ಒಳ ಮೀಸಲಾತಿ ಜಾರಿಗಾಗಿ ಅಕ್ಟೊಬರ್ 03 ರಂದು ಲಿಂಗಸೂಗೂರು ಬಂದ ಕರೆ 

 

ಲಿಂಗಸೂಗೂರು ಆ 01:-ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜಾರಿಗೋಳಿಸದ ಸರ್ಕಾರದ ವಿಳಂಭ ನೀತಿಯನ್ನು ಖಂಡಿಸಿ ಅಕ್ಟೋಬರ್ 3 ರಂದು ಲಿಂಗಸುಗೂರು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಒಳ ಮೀಸಲಾತಿ ಹೋರಾಟ ಸಮಿತಿಯ ಲಿಂಗಪ್ಪ ಪರಂಗಿ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು,ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿಯನ್ನು ಅಕ್ಟೋಬರ್ 2 ರ ಒಳಗೆ ಒಳ ಜಾರಿ ಮಾಡದಿದ್ದರೆ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುವು ಎಂದು ನಿರ್ಧರಿಸಲಾಗಿದೆ. ಸರ್ಕಾರವು ಇನ್ನು ಒಳ ಮೀಸಲಾತಿ ಕಾರ್ಯ ರೂಪಕ್ಕೆ ತರದ ಕಾರಣ ರಾಯಚೂರು ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಬಂದ್ ಕರೆ ನೀಡಿದ್ದು.ಲಿಂಗಸುಗೂರಿನಲ್ಲಿಯೂ ಸಹ ಒಳ ಮೀಸಲಾತಿ ಜಾರಿಗಾಗಿ ಅಕ್ಟೋಬರ್ 3 ರಂದು ಬಂದ್‌ಗೆ ಕರೆ ನೀಡಲಾಗಿದೆ ಎಂದರು.

 

 

 

ಸುಪ್ರೀಂ ಕೋರ್ಟ್‌ನ 7 ಸದಸ್ಯರ ಪೀಠ ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ತೀರ್ಪು ನೀಡಿದೆ. 2 ತಿಂಗಳು ಕಳೆದರೂ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ರಾಜ್ಯ ಸರ್ಕಾರದ ನೀತಿ ಅತ್ಯಂತ ಖಂಡನೀಯವಾಗಿದ್ದು, ಅದಕ್ಕಾಗಿ ಲಿಂಗಸುಗೂರು ಬಂದ್‌ಗೆ ಕರೆ ನೀಡಲಾಗಿದೆ.

ಅಕ್ಟೋಬರ್ 3 ರಂದು ಶಾಂತಿಯುತವಾಗಿ ಬಂದ್ ಹಾಗೂ ಹೋರಾಟ ನಡೆಯಲಿದ್ದು, ಶಾಲಾ ಕಾಲೇಜು ಮುಖ್ಯಸ್ಥರು ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕು ಹಾಗೂ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲಿಸಬೇಕೆಂದು ಲಿಂಗಸುಗೂರು ಪಟ್ಟಣದ ಎಲ್ಲ ವರ್ತಕರಲ್ಲಿ ಹಾಗೂ ಶಾಲಾ ಕಾಲೇಜು ವ್ಯವಸ್ಥಾಪಕರಲ್ಲಿ ವಿನಂತಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಯಲಿದ್ದು, ಅಷ್ಟರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಂದ್ ಹೋರಾಟವನ್ನು ವಿಸ್ತರಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಕುಪ್ಪಣ್ಣ ಹೊಸಮನಿ, ಹನುಮಂತಪ್ಪ, ಅಜಪ್ಪ ಕರಡಕಲ್, ಅಂಜಿನಯ್ಯ ಭಂಡಾರಿ, ದುರಗಪ್ಪ ಸೋಮನಬಂಡಿ, ಸಂಜೀವಪ್ಪ ಹುಣಕುಂಟಿ, ವಿಜಯ ಪೋಳ, ಮೋಹನ್ ಗೊಸ್ಲೆ, ಉಮೇಶ್ ಐಹೋಳೆ, ರಮೇಶ ಗೊಸ್ಲೆ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*