110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಕಾಮಗಾರಿ ಬೇಗ ಮುಗಿಸಿ ಆದರೆ ಗುಣಮಟ್ಟ ಮರೆಯಬೇಡಿ: ಪರಿವೀಕ್ಷಣೆ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

 

ಕೆಂಗೇರಿ/ ತೊರೆಕಾಡನಹಳ್ಳಿ/ ಹಾರೋಹಳ್ಳಿ, ಸೆ. 23:

3 ದಿನಗಳಲ್ಲಿ ಕಾವೇರಿ ಕುಡಿಯುವ ನೀರು ಪೂರೈಸುವ ಪೈಪ್ ಅಳವಡಿಕೆ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದಾಗ “ಬೇಗ ಮುಗಿಸಿ ಆದರೆ ಅವಸರದಲ್ಲಿ ಕಾಮಗಾರಿಯ ಗುಣಮಟ್ಟ ಮರೆಯಬೇಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಯೊಬ್ಬರಿಗೆ ಕೆಂಗೇರಿ- ಉತ್ತರಹಳ್ಳಿ ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಹತ್ತಿರ ಕಾಮಗಾರಿ ವೀಕ್ಷಣೆ ವೇಳೆ ಹೀಗೆ ಸೂಚನೆ ನೀಡಿದರು.

ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದ 110 ಹಳ್ಳಿಗಳ ಜನರಿಗೆ ಕಾವೇರಿ ಕುಡಿಯುವ ನೀರಿನ ಪೂರೈಕೆಯ ಕನಸಿಗೆ ಬದ್ದವಾಗಿ ನಿಂತ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಜನರ ಬಾಯಾರಿಕೆ ನೀಗಿಸುತ್ತೇನೆ ಎನ್ನುವ ಸಂಕಲ್ಪ ಮುಂದಾಗಿ ಯೋಜನೆ ಅನುಷ್ಠಾನಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಿ, ಕೊನೆಯ ಹಂತದ ಒಂದಷ್ಟು ಕಾಮಗಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೋಮವಾರ ವೀಕ್ಷಣೆ ಮಾಡಿದರು.

ಬೆಂಗಳೂರು ನಗರದ, ಕೆಂಗೇರಿ- ಉತ್ತರಹಳ್ಳಿ ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಹತ್ತಿರ ಕ್ರಮವಾಗಿ ಮೂರು ಕಡೆ 30 ಮೀ, 20 ಮೀ, 70 ಮೀ ಒಟ್ಟು 120 ಮೀ. ಬಾಕಿ ಕಾಮಗಾರಿ ಇದೇ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಛೇರ್ಮನ್ ರಾಮ್ ಪ್ರಸಾತ್ ಮನೋಹರ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾಮಗಾರಿಯ ಬಗ್ಗೆ ವಿವರಿಸಿದರು. “ಈ ಕಾಮಗಾರಿ ಮುಗಿದರೆ ಪೈಪ್ ಅಳವಡಿಕೆ ಕಾರ್ಯ ಮುಗಿದಂತೆ” ಎಂದು ಡಿಸಿಎಂ ಅವರಿಗೆ ತಿಳಿಸಿದರು.

ನಂತರ ಬೆಂಗಳೂರಿನ ತಾತಗುಣಿವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 5 ನೇ ಹಂತದ ಪಂಪ್ ಸ್ಟೇಷನ್ ಅನ್ನು ಪರಿವೀಕ್ಷಣೆ ಮಾಡಿದರು.

ನಂತರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆ ಕಾಡನ ಹಳ್ಳಿಯ ಬೂಸ್ಟರ್ ಪಂಪಿಂಗ್ ಹಾಗೂ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು ಇಲಾಖೆಯ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳಿಂದ ತಾಂತ್ರಿಕ ವಿವರಗಳನ್ನು ಪಡೆದರು.

ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಬೆಳಗಿನಿಂದಲೇ ಡಿಸಿಎಂ ಅವರಿಗೆ ಕಾಮಗಾರಿ ವೀಕ್ಷಣೆ ವೇಳೆ ಸಾತ್ ನೀಡಿದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಎಂಎಲ್ ಸಿ ರವಿ ಅವರು ಇದೇ ವೇಳೆ ಜೊತೆಯಾದರು

Be the first to comment

Leave a Reply

Your email address will not be published.


*