ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಿ ನ್ಯಾಯಾಧೀಶೆ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ.

 

 

ಲಿಂಗಸಗೂರು ದಿ: 30-09-2024 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರು ತಾಲ್ಲೂಕು ಕಾನೂನು ಸೇವಾ ಸಮಿತಿ, ಲಿಂಗಸಗೂರು ತಾಲ್ಲೂಕು ನ್ಯಾಯವಾದಿಗಳ ಸಂಘ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ಲಿಂಗಸುಗೂರು ಹಾಗೂ ಸರಕಾರಿ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಅಂಗವಾಗಿ ಕಾನೂನು ಅರಿವು ಮತ್ತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಲಿಂಗಸಗೂರು ನ್ಯಾಯಾಲಯ ಆವರಣ ಸ್ವಚ್ಛತೆ ಮಾಡುವ ಮುಖಾಂತರ ಕಾರ್ಯಕ್ರಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯದಿಶೇ ಉಂಡಿ ಮಂಜುಳಾ ಶಿವಪ್ಪ.

ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಅಧ್ಯಕರು ತಾಲ್ಲೂಕು ಕಾನೂನು ಸೇವಾ ಸಮಿತಿ, ಲಿಂಗಸುಗೂರ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಣ್ಣ.ಕೆ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರು ಇವರು ಅಧ್ಯಕ್ಷತೆಯನ್ನು ವಹಿಸಿದ್ದಾರು. ಮುಖ್ಯ ಅತಿಥಿಗಳಾಗಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ. ವಿ. ಪಾಟೀಲ್, ಪುಂಡಲಿಕ ಪಟ್ಟತಾರ ಪಿ.ಐ.ಲಿಂಗಸುಗೂರು, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು,, ವಕೀಲರು, ಪೊಲೀಸ್ ಸಿಬ್ಬಂದಿಗಳು, ನ್ಯಾಯಾಲಯದ ಸಿಬ್ಬಂಧಿಗಳು .

ಭಾಗಿಯಾಗಿದ್ದರು, ಅಂಗನವಾಡಿ ಕಾರ್ಯಕರ್ತೆಯರು ಈ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನ್ಯಾಯಾಲಯದಿಂದ ಪ್ರಾರಂಭವಾಗಿ ಐ.ಎಂ.ಐ ಹಾಲ್ ಮುಖಾಂತರ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಲಾಯಿತು ನ್ಯಾಯಾಧಿಶರು ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಇವರು ಮಾತನಾಡಿ ಬಸ್ ನಿಲ್ದಾಣದಲ್ಲಿ ಅಸ್ವಚ್ಛತೆಯನ್ನು ಕಂಡು ನಿಲ್ದಾಣದಲ್ಲಿ ನೇರದಿದ್ದ ಪ್ರಯಣಿಕರಿಗೆ ಸ್ವಚ್ಛತಾ ಬಗ್ಗೆ ತಿಳಿಹೇಳಲಾಯಿತು, ಹಾಗೂ ಮಾರ್ಗಮಧ್ಯ ಬೀದಿಬದಿ ಮಲಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕಂಡು ನ್ಯಾಯಾಧೀಶರು ಆ ಮಹಿಳೆಯನ್ನು ಊಟ-ಉಪಹಾರ ನೀಡಿ ಉಪಚರಿಸಿ ನ್ಯಾಯಾಧೀಶರು ಮಾನವಿಯತೆ ಮೇರೆದರು ಮತ್ತು ಪೊಲೀಸ್ ಸಹಾಯದೊಂದಿಗೆ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ನಂತರ ಜಾಥಾ ಕಾರ್ಯಕ್ರಮವನ್ನು ನ್ಯಾಯಾಲಕ್ಕೆ ಕೊನೆಗೊಳಿಸಲಾಯಿತು. ಈ ಕಾರ್ಯಕ್ರಮಕ್ಕೆ ಸರಕಾರದ ವಿವಿಧ ಇಲಾಖೆಗಳು ಹಾಗೂ ವಕೀಲರು, ಪುರಸಭೆಯ ಕರ್ಮಚಾರಿಗಳು, ಪೊಲೀಸರು ಸಹಕರಿಸಿದರು.

Be the first to comment

Leave a Reply

Your email address will not be published.


*