ಜಾಹೀರಾತು
ಕೆಂಬಾವಿ: ಜೀಲ್ಲಾಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಕೋಳಗೇರಿಯವರ ನೇತೃತ್ವದಲ್ಲಿ ಹಡಪದ ಅಪ್ಪಣ್ಣ ಸೇವಾ ಸಂಘ ಜಿಲ್ಲಾ ಘಟಕ ಯಾದಗಿರಿ ಚರಬಸವೇಶ್ವರ ಗದ್ದಿಗೆ ಶಹಾಪುರದಲ್ಲಿ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು.
ಹಡಪದ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಸಭೆಗೆ ಆಗಮಿಸಿದ ಸಂಘದ ಪಧಾದಿಕಾರಿಗಳಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲೆಯ ವೃತ್ತಿ ಬಾಂಧವರಿಗೆ ಕರೋನಾ ವೈರಸ್ ಬಗ್ಗೆ ಸುರಕ್ಷಿತವಾಗಿ ಇರುವಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಗ್ಲೌಸ್ ಮತ್ತು ಮಾಸ್ಕ್ ಗಳನ್ನು ಧರಿಸಲು ಹೇಳಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂಪಣ್ಣ ಮಾಲಗತ್ತಿ, ಶಿವಾನಂದ ಕಕ್ಕೇರಿ, ನೀಲಕಂಠ ಕಕ್ಕೇರಿ, ಬಲವಂತ ಮುದನೂರ, ಮಲ್ಲಿಕಾರ್ಜುನ ವಡಿಗೇರಿ, ಪರಮಾನಂದ ಯಕ್ತಪೂರ್, ಸಿದ್ದು ಕೊಳಗೇರಿ, ಮಾಂತು ಯಾಳಗಿ, ಶರಣಪ್ಪ ಅಮ್ಮಾಪುರ, ಮಲ್ಲು ಮದ್ರಿಕಿ, ಮಲ್ಲಿಕಾರ್ಜುನ್ ಸಗರ್, ಬಡೇಸಾಬ್ ಹೋಗಿ, ಶೇಖಪ್ಪ ಗೋಗಿ, ಆದಪ್ಪ ದೇವಾಪುರ, ಪ್ರಭು ಬೊಮ್ಮನಹಳ್ಳಿ, ಮಲ್ಲು ಜಾಲಿಬೆಂಚಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment