ಶಿವಪುರ ದೇವೀರಮ್ಮ:ಶ್ರೀಜಗಜ್ಯೋತಿ ಬಸವಣ್ಣನ ಕಾಯಕತತ್ವ ಪಾಲನೆ,ಸ್ವಾಭಿ ಮಾನಿ,ಸ್ವಾವಲಂಬೀ ಆದಶ೯,ಯುವಪೀಳಿಗೆಯ ಜೀವನಕ್ಕೆ ಮಾಗ೯ದಶ೯ನ

ವರದಿ:ವಿ.ಜಿ.ವೃಷಭೇಂದ್ರ

ನಮ್ಮವರು ಹೆಮ್ಮೆಯವರು


ಜಾಹೀರಾತು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಕುಬ್ಜ ವೃದ್ಧೆ ದೇವೀರಮ್ಮಳು ಜಗಜ್ಯೋತಿ ಬಸವಣ್ಣನ ಕಾಯಕ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದ ಹೆಣ್ಣಾಗಿ ಸ್ವಾವಲಂಭೀ ಜೀವನ ನಡೆಸುವ ಮೂಲಕ ಯಶಸ್ವೀ ಆದಶ೯ ಜೀವನಕ್ಕೆ ನಿದಶ೯ನವಾಗಿದ್ದಾರೆ.ಯುವ ಪೀಳಿಗೆಗೆ ಮಾಗ೯ದಶ೯ಕವಾಗಿದ್ದಾರೆ ದೇವೀರಮ್ಮ.ಸುಮಾರು 75ವಸಂತಗಳನ್ನು ದಾಟಿದ್ದು ತನ್ನ ಬಟಾಣಿ ಉರುಕಡ್ಲಿ ವ್ಯಾಪಾರದಲ್ಲಿ 55ವಸಂತಗಳನ್ನು ವೃದ್ಧೆ ದೇವೀರಮ್ಮ ಸವೆಸುವ ಮೂಲಕ ಬಸವಣ್ಣನ ಕಾಯಕ ತತ್ವವನ್ನು ತನ್ನ ಜೀವಿತಾವಧಿಯಲ್ಲಿ ಪಾಲಿಸುತ್ತಲೇ ಬಂದಿದ್ದಾರೆ. ವಯೋಸಹಜ ಅಂಗಾಗಳ ಮಂದಗತಿಯ ಸ್ಪಂದನೆಯಲ್ಲಿಯೂ ಬಲು ಚಟುವಟಿಕೆಯಿಂದಲೇ ತಾನೋವ೯ ಯಶಸ್ವೀ ವ್ಯಾಪಾರಿ ಎಂಬ ಹೆಗ್ಗಳಿಕೆಯನ್ನು ಸ್ವಾವಲಂಭಿತನದ ಮೂಲಕ ವ್ಯಕ್ತಪಡಿಸುತ್ತಾರೆ ವೃದ್ಧೆ ದೇವೀರಮ್ಮ.

