ಕೋಲಿ-ಬೆಸ್ತ ಸಮಾಜದ ಬದುಕು ಹಾಳು ಮಾಡಿದ್ದೇ ಡಿ.ಕೆ.ಶಿವಕುಮಾರ್!- ಹೆಚ್‌ಡಿಕೆ ವಾಗ್ದಾಳಿ

ರಾಮನಗರ: ಕೆರೆಕಟ್ಟೆಗಳಲ್ಲಿ ತಲೆ ತಲಾಂತರಗಳಿಂದ ಮೀನು ಹಿಡಿದು ಜೀವನ ಮಾಡುತ್ತಿದ್ದ ಕೋಲಿ ಬೆಸ್ತ ಸಮಾಜದ ಜನರ ಜೀವನವನ್ನು ಇಂದಿನ ಡಿಸಿಎಂ ಡಿ.ಕೆ ಶಿವಕುಮಾರ್ ಹಾಳು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನಿಮ್ಮ ಬದುಕಿನಲ್ಲಿ ಚೆಲ್ಲಾಟ ಆಡಿರುವ ವ್ಯಕ್ತಿ ಎಂದರೆ ಅದು ಡಿ.ಕೆ. ಶಿವಕುಮಾರ್. ಕೆರೆಗಳಲ್ಲಿ ಮೀನುಗಳನ್ನು ಹರಾಜು ಹಾಕುವ ವ್ಯವಸ್ಥೆ ಜಾರಿಗೆ ತಂದ ವ್ಯಕ್ತಿ ಇವರೇ. ಕೆರೆಗಳನ್ನು ನಂಬಿ ಬದುಕು ಮಾಡುತ್ತಿದ್ದ ಅವರನ್ನು ಕೆರೆಗಳಿಂದ ದೂರ ಮಾಡಿದ್ದು ಇದೇ ವ್ಯಕ್ತಿ ಎಂದು ಅವರು ಕಿಡಿಕಾರಿದರು

ಕೋಲಿ ಬೆಸ್ತ ಸಮಾಜಕ್ಕೆ ಹೆಚ್‌ಡಿಕೆ ಭರವಸೆ: ಇದೇ ವೇಳೆ ಕೋಲಿ ಬೆಸ್ತ ಸಮಾಜ ಎಸ್.ಟಿ ಪ್ರವಾರ್ಗಕ್ಕೆ ಸೇರಿಸುವ ಭರವಸೆ ನೀಡಿದ ಹೆಚ್‌ಡಿಕೆ, ನಿಮ್ಮ ಬೇಡಿಕೆ ನ್ಯಾಯವಿದೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸುವ ಪ್ರಯತ್ನವನ್ನು ದೇವೆಗೌಡರ ನಾಯಕತ್ವದಲ್ಲಿ ಮಾಡಿದ್ದೇವೆ. ಈ ಬಗ್ಗೆ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

Logo

Be the first to comment

Leave a Reply

Your email address will not be published.


*