ರಾಜ್ಯ ಸುದ್ದಿಗಳು
ಜಾಹೀರಾತು
ಕಲಬುರಗಿ: ಕರೊನಾ ವೈರಸ್ ಸೋಂಕಿನಿಂದ 76 ವರ್ಷದ ಕಲಬುರಗಿ ವೃದ್ಧ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನ ಅಧಿಕೃತ ಟ್ರಾವೆಲ್ ಇತಿಹಾಸವನ್ನು ಆರೋಗ್ಯ ಇಲಾಖೆ ಬಿಚ್ಚಿಟ್ಟಿದೆ.
ವೃದ್ಧನ ಸಂಚಾರದ ಇತಿಹಾಸ
ವೃದ್ಧನ ಪ್ರಯಾಣ ಇತಿಹಾಸ ನೋಡಿದರೆ ಬೆಚ್ಚಿಬೀಳುವ ಘಟನೆ ಬಯಲಾಗಿದೆ. ವೃದ್ಧನ ಟ್ರಾವೆಲ್ ಇತಿಹಾಸ ಅಂಬಿಗ ನ್ಯೂಸ್ ಟಿವಿಗೆ ಲಭ್ಯವಾಗಿದ್ದು, ಅದರಂತೆ ಫೆಬ್ರವರಿ 29 ರಂದು ಮಧ್ಯಾಹ್ನ 12:30ಕ್ಕೆ ವೃದ್ಧ ಸೌದಿಯಿಂದ ಹೈದ್ರಾಬಾದ್ಗೆ ಬಂದಿದ್ದ. ಹೈದ್ರಾಬಾದ್ನ ಪಟೆಂಚೇರು ಬಳಿ ಚಹಾ ಕುಡಿದಿದ್ದ. ಬಳಿಕ ಕಾರಿನಲ್ಲಿ ಕಲಬುರಗಿ ಕಡೆಗೆ ಪಯಣ ಬೆಳೆಸಿದ್ದ. ಮಾರ್ಗ ಮಧ್ಯದಲ್ಲಿ ಕಾರ್ ನಿಲ್ಲಿಸಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡಾಭಾದಲ್ಲಿ ಊಟ ಮಾಡಿದ್ದ.
ಜಾಹೀರಾತು
ಮಧ್ಯಾಹ್ನ 3:30 ರಿಂದ 4:30 ರ ವರೆಗೂ ಊಟ ಮಾಡಿದ್ದ ವೃದ್ದ ಢಾಬಾದಲ್ಲಿ ನಾನ್ ವೇಜ್ ಊಟ ಮಾಡಿ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಿದ. ಬಳಿಕ ಸಂಜೆ ಐದು ಗಂಟೆ ಮನೆ ತಲಪಿದ ವೃದ್ಧ, ಫೆಬ್ರವರಿ 29ರಿಂದ ಮಾರ್ಚ್ 6ವರೆಗೆ ಕಲಬುರಗಿಯ ನಿವಾಸದಲ್ಲೆ ವಾಸವಿದ್ದ. ಮಾರ್ಚ್ 6 ರಂದು ಜ್ವರದಿಂದ ಬಳಲುತ್ತಿದ್ದ. ಆತನ ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದು ತಪಾಸಣೆ ಮಾಡಿದ್ದರು.
ಮಾರ್ಚ್ 9ರವರೆಗೆ ಫ್ಯಾಮಿಲಿ ಡಾಕ್ಟರ್ ಮನೆಯಲ್ಲೆ ತಪಾಸಣೆ ಮಾಡಿದ್ದರು. ಆದರೆ, ಜ್ವರ. ಕೆಮ್ಮು ಮತ್ತು ನೆಗಡಿ ಕಡಿಮೆಯಾಗದ ಹಿನ್ನಲೆಯಲ್ಲಿ ಮಾರ್ಚ್ 9ರಂದು ಫ್ಯಾಮಿಲಿ ಡಾಕ್ಟರ್ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಾರ್ಚ್ 9 ರಂದು ರಾತ್ರಿ 10 ಗಂಟೆಗೆ ವೃದ್ಧನ ಕುಟುಂಬ ಆತನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಕಲಬುರಗಿಯಿಂದ ನೇರವಾಗಿ ಹೈದ್ರಾಬಾದ್ಗೆ ತೆರಳಿತು.
ಜಾಹೀರಾತು
ವೃದ್ಧ ಮಾರ್ಚ್ 10 ರಂದು ಹೈದ್ರಾಬಾದ್ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ. ಇದರ ಬೆನ್ನಲ್ಲೆ ಪರಿಸ್ಥಿತಿ ತೀರ ಹದಗೆಟ್ಟ ಹಿನ್ನೆಲೆಯಲ್ಲಿ ವೃದ್ಧನನ್ನು ವಾಪಸ್ ಕಲಬುರಗಿಗೆ ಕರೆದುಕೊಂಡು ಬರಲು ಕುಟುಂಬ ನಿರ್ಧಾರ ಮಾಡಿತು. ಮಾರ್ಚ್ 10 ರಂದು ಸಂಜೆ ಹೈದ್ರಾಬಾದ್ನ ಕೇರ್ ಆಸ್ಪತ್ರೆಯಿಂದ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಬರುವಾಗಲೆ ವೃದ್ಧ ಸಾವನ್ನಪ್ಪಿದ್ದ. ಬಳಿಕ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಜಿಮ್ಸ್ ಆಸ್ಪತ್ರೆಯ ವೈದ್ಯರಿಂದ ವೃದ್ದ ಸಾವನ್ನಪ್ಪಿರುವುದಾಗಿ ಅಧಿಕೃತ ಘೋಷಣೆಯಾಯಿತು. ಮಾರ್ಚ್ 11 ರಂದು ವೃದ್ದನ ಅಂತ್ಯಕ್ರಿಯೆ ನೆರವೇರಿತು
Be the first to comment