ರಾಜ್ಯ ಸುದ್ದಿಗಳು
ಜಾಹೀರಾತು
ರಾಜ್ಯಾದ್ಯಂತ ಕರೋನಾ ವೈರಸ್ ಶೀಘ್ರಗತಿಯಲ್ಲಿ ಹರಡುತ್ತಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಕರೋನಾ ವೈರಸ್ ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ತುರ್ತು ಪರೀಕ್ಷೆಯನ್ನು ಘೋಷಣೆ ಮಾಡಿದೆ .ಅಷ್ಟರ ಒಳಗೆ ಕರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಾರದಿದ್ದರೆ ಈ ತುರ್ತು ಪರಿಸ್ಥಿತಿ ಮುಂದುವರಿಯುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ .
ಜಾಹೀರಾತು
ಏಪ್ರಿಲ್ ಮೇ ತಿಂಗಳಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿಗಳು ಮುಕ್ತಾಯಗೊಳ್ಳುತ್ತಿರುವ ಕಾರಣ ಮೇ ಅಂತ್ಯದ ಒಳಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕಾಗುತ್ತದೆ .ಅಷ್ಟರ ಒಳಗೆ ಕರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬರಬೇಕು ಅದಕ್ಕೆ ಸಂಬಂಧಿಸಿದ ಲಸಿಕೆ ತಂದಿಡಿ ಬೇಕಾಗಿರುತ್ತದೆ .
ಕಾರಣ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ,ಲಸಿಕೆ ಅಷ್ಟರೊಳಗೆ ಲಭ್ಯವಾಗದಿದ್ದರೆ ,ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವ ಅನಿವಾರ್ಯತೆ ತಲೆದೋರುತ್ತದೆ .
ಜಾಹೀರಾತು
ಕಾರಣ ವೈರಸ್ ನಿಯಂತ್ರಣಕ್ಕೆ ಬಾರದೆ ಲಸಿಕೆಯ ಲಭ್ಯತೆ ಇಲ್ಲದೇ ಇದ್ದ ಸಂದರ್ಭದಲ್ಲಿ. ಗ್ರಾಮ ಪಂಚಾಯತಿ ಚುನಾವಣೆಗಳನ್ನು ಮುಂದೂಡಿ ,ಅಕ್ಟೋಬರ್ ತಿಂಗಳಿನಲ್ಲಿ ನಡೆಸಬೇಕಾಗುತ್ತೆ. ಅಲ್ಲಿಯವರೆಗೆ ಗ್ರಾಮ ಪಂಚಾಯಿತಿಗಳ ವಿಸರ್ಜನೆ ಮಾಡಿ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಬೇಕಾಗುತ್ತದೆ .
ಜಾಹೀರಾತು
ಕರೋನಾ ವೈರಸ್ ಹರಡುವಿಕೆಯಿಂದ ಜಗತ್ತಿನಾದ್ಯಂತ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ .ಜನಜೀವನ ಅಸ್ತವ್ಯಸ್ತವಾಗಿದ್ದು ಆರ್ಥಿಕ ಪರಿಸ್ಥಿತಿ ಕುಸಿದಿದೆ .
ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕು ಬೇಡವೇ ಎಂಬ ತೀರ್ಮಾನವನ್ನು ಚುನಾವಣಾ ಆಯೋಗ ಕೈಗೊಳ್ಳುತ್ತದೆ .ಚುನಾವಣಾ ಆಯೋಗ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ .
Be the first to comment