77ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಖಂಡಿಸಿ ಡಿ. ಎಸ್. ಎಸ್ ಭೀಮ ಘರ್ಜನೆ ಬಸವರಾಜ ಮರಳಿ ಮನವಿ

 

ಲಿಂಗಸೂಗೂರು ವರದಿ ಸೆಪ್ಟೆಂಬರ್ 18,

ಕರ್ನಾಟಕ ಭಾಗದ ಅತಿ ದೊಡ್ಡ ಉತ್ಸವ ಎಂದರೆ ಅದು ಸರ್ಕಾರದಿಂದ ಆಚರಿಸಲ್ಪಡುವ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆಯಾಗಿದೆ. ದಿನಾಂಕ್ 17-09-2024. ರಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆದ 77 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗೈರಾಜರಾಗಿರುತ್ತಾರೆ. ಈ ಇಲಾಖೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ನಿರೂಪಣಾಧಿಕಾರಿಗಳು ನೆರವೇರಿಸಿರುತ್ತಾರೆ. ಈ ಧ್ವಜಾರೋಣ ಸಂದರ್ಭದಲ್ಲಿ ಸಾಕಷ್ಟು ಸಮಯ ಧ್ವಜ ಹಗ್ಗವನ್ನು ಎಳೆದಾಡಿದರೂ ಸಹ ಧ್ವಜ ಹಾರಿರುವುದಿಲ್ಲ ನಂತರ ಬೇರೆ ವ್ಯಕ್ತಿಯ ಕೈಯಿಂದ ಧ್ವಜವನ್ನು ಬಿಚ್ಚಿಸಿ ಹಾರಿಸಲಾಗಿದೆ. ಇದರಿಂದ ರಾಷ್ಟ್ರಧ್ವಜಕ್ಕೆ ಅಪಮಾನವಾಗಿರುತ್ತದೆ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷತನವೇ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಗೈರಾಜರಾಗಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಮತ್ತು ನಿರ್ಲಕ್ಷತನದಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಡಿ . ಎಸ್. ಎಸ್ ಭೀಮ ಘರ್ಜನೆ ತಾಲೂಕು ಅಧ್ಯಕ್ಷ ರಾದ ಬಸವರಾಜ ಮರಳಿ ಸಹಾಯಕ ಆಯುಕ್ತರು ಲಿಂಗಸೂಗೂರು ಇವರಿಗೆ ಮನವಿ ಸಲ್ಲಿಸಿದರು.

Be the first to comment

Leave a Reply

Your email address will not be published.


*