ಡಿಕೆಶಿ-ಪರಮೇಶ್ವರ್‌ ಭೇಟಿ; ಕುತೂಹಲ ಕೆರಳಿಸಿದ ಸಿಎಂ ಆಕಾಂಕ್ಷಿಗಳ ಮಾತುಕತೆ!

 

ಗಳೂರು; ಮುಡಾ ಹಗರಣದ ಹಿನ್ನೆಲೆಯಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದರೆ ಮುಂದೆ ಯಾರಾಗ್ತಾರೆ ಸಿಎಂ ಎಂಬ ಚರ್ಚೆ ಶುರುವಾಗಿದೆ.. ಈ ಬೆನ್ನಲ್ಲೇ ದಲಿತ ಸಿಎಂ ವಿಚಾರ ಕೂಡಾ ಮುನ್ನೆಲೆಗೆ ಬಂದಿದೆ.. ಹೀಗಿರುವಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹಸಚಿವ ಜಿ.ಪರಮೇಶ್ವರ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ..

ಕಾರಣ ಏನೇ ಇದ್ದರೂ ಈ ಇಬ್ಬರೂ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಈ ಸಂದರ್ಭದಲ್ಲಿ ಇವರ ಭೇಟಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ..
ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುವ ನೆಪದಲ್ಲಿ ಇವರಿವ್ವರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ಮುಂದಿನ ರಾಜಕೀಯ ನಡೆ ಹಾಗೂ ಹೈಕಮಾಂಡ್‌ ಏನಾದರೂ ನಿರ್ಧಾರ ತೆಗೆದುಕೊಂಡರೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.. ಡಿ.ಕೆ.ಶಿವಕುಮಾರ್‌, ಸತೀಶ್‌ ಜಾರಕಿಹೊಳಿ ಹಾಗೂ ಜಿ.ಪರಮೇಶ್ವರ್‌ ಸಿಎಂ ಸ್ಥಾನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.. ಇದರಲ್ಲಿ ಇಬ್ಬರು ಭೇಟಿಯಾಗಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.. ರಾಜ್ಯ ಕಾಂಗ್ರೆಸ್‌ ಪರ್ಯಾಯ ವೇದಿಕೆ ಸೃಷ್ಟಿಯಾಗ್ತಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ.

Be the first to comment

Leave a Reply

Your email address will not be published.


*