ಸಿ ಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ -: ಅಹಿಂದ ಒಕ್ಕೂಟ ಜಿಲ್ಲಾಧ್ಯಕ್ಷ ಗುರುನಾಥ ಜಿ ತಳವಾರ

ಯಾದಗಿರಿ:: ಸಿ ಎಂ ಸಿದ್ದರಾಮಯ್ಯ ಅವರ ವಿರುದ್ಧ ನೀಡಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿಲ್ಲ .ಬದಲಿಗೆ ತನಿಖೆಗೆ ಆದೇಶ ನೀಡಿದೆ. ಆದರೆ ಈ ಬಿಜೆಪಿ ಪಕ್ಷದ ನಾಯಕರು ಸಿ ಎಂ ಸಿದ್ದರಾಮಯ್ಯನವರನ್ನು ರಾಜಕೀಯ ದುರುದ್ದೇಶದಿಂದ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಈ ಬಿಜೆಪಿ ಪಕ್ಷದವರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರನ್ನು ರಾಜೀನಾಮೆ ಕೇಳುವ ಯಾವ ನೈತಿಕತೆಯ ಇಲ್ಲ.ಈ ಹೈಕೋರ್ಟ್ ನೀಡಿರುವ ತೀರ್ಪು ತನಿಖೆ ನಡೆಸುವಂತೆ ಹೇಳಿದೆ ಅಷ್ಟೇ. ಸಿದ್ದರಾಮಯ್ಯ ಅವರು ಕೇಳಿರುವ ಅರ್ಜಿ ತಿರಸ್ಕರಿಸಿ ವಿಚಾರಣೆ ನಡೆಸಲು ನ್ಯಾಯಲಯ ಆದೇಶ ನೀಡಿದೆ. ಅಷ್ಟಕ್ಕೂ ತನಿಖೆ ನಡೆಯಲಿ ,ಸ್ಪಷ್ಟ ನಿರ್ಧಾರ ಬರುವವರೆಗೆ ವಿರೋಧ ಪಕ್ಷದವರು ಸಿ ಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಯಾವ ನೈತಿಕತೆಯು ನಿಮಗೆ ಇಲ್ಲ ಎಂದು ಯಾದಗಿರಿ ಜಿಲ್ಲೆಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಗುರುನಾಥ ಜಿ ತಳವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸಿ ಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಜನತೆ ಪ್ರಜಾಪ್ರಭುತ್ವ ಚುನಾವಣೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಈ ಕರ್ನಾಟಕದ ಜನತೆಯ ಆಶೀರ್ವಾದ ಸಿ ಎಂ ಸಿದ್ದರಾಮಯ್ಯ ಅವರ ಮೇಲಿದೆ. ಕೇಂದ್ರದ ಬಿಜೆಪಿ ಸರಕಾರ ರಾಜ್ಯಪಾಲರ ಹುದ್ದೆ ಮತ್ತು ಕಚೇರಿ ದುರುಪಯೋಗ ಪಡಿಸಿಕೊಂಡು ಆಡಳಿತ ನಡೆಸುತ್ತಿದೆ. ಹಲವಾರು ನಾಯಕರು ಕಡತಗಳು ತನಿಖೆಗಾಗಿ ಕೊಟ್ಟರೂ ಅದನ್ನು ಬದಿಗಿಟ್ಟು ಸಿದ್ದರಾಮಯ್ಯ ಅವರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ದ್ವೇಷದ ರಾಜಕಾರಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಹಿಂದ ಒಕ್ಕೂಟ ಜಿಲ್ಲಾಧ್ಯಕ್ಷರಾದ ಗುರುನಾಥ ಜಿ ತಳವಾರ ಅವರು ಕಾರವಾಗಿ ನುಡಿದಿದ್ದಾರೆ.

Logo

®

Be the first to comment

Leave a Reply

Your email address will not be published.


*