ದತ್ತಪೀಠದ ಅನಧಿಕೃತ ಇಸ್ಲಾಮಿಕ್ ಕುರುಹು ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು; ಶ್ರೀರಾಮ ಸೇನೆ.
ಬೆಂಗಳೂರು ಅಕ್ಟೋಬರ್ 29; ಪ್ರತಿವರ್ಷದಂತೆ ನವಂಬರ್ 4ರಿಂದ 10ರವರೆಗೆ ಚಿಕ್ಕಮಗಳೂರಿನ ದತ್ತ ಮಾಲಾ ಅಭಿಯಾನ ನಡೆಯಲಿದ್ದು, ನವಂಬರ್ 10ರಂದು ಧರ್ಮ ಸಭೆ, ಶೋಭಾಯಾತ್ರೆ,ದತ್ತ ಪೀಠದಲ್ಲಿ ಹೋಮ, ಹವನ ನಡೆಯಲಿದೆ ಎಂದು ಶ್ರೀ ರಾಮ ಸೇನೆ ತಿಳಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸೇನೆಯ ವಕ್ತಾರ ಭಾಸ್ಕರನ್, ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು, ಕೇವಲ ಹಿಂದೂ ಅರ್ಚಕರು ಇರಬೇಕು, ಮೌಲ್ವಿಯನ್ನು ತೆಗೆದು ನಾಗೇನ ಹಳ್ಳಿಗೆ ಕಳುಹಿಸಬೇಕು,ದತ್ತ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಆಗಲೇ ಬೇಕು, ವಸತಿ ವ್ಯವಸ್ಥೆ ಸಹ ಮಾಡಬೇಕು,ಪೀಠದಲ್ಲಿ ಕಳುವಾದ ಎಲ್ಲವೂ ಪೀಠಕ್ಕೆ ಹಿಂದುರಿಗಸಬೇಕು ಎಂದರು.
ನವಂಬರ್ 4ರಂದು ಮಾಲಾಧಾರಣೆ ನಡೆಯಲಿದೆ, ನವಂಬರ್ 10ರಂದು ನಡೆಯುವ ಧರ್ಮಸಭೆಗೆ ಮುಖ್ಯ ಅತಿಥಿಯಾಗಿ ಪ್ರಖರ ಹಿಂದೂವಾದಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ,ಮಾಜಿ ಸಂಸದ ಪ್ರತಾಪ ಸಿಂಹ, ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಭಾಗವಹಿಸಲಿದ್ದು, ಚಿಕ್ಕಮಗಳೂರಿನಿಂದ ದತ್ತ ಪೀಠದವರೆಗೆ ದತ್ತ ಮಾಲಾ ಮೆರೆವಣಿಗೆ ನಡೆಯಲಿದೆ ಎಂದು ತಿಳಿಸಿದರು.
Be the first to comment