ಜಾಹೀರಾತು

ಈ ಇಳಿವಯಸ್ಸಿನಲ್ಲಿಯೂ ಅವರ ಸ್ವಾಭಿಮಾನದ ಸ್ವಾಲಂಭಿತನ ಪುಟಿದೇಳುತ್ತಿರುವುದು ತುಂಬಾ ಸೋಜಿಗದ ಸಂಗತಿಯಾಗಿದೆ. ಇದು ಆಧುನಿಕ ಯುಗದ ಸೋಂಬೇರಿ ನಿರುಧ್ಯೋಗಿ ಯುವ ಪೀಳೆಗೆಯನ್ನು ನಾಚಿಸುವಂತಿದೆ.ವೀರಶೈವ ಲಿಂಗಾಯಿತ ವಗ೯ದ ಬಡತನದ ಕುಟುಂಬದಲ್ಲಿ ಹುಟ್ಟಿ ಬೇಳೆದು.ಬಡ ಕುಟುಂಬದಲ್ಲಿಯೇ ದೇವೀರಮ್ಮ ಮದುವೆಯಾದ ಕಾರಣ.ಜೀವನ ಸಾಗಿಸಲು ಮಧುವೆಯಾದ ಕೆಲವೇ ವಷ೯ಗಳಿಂದಲೇ ಬಟಾಣೆ. ಉರುಕಡ್ಲಿ.ಕರಿದ ಸೇಂಗಾಬೀಜ.ಕಡ್ಲೆ ಭರ್ಪೆ.ಇತ್ಯಾದಿ ಸಿಹಿಖಾಧ್ಯಗಳನ್ನು ಮಾರೋ ವ್ಯಾಪಾರ ಪ್ರಾರಂಭಿಸಲಾಯಿತು. ತಿನಿಸುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಅದನ್ನು ತನ್ನ ಸೊಂಟದಲ್ಲಿಟ್ಟು ಕೊಂಡು ಹತ್ತಾರು ಕಿಲೋಮೀಟರ್ ಅಂತರದಲ್ಲಿರೋ ಕೂಡ್ಲಿಗಿ ಪಟ್ಟಣಕ್ಕೆ ತೆರಳಿ ಪ್ರಮುಖ ಶಾಲಾ ಕಾಲೇಜುಗಳ ಕಾಂಪೋಂಡಿನ ಹೊರಭಾಗಕ್ಕೆ ಆತುಕೊಂಡೇ ವ್ಯಾಪಾರ ಮಾಡುತ್ತಾಳೆ ಈ ವೃದ್ಧೆ. ಸುಮಾರು 45ವಯೋ ಮಾನದವರು ಕೂಡ ತಮ್ಮ ಬಾಲ್ಯದ ಶಾಲಾ ಅವದಿಯಲ್ಲಿ ದೇವಿರಮ್ಮಳಿಂದ ತಾವು ಖರೀದಿ ಮಾಡಿ ತಿಂದ ತಿನಿಸುಗಳು ಮತ್ತು ಅಜ್ಜಿಯ ಸಜ್ಜನಿಕೆ ವ್ಯಾಪಾರವನ್ನು ಮೆಲುಕು ಆಕುವವರು ಕೂಡ್ಲಿಗಿ ಪಟ್ಟಣ ಮತ್ರವಲ್ಲ ತಾಲೂಕಿನ ಮೂಲೆ ಮೂಲೆಗಳಲ್ಲಿ ಅಸಂಖ್ಯಾತ ಜನ ದೊರಕುತ್ತಾರೆ.