ಲಿಂಗಸೂಗೂರು ವರದಿ. ಸೆಪ್ಟೆಂಬರ್ ೦೯
ಲಿಂಗಸುಗೂರು:- ಗುಲಬರ್ಗಾದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ.ಜಿ.ಯಳಸoಗಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ರೌಡಿ ಗ್ಯಾಂಗ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹೆಸರಾಂತ ನ್ಯಾಯವಾದಿಯ ವಿರುದ್ಧ ಹನಿ ಟ್ರ‍್ಯಾಪ್ ಎಂದು ಸುಳ್ಳು ಪ್ರಕರಣ ದಾಖಲಿಸಿ ನನ್ನ ತೇಜೋ ವಧೆಗೆ ಮುಂದಾಗಿರುವ ರಾಜು ಕಪನೂರು, ವಿಠಲ ದೊಡ್ಡಮನಿಯವರು ಹಾಗೂ ಅವರ ಗ್ಯಾಂಗ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ದಲಿತ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಗೋಸೆ, ಲಿಂಗರಾಜ ದೊಡ್ಡಮನಿ, ಖಾಜಾ ಗೋರೆಬಾಳ, ಮಂಜು ಕಳ್ಳಿಲಿಂಗ ಸುಗೂರು, ನಾಗರಾಜ ಹುಲಿಗುಡ್ಡ,ನಾಗರಾಜ ಐದನಾಳ, ಶಿವರಾಜ ಸಂತೆಕೆಲ್ಲೂರು, ರಮೇಶ ಮರಗಟ್ಟ ನಾಳ, ಶಿವರಾಜ ಯರಡೋಣಾ, ಚಿದಾನಂದ ಕಡದರಗಡ್ಡಿ, ಹುಲಗಪ್ಪ ಯರದಾಳ ಸೇರಿ ಉಪಸ್ಥಿತರಿದ್ದರು.
Be the first to comment