ಮಂಡ್ಯ: ಎಲ್ಲ ಜನರನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂಪರ್ಕ ಸೇತುವೆಯಾಗಿ ಅಲಯನ್ಸ್ ಕ್ಲಬ್ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ನ ಜಿಲ್ಲಾ ರಾಜ್ಯಪಾಲ ಕೆ ಟಿ ಹನುಮಂತ ಹೇಳಿದರು.
ನಗರದ ಸಿಪಾಯಿ ಹೋಟೆಲ್ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ವತಿಯಿಂದ ನೆಲದನಿ ಅಲಯನ್ಸ್ ಸಂಸ್ಥೆ ಮತ್ತು ಪರಿಸರ ಅಲಯನ್ಸ್ ಸಂಸ್ಥೆಗಳ ಉದ್ಘಾಟನೆ ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ಕೌಶಲ್ಯ ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಲಯನ್ಸ್ ಕ್ಲಬ್ ಗೆ ಸೇರಿ ಸ್ನೇಹ ಮತ್ತು ಸೇವೆ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಿ ಇದರಿಂದ ಅಲಯನ್ಸ್ ಸದಸ್ಯರೊಂದಿಗೆ ಜಿಲ್ಲೆ ರಾಜ್ಯ ಸದಸ್ಯರ ಸ್ನೇಹ ಹೊಂದಲು ಸಹಕಾರಿಯಾಗಿದೆ ಸೇವ ಕಾರ್ಯದಲ್ಲಿ ತೊಡಗಲು ಡಾಕ್ಟರ್ ಇಂಜಿನಿಯರ್ ಉದ್ಯಮಿಗಳು ರಾಜಕಾರಣಿಗಳು ಸೇರ್ಪಡೆಗೊಂಡಿದ್ದಾರೆ ಇಂದು ಕಲಾವಿದರ ತಂಡ ಮತ್ತು ಪರಿಸರ ಪ್ರೇಮಿಗಳು ನೂತನ ಸಂಘ ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದರು.
ನೆಲದನಿ ಅಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆರ್. ಮಹಾಲಕ್ಷ್ಮಿ ಪರಿಸರ ಅಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎಸ್ ಬಸವರಾಜು ಅಧಿಕಾರ ಸ್ವೀಕರಿಸಿದರು,
ಕಾರ್ಯಕ್ರಮದಲ್ಲಿ ಅಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ ಬೈರಿ ಜಿಲ್ಲಾ ಒಂದನೇ ಉಪ ರಾಜ್ಯಪಾಲ ಮಾದೇಗೌಡ ಎರಡನೇ ಜಿಲ್ಲಾ ಉಪ ರಾಜ್ಯಪಾಲ ಶಶಿಧರ ಈಚಗೆರೆ ಖಜಾಂಚಿ ಟಿ.ಎನ್ ರಕ್ಷಿತ್ ರಾಜ್ ಅಲಯನ್ಸ್ ನ ನೀನಾ ಪಟೇಲ್ ರತ್ನಮ್ಮ ಭಾಗವಹಿಸಿದ್ದರು.
Be the first to comment