ಹಲವು ವಷ೯ಗಳ ಹಿಂದೆ ದೇವೀರಮ್ಮಳ ಪತಿಯನ್ನು ವಿಧಿ ತನ್ನತ್ತ ಕರೆದುಕೊಂಡಿದೆ.ಏಕೈಕ ಪುತ್ರ ನಾಗರಾಜನನ್ನು ದೇವೀರಮ್ಮ ಬುದ್ದಿವಂತನನ್ನಾಗಿ ಮಾಡಿದ ಫಲವಾಗಿ ಆತನ ಮೂವರು ಮಕ್ಕಳು ಅಂದರೆ ದೇವೀರಮ್ಮಳ ಮೊಮ್ಮಕ್ಕಳು ಈಗ ವೈಧ್ಯ.ಶಿಕ್ಷಕ. ಇಂಜಿನಿಯರ್ ಆಗಿದ್ದಾರೆ. ಆದರೂ ಕೂಡ ತಾನು ಮಾತ್ರ ತನ್ನ ವ್ಯಾಪಾರವನ್ನು ಬಿಟ್ಟಿಲ್ಲ.ಕಾರಣ ಅವಳಲ್ಲಿರುವ ಸ್ವಾಭೀಮಾನದ ಕಿಚ್ಚು ಸದಾಜಾಗೃತವಾಗಿರೋದು. ಬಸವಣ್ಣನ ಕಾಯಕ ತತ್ವವನ್ನು ಪಾಲಿಸುತ್ತಿರುವುದೇ ಆಗಿದೆ.ಮನೆಯಲ್ಲಿ ದುಡಿಯುವ ಕೈಗಳು ತುಂಬಾ ಇದ್ದು ಆಥಿ೯ಕ ಪರಿಸ್ಥಿತಿ ಉತ್ತಮ ಸ್ಥಿತಿಗೆ ಬಂದಿದೆ.ಆದರೂ ಕೂಡ ವೃದ್ಧಾವಸ್ಥೆಯಲ್ಲಿಯೂ ಸ್ವಾಭೀಮಾನದ ಹೆಣ್ಣಾಗಿ ಬಾಳಲು ಇಚ್ವಿಸುವ ಸ್ವಾವಲಂಭೀ ವೃದ್ಧೆ ದೇವೀರಮ್ಮಳಿಗೆ ವಂದನೆಗಳು ಅಭಿನಂದನೆಗಳನ್ನು ಸಲ್ಲಿಸಲೇಬೇಕಾಗುತ್ತೆ.ಸಕಾ೯ರ ಕೊಡೋ ಒಂದು ಸಾವಿರದ ವೃದ್ಧಾಪ್ಯ ವೇತನದ ಹಣವನ್ನು ತನ್ನ ಪುಟ್ಟವ್ಯಾಪಾರಕ್ಕೆ ಬಂಡವಾಳವನ್ನಾಗಿಸಿಕೊಂಡು ಬಂದ ಅಲ್ಪಲಾಭದಲ್ಲಿಯೇ ಮಗ ಹಾಗೂ ಮೊಮ್ಮಕ್ಕಳ ತುಂಬು ಕುಟುಂಬದೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾಳೆ ದೇವೀರಮ್ಮ. ಈಗ ವಯೋ ಸಹಜ ಅನಾರೊಗ್ಯ ಹಾಗು ಅಂಗಾಂಗಳ ಮಂದಗತಿಯ ಸ್ಪಂಧನೆಯಿಂದಾಗಿ ಬೇರೆಡೆ ತೆರಳಲಾಗುತ್ತಿಲ್ಲ.

