ಮುಂದಿನ‌ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರೇಸ್​ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಶಾಲಾ ಶಿಕ್ಷಣ ಇಲಾಖೆ ಈ ವರ್ಷ 1.70 ಲಕ್ಷ 10ನೇ ತರಗತಿ ಮಕ್ಕಳಿಗೆ ಶೇ20 ರಷ್ಟು ಕೃಪಾಂಕ ನೀಡಿತ್ತು. ಆದರೂ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ10 ರಷ್ಟು ಕುಸಿತವಾಗಿದೆ. ಈ ಕೃಪಾಂಕ ನೀಡಿದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಇದೀಗ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೃಪಾಂಕಕ್ಕೆ ಬ್ರೇಕ್​ ಹಾಕಿದ್ದಾರೆ.

ಬೆಂಗಳೂರು, ಅಕ್ಟೋಬರ್​ 09: ಮುಂದಿನ‌ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ (10th Class Students) ಕೃಪಾಂಕ (ಗ್ರೇಸ್​ ಮಾರ್ಕ್ಸ್)​​ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರೇಸ್ ಮಾರ್ಕ್ಸ್ ಕೊಡಬೇಡಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ 10ನೇ ತರಗತಿ ಮಕ್ಕಳಿಗೆ ಗ್ರೇಸ್​ ಮಾರ್ಕ್ಸ್​​ ನೀಡುವುದಿಲ್ಲ ಎಂದರು

ಈ ವರ್ಷ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶ ಶೇ73.40 ಆಗಿದೆ. ಕಳೆದ ವರ್ಷ ಶೇ83 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 2288 ಶಾಲೆಗಳು ಶೇ100 ರಷ್ಟು ಫಲಿತಾಂಶ ಪಡೆದಿವೆ.

ಶಾಲಾ ಶಿಕ್ಷಣ ಇಲಾಖೆ ಈ ವರ್ಷ 1.70 ಲಕ್ಷ 10ನೇ ತರಗತಿ ಮಕ್ಕಳಿಗೆ ಶೇ20 ರಷ್ಟು ಕೃಪಾಂಕ ನೀಡಿತ್ತು. ಆದರೂ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ10 ರಷ್ಟು ಕುಸಿತವಾಗಿದೆ. ಈ ಕೃಪಾಂಕ ನೀಡಿದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಇದೀಗ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೃಪಾಂಕಕ್ಕೆ ಬ್ರೇಕ್​ ಹಾಕಿದ್ದಾರೆ.

ಕೃಪಾಂಕ ನೀಡಿದ್ದು ಅನುತ್ತೀರ್ಣಗೊಳ್ಳುವ ಅಂಚಿನಲ್ಲಿದ್ದ ವಿದ್ಯಾರ್ಥಿಗಳಿಗೆ ಇದು ವರದಾನವಾಗಿದೆ. ಶೇ5-10ರಷ್ಟು ಕೃಪಾಂಕ ನೀಡುತ್ತಿದ್ದ ಮಂಡಳಿಯು ಈ ವರ್ಷ ಇದರ ಪ್ರಮಾಣವನ್ನು ಶೇ20 ರಷ್ಟು ಹೆಚ್ಚಳ ಮಾಡಿತ್ತು.

ಸಿದ್ದರಾಮಯ್ಯ ಗರಂ
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ20 ರಷ್ಟು ಕೃಪಾಂಕ ನೀಡಿದ್ದ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ವ್ಯವಸ್ಥೆಯನ್ನು ಮುಂದುವರಿಸದಂತೆ ಸ್ಪಷ್ಟ ನಿರ್ದೇಶನ ನೀಡಿದ್ದರು.

Be the first to comment

Leave a Reply

Your email address will not be published.

*