ಲಿಂಗಸೂಗೂರು ; ಲಿಂಗಸುಗೂರು ತಾಲ್ಲೂಕಿನ ಹೊನ್ನಾಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗುಡದನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದ್ದೆ ಆದರೆ ಒಂದು ವಾರದಿಂದ ಗುಡದನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರವಾಗಿದ್ದು ಒಂದು ದಿನ ಮೋಟಾರ್ ದುರಸ್ಥಿ ಕೇಬಲ ಸಮಸ್ಯೆ.ಟಿ.ಸಿ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ.ಎಂದು ಗುಡ್ಡದನಾಳ ಗ್ರಾಮಸ್ಥರು ಆರೋಪ
ಅದಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹೊನ್ನಳಿ ಪಂಚಾಯಿತಿ ವ್ಯಾಪ್ತಿಯ ಗುಡ್ಡದನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ
ಹೊನ್ನಳ್ಳಿ ಕೆರೆಯಿಂದ ಗುಡ್ಡದನಾಳ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಮೋಟಾರ್ ಕೆಟ್ಟು ಒಂದು ವಾರ ಆಗಿದೆ ಮೋಟಾರ್ ದುರಸ್ಥಿ ಮಾಡಿಸುವಂತೆ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರು ಕ್ಯಾರೆ ಎನ್ನದೆ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ ಎಂದು ಗುಡ್ಡದನಾಳ ಗ್ರಾಮಸ್ಥರು ಆರೋಪ ಮಾಡಿದರು
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಆದರೆ ಗುಡ್ಡದನಾಳ ಗ್ರಾಮದ ಜನರಿಗೆ ಕುಡಿಯಲು ಸರಿಯಾಗಿ ನೀರು ಸಿಗುತ್ತಿಲ್ಲ ಗುಡದನಾಳ ಗ್ರಾಮಕ್ಕೆ ದಿನಾಲು ಹಟ್ಟಿ ಹಾಗೂ ಲಿಂಗಸುಗೂರು ಪಟ್ಟಣದಿಂದ ಶುಧಿಕರೀಸಿದ ನೀರು ಖಾಸಗಿ ವ್ಯಕ್ತಿಗಳು ನೀರಿನಟ್ಯಾಂಕರ ಮೂಲಕ ಗ್ರಾಮಗಳಿಗೆ ನೀರು ಮಾರಾಟ ಮಾಡುತ್ತಿದ್ದಾರೆ. ಗುಡದನಾಳ ಗ್ರಾಮದ ಜನರು ದುಡ್ಡು ಕೂಟ್ಟು ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ,
ಗುಡ್ಡದನಾಳ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರು ಸರಿಯಾಗಿ ಶುದ್ದೀಕರಣ ಆಗುತ್ತಿಲ್ಲ ಮತ್ತು ಈ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿದರೆ ಆದರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಪಾಳು ಬಿದ್ದಿದ್ದೆ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಯಂತ್ರಗಳು ತುಕ್ಕುಹಿಡಿದು ಹಾಳಾಗುತ್ತಿವೆ ಶುದ್ದೀಕರಣ ಘಟಕ ಸುಮಾರು 2 ವರ್ಷಗಳಿಂದ ಕಾರ್ಯನಿರ್ವಹಿಸದ ಸ್ಥಗಿತ ಗೂಂಡಿದೆ,ಎಂದು ಗುಡದನಾಳ ಗ್ರಾಮದ ಶರಣಬಸವ ಹಳೇ ಉಪ್ಪಾರ ಆರೋಪಿಸಿದ್ದಾರೆ,
ಹೊನ್ನಾಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿದರೆ ಕೂಡಲೇ ನೀರಿನ ಮೋಟಾರು ಸರಿಪಡಿಸುವುದಾಗಿ ಹೇಳಿದರು.
Be the first to comment