ಲಿಂಗಸೂಗೂರು ; ಪಟ್ಟಣದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಬಿ, ಸಿ ಟ್ರಸ್ಟ್ ಕಚೇರಿ ಉದ್ಘಾಟನೆ

 

 

ಲಿಂಗಸುಗೂರು ಅಕ್ಟೋಬರ್ 09 ರಂದು.ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಬಿ, ಸಿ ಟ್ರಸ್ಟ್ ಕಚೇರಿ ಉದ್ಘಾಟನೆಯನ್ನು ಹೋಮ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಪ್ರಾಂತ ಯೋಜನಾಧಿಕಾರಿ ಚಂದ್ರಶೇಖರ ಉದ್ಘಾಟಿಸಿ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಿಂಗಸುಗೂರು ತಾಲೂಕಿಗೆ ಪಾದಾರ್ಪಣೆಗೊಂಡು 11 ವರ್ಷಗಳಾಗಿರುತ್ತವೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ದುರ್ಬಲ ವರ್ಗದ ಜನರನ್ನು ಒಟ್ಟುಗೂಡಿಸಿ ಮಹಿಳಾ ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ರಚನೆ ಮಾಡಿ, ಐ.ಡಿ.ಬಿ.ಐ ಬ್ಯಾಂಕಿನ ಸಹಯೋಗದೊಂದಿಗೆ ಸಂಘಗಳ ಖಾತೆಗಳನ್ನು ಸದಸ್ಯರಿಗೆ ಉಳಿತಾಯ ಮನೋಭಾವನೆ ಮತ್ತು ಆರ್ಥಿಕವಾಗಿ ಮುಂದೆ ಬರಲು ಸಂಘದ ಮತ್ತು ಬ್ಯಾಂಕಿನ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.
ಯೋಜನೆಯು ಕಳೆದ 11 ವರ್ಷಗಳಲ್ಲಿ ಲಿಂಗಸುಗೂರು ತಾಲೂಕಿನಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಲಿಂಗಸುಗೂರು ತಾಲೂಕಿನಲ್ಲಿ 23 ಖಾಯಂ ಸಿಬ್ಬಂದಿಗಳು ಮತ್ತು 57 ಸೇವಾಪ್ರತಿನಿಧಿಗಳು ಹಾಗೂ 35 ಜನ ಸಿ.ಎಸ್.ಸಿ ಸೇವಾದಾರರು ಸೇರಿ ಒಟ್ಟು 115 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಲಿಂಗನುಗೂರು ತಾಲೂಕಿನಲ್ಲಿ ಒಟ್ಟು 20406 ಸದಸ್ಯರನ್ನು ಒಳಗೊಂಡ 2477 ಕ್ರಿಯಾಶೀಲ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಸಂಘಗಳ ಸದಸ್ಯರು ಪ್ರತಿವಾರ ರೂ. 10/- ರಿಂದ ರೂ. 20/- ರಂತೆ ಒಟ್ಟು ಸುಮಾರು ರೂ. 13 ಕೋಟಿ ಮೊತ್ತ ಉಳಿತಾಯ ಮಾಡಿರುತ್ತಾರೆ.
ಕಚೇರಿ ಉದ್ಘಾಟಸಿ ಮಾತನಾಡಿದ ಜಿಲ್ಲಾ ಪ್ರಾಂತ ಯೋಜನಾಧಿಕಾರಿ ಚಂದ್ರಶೇಖರ ಮೋಹನ ನಾಯಕ ಶಶಿಕಲಾ ಅಡಿವೆಯ್ಯಾ ಪುರಸಭೆ ಮಾಜಿ ಉಪಾದ್ಯೆಕ್ಷರಾದ ಮಹ್ಮದರಪೀ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*