ಸಾಲ ಬಾಧೆ : ರೈತ ಆತ್ಮಹತ್ಯೆ

ವರದಿ: ರಾಘವೇಂದ್ರ ಮಾಸ್ತರ ಹುಣಸಗಿ

ರೈತ- ಧ್ವನಿ


ನಾರಾಯಣಪುರ ಎಡದಂಡೆ ಕಾಲುವೆ ನೀರು ಬಾರದೆ ತಾನು ಬೆಳೆದ ಭತ್ತದ ಬೆಳೆ ನಾಶವಾಗುತ್ತದೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ

ಅಂಬಿಗ ನ್ಯೂಸ್
ಹುಣಸಗಿ :ಸಾಲಬಾಧೆ ತಾಳಲಾರದೆ, ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅರಕೇರಾ (ಜೆ) ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವರಾಜ್ ಹೇಮರೆಡ್ಡಿ (39) ಆತ್ಮಹತ್ಯೆ ಮಾಡಿಕೊಂಡ ರೈತ.

ಬ್ಯಾಂಕ್ ಸಾಲ ಸೇರಿದಂತೆ ಕೈಸಾಲವಾಗಿ ಸುಮಾರು 6 ಲಕ್ಷ ಅಧಿಕ ಸಾಲ ಮಾಡಿಕೊಂಡಿದ ಎಂದು ತಿಳಿದು ಬಂದಿದೆ ಬಸವರಾಜ್ ಸಧ್ಯ ಬೇಸಿಗೆಯ ನೀರಿನ ಕೊರತೆಯಿಂದ ಭತ್ತ ನಾಶವಾದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Be the first to comment

Leave a Reply

Your email address will not be published.


*