಯ ಸುಪುತ್ರ, ಬಡಕುಂದ್ರಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಸ್ವಗ್ರಾಮ ಯರಗಟ್ಟಿಯಲ್ಲಿ ಪ್ರೌಢ ಶಿಕ್ಷಣ, ಹುಕ್ಕೇರಿಯಲ್ಲಿ ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಬೆಳಗಾವಿಯಲ್ಲಿ ಪಡೆದು, ನಂತರ ದೇಶ ಸೇವೆಯ ಕಾಯಕಕ್ಕೆ ತಮ್ಮ 22ನೇ ವಯಸ್ಸಿನಲ್ಲಿ 26-03-2010ರಂದು ಸೇನೆಗೆ ಸೇರಿದರು.
ಬೆಂಗಳೂರಿನ ಮದ್ರಾಸ್ ಇಂಜನಿಯರ್ ಗ್ರುಪ್ & ಸೆಂಟರದಲ್ಲಿ ತರಬೇತಿ ಪಡೆದು ನಂತರ ಅರುಣಾಚಲ ಪ್ರದೇಶ, ಪಂಜಾಬ, ಪ್ರಸ್ತುತ್ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೇವೆ ಸಲ್ಲಿಸಲ್ಲಿಸುತ್ತಿದ್ದಾರೆ.
ಪ್ರಶಾಂತ ಅವರು ಗ್ರಾಮದ ಯುವಕರಿಗೆ ಪ್ರೀತಿಪಾತ್ರದವರಾಗಿದ್ದು. ತಮ್ಮ ಕುಟುಂಬದ ನಿರ್ವಹಣೆಯ ಜತೆಗೆ ದೇಶರಕ್ಷಣೆಯ ಕಂಕಣ ತೊಟ್ಟಿರುವ ಯೋಧ ಪ್ರಶಾಂತ ಬಾಗೇವಾಡಿ ಅವರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳನ್ನು ಸದೆಬಡೆದು ಸೇನೆಯಲ್ಲಿ ಅತ್ಯುನ್ನತವಾದ ಶೌರ್ಯ ಪ್ರಶಸ್ತಿಯಾದ ಸೇನಾ ಪದಕ ಪಡೆದು ಗ್ರಾಮಸ್ಥರು ಹೆಮ್ಮೆ ಪಡುವಂತೆ ದೇಶಸೇವೆಗೈದು., ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಕಳೆದ 10ವರ್ಷಗಳಿಂದ ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಪ್ರಶಾಂತ ಸೇನಾ ಪಾವಿತ್ರತೆ ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ.
Be the first to comment