ಶಹಾಪುರಃ ಓರ್ವನ ಬರ್ಬರ್ ಹತ್ಯೆ ಬೆಚ್ಚಿ ಬಿದ್ದ ಜನತ
ಶಹಾಪುರ : ತಾಲೂಕಿನ ಗ್ರಾಮದ ಎಎಂಡಿ ಕ್ಯಾಂಪಿನ ಬಳಿ ಸಂಜೆ ಸುಮಾರಿಗೆ ಓರ್ವನ ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿ ಜಾಪಾನಾಯಕ ತಾಂಡಾದ ತಿಪ್ಪಣ್ಣ (35) ಎಂದು ತಿಳಿದು ಬಂದಿದೆ.
ನಾಲ್ಕಾರು ಜನ ಸೇರಿ ಬೈಕ್ ಮೇಲೆ ಹೊರಟಿದ್ದ ತಿಪ್ಪಣ್ಣನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಶಿಳ್ಳೆ, ಕೇಕೆ ಹಾಕುತ್ತಾ ಟೊಕಾಪುರ ರಸ್ತೆ ಮೂಲಕ ತೆರಳಿದರೆಂಬ ಸುದ್ದಿ ಎಲ್ಲಡೆ ಹರಡಿದೆ.
ಬರ್ಬರ್ ಹತ್ಯೆ ಸುದ್ದಿ ಕೇಳಿದ ಜನ ಭಯಭೀತರಾಗಿದ್ದಾರೆ. ಕೊಲೆಗೆ ಮುಖ್ಯ ಕಾರಣವೇನೆಂದು ಸಮರ್ಪಕವಾಗಿ ತಿಳಿದು ಬಂದಿಲ್ಲ. ಹಳೇ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆ ನಂತರವೇ ಸತ್ಯಾಂಶ ಬಯಲಾಗಲಿದೆ.
ಶಹಾಪುರ ತಾಲ್ಲೂಕಿನಲ್ಲಿ ಕೊಲೆಗಳು
ಹೆಚ್ಚುತ್ತಿವೆ.ಶಹಾಪುರ ಪೋಲಿಸ ಠಾಣಾಯ ಪೋಲಿಸ ಅಧಿಕಾರಿ ವಿರುದ್ಧ ಅನೇಕ ದೂರು ಇವೆ ಅಕ್ರಮಗಳಿಗೆ ಸಾಥ ನೀಡುತ್ತಿರು ಪೋಲಿಸರಿಂದನೆ ತಾಲ್ಲೂಕಿನಲ್ಲಿ ಕಾನೂನು ಹಾಳಾಗುತ್ತಿದೆ.ಕೆಲ ತಿಂಗಳ ಹಿಂದೆ ಅರಣ್ಯ ಅಧಿಕಾರಿಯನ್ನು ಕೊಲೆ ಮಾಡಿದರು ಆ ಕೇಸ ಮುಚ್ಚಿ ಹಾಕಲು ಪೋಲಿಸರೆ ಪ್ರಯತ್ನಿಸಿದರು. ತನಿಖೆ ಸರಯಾಗಿ ಮಾಡಲಿಲ್ಲ ಎಲ್ಲ ಆರೋಪಿಗಳಿಗೆ ಬೆಲ ಸಿಕ್ಕಿದೆ.
ಸ್ಥಳೀಯ ವ್ಯಕ್ತಿ ಆಪಾದನೆ
(ಹೆಸರು ಬೇಡ ನನ್ನನ್ನು ಯಾವುದಾದರೂ ಕೇಸನಲ್ಲಿ ಹಾಕುತ್ತಾರೆ ಎಂದು ಭಯದಲ್ಲೆ ಹೇಳಿದರು)
ಘಟನಾ ಸ್ಥಳಕ್ಕೆ ಪಿಐ ಎಸ್.ಎಂ.ಪಾಟೀಲ್ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್ ಪಿ ಭೇಟಿ ನೀಡಿ ಪರಿಶೀಲನೆಗೆ ಸೂಚಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಲೆಯಾದ ತಿಪ್ಪಣ್ಣನ ಸಂಬಂಧಿಕರು ಇತರರು ಆಗಮಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ. ಜನಸ್ತೋಮವೇ ಸ್ಥಳದಲ್ಲಿ ನೆರೆದಿದ್ದು, ಪೊಲೀಸರು ಬಂದೋಬಸ್ತ್ ನಲ್ಲಿದ್ದಾರೆ.
ಸ್ಥಳಕ್ಕೆ ಶಹಾಪುರ ಠಾಣೆ ಎಸ್ ಪಿ, ಎಡಿಷನಲ್ ಎಸ್ ಪಿ, ಡಿಎಸ್ ಪಿ, ಪಿಐ ಭೇಟಿ
Be the first to comment