ಜೀಲ್ಲಾ ಸುದ್ದಿಗಳು
ಜಾಹೀರಾತು
ಬಳ್ಳಾರಿ ಜಿಲ್ಲೆ- ಕೂಡ್ಲಿಗಿ ಪೊಲೀಸರು ನ್ಯಾಯಾಲ ನೀಡಿದ ಆದೇಶಕ್ಕೆ ಮನ್ನಣೆ ನೀಡುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ದಿಕ್ಕರಿಸುತ್ತಿರುವ ಕೂಡ್ಲಿಗಿ ಪೊಲೀಸ್ ಅಧಿಕಾರಿಗೆ ದಿಕ್ಕಾರ ಎಂದು ಹಿರಿಯ ನ್ಯಾಯಾವಾದಿ ಎಲ್.ಎಸ್.ಬಷೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಬಳ್ಳಾರಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕ್ಷಿದಾರ ಟಿ.ಇಬ್ರಾಹಿಂ ಖಲೀಲ್ 20016ರಲ್ಲಿ ಗುತ್ತಿಗೆ ಆಧಾರದಂತೆ ಸಹಾಯಕ ಲೈನಚ ಮ್ಯಾನ್ ಆಗಿ ಕೆಸಲ ಮಾಡುತ್ತಿದ್ದು.ಹನಸಿ ಗ್ರಾಮದಲ್ಲಿರುವ 66/11ಕೆವಿ ಸಾಮಥ್ಯ೯ದ ವಿದ್ಯುತ್ ಸಾಧನದ ಹತ್ತಿರ ಕೆಲಸ ಮಾಡುವಸಂದಭ೯ದಲ್ಲಿ.ಖಲೀಲ್ ಗೆ ಭಾರೀ ವಿದ್ಯುತ್ ಅಪಘಾತಕ್ಕೊಳಗಾಗಿದ್ದು ಅದಕ್ಕೆ ಆಗ ಇದ್ದ ಎಇಇ ಮೋಟ್ಲಾನಾಯ್ಕ ಪ್ರಮುಖ ಕಾರಣನಾಗಿದ್ದಾನೆ.ಈಕುರಿತು ಖಲೀಲ್ ಆರೋಪಿಸಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲಾಗಿದೆ.ಖಲೀಲ ನೀಡಿದ ದೂರಿನಂತೆ ದೂರುದಾಖಲಿಸಿಕೊಳ್ಳಲಾಗಿದೆ.ಆದರೆ ಕೂಡ್ಲಿಗಿ ಪೊಲೀಸರು ಬ್ರಷ್ಠಾಚಾರಕ್ಕೊಳಗಾಗಿ ಆರೊಪ ಪಟ್ಟಿಯಲ್ಲಿ ಪ್ರಮುಖ ಆರೋಪಿ ಮೋಟ್ಲಾನಾಯ್ಕ ಹೆಸರು ಕೈಬಿಡಲಾಗಿದೆ ಎಂದು ನ್ಯಾಯವಾದಿ ಎಲ್.ಎಸ್.ಬಷೀರ್ ಅಹಮ್ಮದ್ ದೂರಿದ್ದಾರೆ.
ಜಾಹೀರಾತು
ಹಗರಿಬೊಮ್ಮನಹಳ್ಳಿ ನ್ಯಾಯಾಲಯ ಕೂಡ್ಲಿಗಿ ಪೊಲೀಸರಿಗೆ ದೂರುದಾರರಿಂದ ಮರುಹೇಳಿಕೆ ಪಡೆಯಲು ಸೂಚಿಸಲಾಗಿದೆ.ಪ್ರಮುಖ ಆರೋಪಿ ಮೋಟ್ಲಾನಾಯ್ಕ ಹೆಸರನ್ನು ಸೇರಿಸಿ ಆರೋಪ ಪಟ್ಟಿಯನ್ನು ನೀಡುವಂತೆ ಮತ್ತು ಕಕ್ಷಿದಾರನಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮಕ್ಕಾಗಿ ನ್ಯಾಯಾಲಯ ಕೂಡ್ಲಿಗಿ ಪೊಲೀಸರಿಗೆ ಜೂಲೈ2018ರಲ್ಲಿಯೇ ಆದೇಶಿಸಿದೆ.2ವಷ೯ಕಳೆದರೂ ಸಹ ಕೂಡ್ಲಿಗಿ ಪೊಲೀಸರು ಆದೇಶ ಪಾಲನೆ ಮಾಡದೇ ನಿಲ೯ಕ್ಷಿಸಿ.ದಿಕ್ಕರಿಸಿದ್ದಾರೆ. ದೂರದಾರ ಖಲೀಲ್ ರನ್ನು ಕೂಡ್ಲಿಗಿ ಪೊಲೀಸರು ವಿನಾಕಾರಣ ಠಾಣೆಗೆ ಕರೆಸುವುದು ಅಲೆದಾಡಿಸುವುದು ಮಾಡಿದ್ದಾರೆ. ಈ ಸಂಬಂಧಿಸಿದಂತೆ ಪೊಲೀಸ್ ಉನ್ನತಾಧಿಕಾರಿಗಳು ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಶಿಸ್ಥು ಕ್ರಮಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ಪ್ರಮುಖ ಆರೋಪಿ ಮೋಟ್ಲಾನಾಯ್ಕ ಹೆಸರನ್ನು ಕೈಬಿಟ್ಟ ಕೂಡ್ಲಿಗಿ ಠಾಣೆಯ ಅಂದಿನ ಪಿಎಸ್ಐ ಹಾಲೇಶ್.ಸಿಪಿಐ ನಯೂಮ್ ಅಹಮದ್ ರನ್ನು ಮತ್ತು ನ್ಯಾಯಾಲಯದ ಆದೇಶವನ್ನು ನಿಲ೯ಕ್ಷಿಸಿ ದಿಕ್ಕರಿಸಿರುವ ಹಾಲಿ ಪಿಎಸ್ಐ ತಿಮ್ಮಪ್ಪರನ್ನು ಶೀಘ್ರವೇ ಅಮಾನತ್ತು ಗೊಳಿಸಿ ಶಿಸ್ಥುಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.ಈ ಸಂಬಂಧ ಪೊಲೀಸ್ ವರಿಷ್ಟಾಧಿಕಾರಿಗಳಲ್ಲಿ ಹಾಗೂ ಉನ್ನತಾಧಿಕಾರಿಗಳಲ್ಲಿ ತಾವು ಮನವಿ ಮಾಡಿರುವುದಾಗಿ ದೂರುದಾರ ಟಿ.ಇಬ್ರಾಹೀಂ ಖಲೀಲ್.ಅವರ ತಾಯಿ ಶ್ರೀಮತಿ ಮೆಹಬೂಬಿ ಮತ್ತು ನ್ಯಾಯವಾದಿ ಎಲ್.ಎಸ್.ಬಷೀರ್ ಅಹಮದ್ದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ವಕೀಲರಾದ ರಾಮಪ್ಪ.ಅಂಜಿನಪ್ಪ.ದಲಿತಮುಖಂಡ ಸುಧೀರ್.ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment