ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಡೆದ ಅಧಿಕಾರಿಗಳು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಅಂಬಿಗ ನ್ಯೂಸ್ ಡೆಸ್ಕ್

 

ಸುರಪುರ:ತಾಲೂಕಿನ ಆಲ್ದಾಳ ಗ್ರಾಮದ ಮನೆಯೊಂದರಲ್ಲಿ ಬಾಲ್ಯವಿವಾಹ ನಡೆಯುತ್ತಿದೆ ಎಂದು ಮಕ್ಕಳ ಸಹಾಯವಾಣಿ 1098 ನಂಬರ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರಿಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ವಿವಾಹ ನಡೆಯುತ್ತಿದ್ದ ಮನೆಗೆ ಭೇಟಿ ನೀಡಿ ವಿವಾಹ ನಡೆಯದಂತೆ ತಡೆಹಿಡಿದಿರುವ ಘಟನೆ ನಡೆದಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಳಾದ ಅಶೋಕ ರಾಜನ್ ಹಾಗೂ ದಶರಥ ನಾಯಕ (ಸಾಂಸ್ಥಿಕ) ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆಯುತ್ತಿದ್ದ ಎರಡು ಜೋಡಿಗಳ ವಿವಾಹ ಕಾರ್ಯಕ್ರಮದಲ್ಲಿ ಒಂದು ಜೋಡಿಯ ಹುಡುಗ ಹಾಗೂ ಹುಡುಗಿ ಇಬ್ಬರು ಅಪ್ರಾಪ್ತ ವಯಸ್ಸಿನವರಾಗಿರುವುದು ಕಂಡುಬಂತು, ವಿವಾಹ ನಡೆಯುತ್ತಿದ್ದ ಬಾಲಕನಿಗೆ 19 ವರ್ಷ ಹಾಗೂ ಬಾಲಕಿಗೆ ಹತ್ತು ವರ್ಷ ಇರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ವಶಕ್ಕೆ ಪಡೆದು ನಂತರ ಬಾಲ್ಯವಿವಾಹ ನಡೆಸದಂತೆ ತಿಳಿಸಿದರು.
(ಸಾಂಸ್ಥಿಕ) ಅಧಿಕಾರಿ ದಶರಥ್ ನಾಯಕ್ ಅವರು ಮಾತನಾಡಿ ಸರಕಾರದ ಕಾನೂನು ಪ್ರಕಾರ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷಗಳು ತುಂಬಿರಬೇಕು ಆದರೆ ಇಲ್ಲಿ ನಡೆಯುತ್ತಿರುವ ವಿವಾಹ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದ್ದು ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಶಿಕ್ಷೆ ಮತ್ತು ಬಾಲ್ಯವಿವಾಹ ಗಳಿಂದ ಜರುಗುವ ದುಷ್ಪರಿಣಾಮಗಳು ಕುರಿತು ಬಾಲಕ ಮತ್ತು ಬಾಲಕಿಯ ತಂದೆ-ತಾಯಿ ಪೋಷಕರು ಹಾಗೂ ಸ್ಥಳದಲ್ಲಿ ಊರಿನ ಪ್ರಮುಖರಿಗೆ ತಿಳಿಸಿ ಮನವರಿಕೆ ಮಾಡಿಕೊಟ್ಟರು.

ನಂತರ ಬಾಲ್ಯವಿವಾಹ ಮಾಡದಂತೆ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು, ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿದ್ಧಾರೂಢ ಮಹಿಳಾ ಮೇಲ್ವಿಚಾರಕಿ ಸರೋಜಿನಿ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು..

Be the first to comment

Leave a Reply

Your email address will not be published.


*