ಶಿವಪುರ ಗ್ರಾಮದಲ್ಲಿರುವ ಶ್ರೀ ಮಾಯಮ್ಮ ದೇವಿ ದೇವಸ್ಥಾನದ ಅಂಗಳದಲ್ಲಿಯೇ ತನ್ನ ಚಿಕ್ಕ ಪುಟ್ಟಿಯಲ್ಲಿಯೇ ಬಟಾಣೆ.ಉರುಕಡಲೆ.ಉರಿದ ಸೂಯ೯ಕಾಂತೀಬೀಜ.ಒಣದ್ರಾಕ್ಷಿ .ಕರಿದ ಶೇಂಗಾಬೀಜ. ಇತ್ಯಾದಿ ತಾನೇ ತಯಾರಿಸಿದ ಕಚ್ಚಾ ತಿನಿಸುಗಳು ಹಾಗೂ ಅಂಗಡಿಗಳಲ್ಲಿ ಕರೀದಿಸಿದ ಕಡ್ಲೆ ಬರ್ಪೆ.ಇತ್ಯಾದಿ ತಿನಿಸುಗಳನ್ನು ಕಡಿಮೆ ಲಾಭದಲ್ಲಿಯೇ ಮಾರುತ್ತಿದ್ದಾಳೆ.ಶಾಲಾ ಬಡ ಮಕ್ಕಳನ್ನು ಗುರುತಿಸಿ ಅವರನ್ನು ಆತ್ಮೀಯತೆಯಿಂದ ತನ್ನತ್ತ ಸೆಳೆದುಕೊಂಡು ಅವರಿಗೆ ಉಚಿತವಾಗಿ ತಿನ್ನಲು ತಿನಿಸು ಕೊಡೋ ಮೂಲಕ ಅವರೆಲ್ಲರಿಗೂ ಮಮತೆಯ ಮಾತೆಯಾಗಿದ್ದಾಳೆ.ಇಂತಹ ಬಾಲ್ಯದ ಸವಿ ಸವಿ ನೆನಪು ಹಾಕೋ ಸಾವಿರಾರು ಯುವಕರು ಯುವತಿಯರು ಸಾಕ್ಷಿಯಾಗಿ ಸಿಗುತ್ತಾರೆ.ಶಾಲೆಯ ಮೆಟ್ಟಿಲು ಹತ್ತದ ಕುಬ್ಜದೇಹದ 75ವಷ೯ದ ಹಣ್ಣು ಹಣ್ಣು ವೃದ್ಧೆ ದೇವೀರಮ್ಮಳ ಸ್ವಾಭಿಮಾನದ ನಡೆಯು ಮನೆಯ ಕೆಲ ಸದಸ್ಯರಿಗೆ ಇರಿಸು ಮುರಿಸು ತಂದರೆ ಕೆಲವು ಸದಸ್ಯರಿಗೆ ಹಾಗೂ ನೆರ ಹೊರೆಯವರಿಗೆ ಮಾಗ೯ದಶ೯ನ ಉತ್ತೇಜನ ವಾಗಿದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.ದೇವಸ್ಥಾನದ ಅಂಗಳದಲ್ಲಿರುವ ಹೂವು ಹಣ್ಣು ತೆಂಗಿನಕಾಯಿ ವ್ಯಾಪರಿ ಕೊಟ್ರಮ್ಮ ಹಾಗು ಇತರೆ ವ್ಯಾಪಾರಸ್ಥರು ತಮಗೆ ತಿಳುವಳಿಕೆ ಬಂದಾಗಿನಿಂದಲೂ ದೇವೀರಮ್ಮಳ ಸ್ವಾವಲಂಭೀ ಜೀವನವನ್ನು ನಿತ್ಯ ಕಣ್ತುಂಬಿಸಿಕೊಂಡವರಾಗಿದ್ದಾರೆ.ದೇವಿರಮ್ಮಳ ಸರಳತೆ ಸ್ವಾಭಿಮಾನ,ಸ್ವಾವಲಂಭೀ ಜೀವನ ಸಾವಿರಾರು ಜನರ ಜೀವನಕ್ಕೆ ಉತ್ತೇಜನ ತುಂಬಿದೆ ಹಾಗೂ ಇನ್ನೂ ತುಂಬುತ್ತಲೇ ಇದೆ.ಇದಕ್ಕೆ ಜೀವಂತ ಸಾಕ್ಷಿಯಾಗಿ ಸಾವಿರಾರು ಜನರಿದ್ದರೆ ಈ ಮೂಲಕ ಕಾಯದಲ್ಲಿ ಕುಬ್ಜರಾಗಿರುವ ದೇವೀರಮ್ಮ ಕಾಯಕದಲ್ಲಿ. ಬೌದ್ಡಿಕವಾಗಿ.ನೈತಿಕವಾಗಿ ಆದಶ೯ದ ಜೀವನ ಮೆರೆದು. ಅಜಾನುಭಾಹು ವ್ಯಕ್ತಿತ್ವವನ್ನು ಮೆರೆದಿದ್ದರೆ.ಸಂಘ ಸಂಸ್ಥೆಗಳು ಸ್ಥಳೀಯ ಆಡಳಿತ.ತಾಲೂಕು ಆಡಳಿತ ಇಂತಹ ಆದಶ೯ವಾದಿ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿ ಸತ್ಕರಿಸಬೇಕಿದೆ. ಸ್ಥಳೀಯ ಹಾಗೂ ತಾಲೂಕು ಸಕಾ೯ರದ ಆಡಳಿತಾಧಿಕಾರಿಗಳು ಅವರಿಗೆ ಮೂಲಭೂತ ಸೌಕಯ೯ಗಳನ್ನು ತುತಾ೯ಗಿ ನೀಡಬೇಕಿದೆ.ಈ ಮೂಲಕ ಅವರನ್ನು ಗೌರವಿಸಬೇಕಿದೆ. ಸವ೯ಮಹಿಳೆಯರ. ನಾಗರೀಕರ.ಯುವಪೀಳಿಗೆಯ ಪರವಾಗಿ ವಂದನೆಗಳನ್ನು ಅಭಿನಂದನೆಗಳನ್ನು ದೇವೀರಮ್ಮಳಿಗೆ ಈ ಮೂಲಕ ಅಪಿ೯ಸಲಾಗುತ್ತಿದೆ.


Be the first to comment

Leave a Reply

Your email address will not be published.


*