ಅಧಿಕಾರಿಗಳು ದುರ್ಬಳಕೆ : ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ
ಲಿಂಗಸೂಗೂರು ವರದಿ ಸೆಪ್ಟೆಂಬರ್ ೦೯
ಲಿಂಗಸೂಗೂರು: ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪೂಲಭಾವಿ ಗ್ರಾಮದ ಕಟಿಗೇನದೊಡ್ಡಿ ಮತ್ತು ಬಡಹೊಲದೊಡ್ಡಿ ದೊಡ್ಡಿಗಳಿಗೆ ಹಾಗೂ ದೇವರಭೂಪೂರ ಗ್ರಾಮ ಪಂಚಾಯತಿ ವ್ಯಾಪಿಯ ಐದಭಾವಿ ಗ್ರಾಮದ ಶಿಕಾರಿದೊಡ್ಡಿ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿಕೊಡಲು ೧೫/೦೩/೨೦೨೦ ರಂದು ಸರ್ಕಾರದಿಂದ ಮಂಜೂರಾದ ಲಕ್ಷಾಂತರ ರೂಪಾಯಿ ಹಣವನ್ನು ಗುತ್ತೇದಾರರಾದ ರಾಜು ಹಾಗೂ ಇಲಾಖೆ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಫಲಾನುಭವಿಗಳಿಗೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಸಿಕೊಡಲು ೨೦೨೦ ರಲ್ಲಿಯೇ ಮಂಜೂರಾದ ಹಣವನ್ನು ಕಾಮಾಗಾರಿ ಮಾಡದೇ ದುರ್ಬಳಕೆ ಮಾಡಿಕೊಂಡಲ್ಲದೇ ಆ ದೊಡ್ಡಿಗಳಲ್ಲಿ ವಾಸ ಮಾಡುತ್ತಿರು ಪ್ರತಿ ಕುಟುಂಬದಿAದ ೩೬೦೦ ರೂಪಾಯಿಯಾನ್ನು ಪಡೆದು ಕೊಂಡು ನಾಲ್ಕು ವರ್ಷಗಳ ಕಳೆದರೂ ಇಲ್ಲಿಯ ವರೆಗೆ ಯಾವುದು ವಿದ್ಯುತ್ ಸಂಪರ್ಕ ಕಲ್ಪಸಿಕೊಡದೆ ವಂಚನೆ ಮಾಡಿದ್ದಾರೆ. ಇದೆ ರೀತಿ ಎಷ್ಟು ದೊಡ್ಡಿ ತಾಂಡ ಗ್ರಾಮಗಳಿಗೆ ಅನ್ಯಾಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತದೆ.ಸೂಕ್ತ ತಂಡ ರಚಿಸಿ ಸಮಗ್ರ ತನಿಖೆಕೈಗೊಂಡು ತಪ್ಪಿಸ್ಥರಿಗೆ ಶಿಕ್ಷೆಗೆ ಗುರಿಪಡಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಂಡಬೇಕೆAದು. ಸೋಮವಾರದಂದು ಮುಖ್ಯಕಾರ್ಯನಿವಾಹಕ ಅಭಿಯಂತರರು ಜೆಸ್ಕಾಂ ಈಕಛೇರಿ ಮುಂದೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು.
ಈಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ, ರಾಮಯ್ಯ ಜವಳಗೇರೆ, ತಿಮ್ಮಣ್ಣ ಭೋವಿ, ವೆಂಕಟೇಶ,ನಾಗಪ್ಪ,ಶಿವರಾಜ,ಲಾಲಸಾಬ ಸೇರಿದಂತೆ ಇತರರು ಇದ್ದರು.
Be the first to comment