ಕಮಿಷನರ್ ಆದೇಶಕ್ಕೆ ಕ್ಯಾರೆ ಎನ್ನದ ಜನತೆ ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ವ್ಯಾಪಾರ ಎಂದಿನಂತೆ ನಡೆದಿತ್ತು.

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಜಾಹೀರಾತು

ಅಂಬಿಗ ನ್ಯೂಸ್ ಡೆಸ್ಕ್

ಸುರಪುರ ಕರೋನಾ ವೈರಸ್ ಇಡೀ ವಿಶ್ವವನ್ನೇ ನಡುಗಿಸುತ್ತಿದ್ದು ಸುರಪುರಕ್ಕೆ ಅದರ ಬಿಸಿ ಜೋರಾಗಿದೆ ತಟ್ಟಿದೆ ತಾಲ್ಲೂಕಿನಲ್ಲಿ ವಿದೇಶದಿಂದ ಬಂದಿದ್ದ 14 ಜನರನ್ನು ವೈದ್ಯರು ನಿತ್ಯವೂ ತಪಾಸಣೆ ಮಾಡುತ್ತಿದ್ದಾರೆ.

ಪಕ್ಕದ ಜಿಲ್ಲೆ ಕಲಬುರ್ಗಿಯಲ್ಲಿ ಒಬ್ಬರು ಮೃತರಾಗಿ ಇಬ್ಬರು ಸೊಂಕಿನಿಂದ ಬಳಲುತ್ತಿದ್ದಾರೆ.

ಇದರಿಂದ ಯಾದಗಿರಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ, ಅದರಂತೆ ಸುರಪುರ ಸುರಪುರ ನಗರದಲ್ಲಿ ಹೋಟೆಲ್ ರೆಸ್ಟೋರೆಂಟ್ ಅಂಗಡಿ-ಮುಂಗಟ್ಟುಗಳನ್ನು ಈ ತಿಂಗಳು 31 ರವರೆಗೆ ಮುಚ್ಚಲು ನಗರಸಭೆ ಕಮಿಷನರ್ ಆದೇಶ ಮಾಡಿದ್ದಾರೆ.

ಆದರೆ ಈ ಆದೇಶದ ಪರಿವೇ ಇಲ್ಲದಂತೆ ಬೀದಿಬದಿಯಲ್ಲಿ ಹಣ್ಣುಗಳು ತರಕಾರಿ ಮಾರಾಟ ಮಾಡುವವರು ತಮ್ಮ ವ್ಯಾಪಾರ ಎಂದಿನಂತೆ ನಡೆಸಿದರು.

ಕೆಲವು ಹೋಟೆಲ್ಗಳು ಮುಚ್ಚಿದ್ದ ನ್ನು ಹೊರತುಪಡಿಸಿದರೆ ಬಹುತೇಕ ಸಣ್ಣ ಬಜಿ ಬಂಡಿ ಪಾನಿಪುರಿ ಮತ್ತು ಸಣ್ಣ ಹೋಟೆಲ್ಗಳು ತೆರೆದಿದ್ದವು,

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರವು ಇಂದು ಜನರಿಲ್ಲದೆ ಖಾಲಿ ಖಾಲಿ ಎನಿಸಿದರೂ ಮಾಂಸದ ವ್ಯಾಪಾರಿಗಳು ವ್ಯಾಪಾರ ನಡೆಸಿದ್ದರಿಂದ ಜನರ ಸುರಕ್ಷತೆ ಹಿತದೃಷ್ಟಿಯಿಂದ ಬಂದ್ ಮಾಡುವುದು ಒಳಿತು ಎಂದು ಜನರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ನಗರಸಭೆಯ ಅಧಿಕಾರಿಗಳು ಈ ಕುರಿತು ಸಮಗ್ರವಾಗಿ ಜಾಗೃತಿ ಮೂಡಿಸಬೇಕಾಗಿದೆ ಆದರೆ ಸಾಕಷ್ಟು ಮಾಹಿತಿ ಮತ್ತು ಸೂಕ್ತ ನಿರ್ದೇಶನ ನೀಡದೇ ಇರುವುದರಿಂದ ಈ ರೀತಿ ಹಣ್ಣು ತರಕಾರಿ ವ್ಯಾಪಾರ ಮತ್ತು ಹೋಟೆಲ್ಗಳು ತೆಗೆದಿವೆ ಎಂದು ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನ ಕುರಿತು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದುವರೆಗೆ ಅತಿ ಹೆಚ್ಚಿನ ಕಾಳಜಿ ತೋರಿದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ ಜನಜಾಗೃತಿ ಮತ್ತು ಎಲ್ಲಾ ಇಲಾಖೆಗಳ ಸಭೆ ನಡೆಸಿ ಜಾಗೃತಿಗೆ ಮುಂದಾಗಿದ್ದಾರೆ ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ ಆದರೆ ನಗರಸಭೆಯವರು ಮಾತ್ರ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ,
ಕೇವಲ ನಗರಸಭೆಯ ವಾಹನಗಳಲ್ಲಿ ಕೋರೋನಾ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಹೊರತುಪಡಿಸಿ ಇನ್ನುಳಿದಂತೆ ಯಾವದೇ ಜಾಗೃತಿ ಕಾರ್ಯಕ್ರಮಗಳನ್ನು ಮಾಡದೆ ಕೈತೊಳೆದುಕೊಂಡಿದ್ದಾರೆ .

ನಗರಸಭೆಯಿಂದ ಅಂಗಡಿಗಳಿಗೆ ಹಣ್ಣು ತರಕಾರಿ ವ್ಯಾಪಾರಿಗಳ ಬಳಿಗೆ ಹೋಗಿ ಖಡಕ್ಕಾಗಿ ಆದೇಶ ಮಾಡುವುದು ಜನಸಂದಣಿ ಇರುವ ಸ್ಥಳಗಳಲ್ಲಿ ಪ್ರಚಾರ ನಡೆಸಿ ಜನಜಾಗೃತಿ ಮಾಡುವುದು ನಗರದಲ್ಲಿ ಕರಪತ್ರಗಳ ಮೂಲಕ ಪ್ರಭಾತಪೇರಿ ಮೂಲಕ ಪ್ರಚಾರ ನಡೆಸುವುದು ಯಾವುದನ್ನೂ ಮಾಡದ ಅಧಿಕಾರಿಗಳು ಇರುವುದು ನೋಡಿದರೆ ಇವರ ಬೇಜವಾಬ್ದಾರಿತನ ಏನೆಂದು ಜನತೆ ಪ್ರಶ್ನಿಸುವಂತಾಗಿದೆ..

Be the first to comment

Leave a Reply

Your email address will not be published.


*