ಬೆಂಗಳೂರು ಮೂಲದ ವಿಜಯ್ ಮುರುಗೇಶ್‌ ನಿರಾಣಿಯ ಕಂಪನಿ IPOಗಾಗಿ ಸೆಬಿಗೆ ಅರ್ಜಿ ಸಲ್ಲಿಕೆ : ₹750 ಕೋಟಿ ಸಂಗ್ರಹಿಸಲು ಪ್ಲ್ಯಾನ್‌!

 

ಬೆಂಗಳೂರು ಮೂಲದ ಟ್ರೂ ಆಲ್ಟ್‌ ಬಯೋ ಎನರ್ಜಿ ಲಿ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಡ್ರಾಫ್ಟ್‌ ಪೇಪರ್‌ ಸೆಬಿಗೆ ಸಲ್ಲಿಸಿದೆ. ಕಂಪನಿಯು ಭಾರತದಲ್ಲಿ ಬಯೋ ಇಂಧನ ಉತ್ಪಾದಿಸುವ ಕಂಪನಿಗಳಲ್ಲಿ ಒಂದಾಗಿದ್ದು, ಸುಸ್ಥಿರ ಪರ್ಯಾಯ ಕಡೆಗೆ ಕೈಗೆಟುಕುವ ಸಾರಿಗೆ ಉಪಕ್ರಮದ ಅಡಿಯಲ್ಲಿ CBG ಪ್ರೋಗ್ರಾಂ ಅನ್ನು ಬಳಸಿದ ಮೊದಲ ಸಂಸ್ಥೆಗಳಲ್ಲಿ ಒಂದಾಗಿದೆ.

ಐಪಿಒ ಇಶ್ಯೂ ಡಿಟೇಲ್ಸ್‌
ಈ ಐಪಿಒ ಫೇಸ್ ವ್ಯಾಲ್ಯೂ ಪ್ರತಿ ಷೇರಿಗೆ 10 ರೂಪಾಯಿನಷ್ಟಿದ್ದು, ಹೊಸ ಷೇರುಗಳ ವಿತರಣೆಯ ಮೂಲಕ 750 ಕೋಟಿ ರೂಪಾಯಿ ಸಂಗ್ರಹಕ್ಕೆ ಮುಂದಾಗಿದೆ. ಆಫರ್‌ ಫಾರ್ ಸೇಲ್‌ ಮೂಲಕ 36 ಕೋಟಿ ಈಕ್ವಿಟಿ ಷೇರುಗಳನ್ನು ಪ್ರಮೋರ್ಟರ್ಸ್‌ ಮಾರುತ್ತಿದ್ದಾರೆ.

ಈ ಆಫರ್ ಫಾರ್ ಸೇಲ್‌ನಲ್ಲಿ ದ್ರಾಕ್ಷಾಯಿಟಿ ಸಂಗಮೇಶ್ ನಿರಾಣಿ ಗರಿಷ್ಠ 18 ಲಕ್ಷ ಈಕ್ವಿಟಿ ಷೇರುಗಳನ್ನು, ಸಂಗಮೇಶ್‌ ರುದ್ರಪ್ಪ ನಿರಾಣಿ 18 ಲಕ್ಷ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ

ಕಂಪನಿಯು ಐಪಿಒ ಮೂಲಕ ಸಂಗ್ರಹಿಸಿದ ಹಣವನ್ನು ಏನು ಮಾಡಲಿದೆ?
ಕಂಪನಿಯು ಫಂಡ್ ರೈಸ್‌ ಮೂಲಕ ಸಂಗ್ರಹಿಸಿದ ನಿಧಿಯಲ್ಲಿ 172.68 ಕೋಟಿ ರೂಪಾಯಿಗಳನ್ನು ಬಹು-ಫೀಡ್‌ ಕಾರ್ಚಾಚರಣೆಗಳನ್ನು ಸ್ಥಾಪಿಸಲು ಬಂಡವಾಳ ವೆಚ್ಚಗಳಿಗೆ ಹಣಕಾಸು ಒದಗಿಸಲು ಬಳಸುತ್ತಿದೆ. ಇದ್ರಿಂದ 300 ಕಿಲೋಲೀಟರ್ ಸಾಮರ್ಥ್ಯವನ್ನು ಹೊಂದಿರುವ ಟಿಬಿಎಲ್‌ ಯುನಿಟ್‌ 4ರಲ್ಲಿ ಎಥೆನಾಲ್ ಸ್ಥಾವರದಲ್ಲಿ ಹೆಚ್ಚುವರಿ ಕಚ್ಚಾ ವಸ್ತುವಾಗಿ ಧಾನ್ಯಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳನ್ನು ಪೂರೈಸಲು ಮತ್ತು ಸಾಮಾನ್ಯ ಕಾರ್ಪೊರೇಟ್‌ ಉದ್ದೇಶಗಳಿಗಾಗಿ 425 ಕೋಟಿ ರೂಪಾಯಿಗಳನ್ನು ಬಳಸಲಾಗುವುದು.

ಕಂಪನಿಯು ಆಫರ್‌ ಅನ್ನು ಬುಕ್‌ ಬಿಲ್ಡಿಂಗ್‌-ಪ್ರಕ್ರಿಯೆಯ ಮೂಲಕ ನಡೆಸಲಿದೆ. ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಪ್ರಮಾಣಾನುಗುಣವಾಗಿ ಹಂಚಿಕೆಗಾಗಿ ಕನಿಷ್ಠ 75% ಐಪಿಒ ಲಭ್ಯವಿರುತ್ತದೆ. ಸಾಂಸ್ಥಿಕವಲ್ಲದ ಬಿಡ್‌ದಾರರಿಗೆ ಬಿಡ್‌ ಮಾಡಲು 15%ಕ್ಕಿಂತ ಹೆಚ್ಚಿನ ಕೊಡುಗೆ ಲಭ್ಯವಿಲ್ಲ. ಇನ್ನು ಚಿಲ್ಲರೆ ಹೂಡಿಕೆದಾರರಿಗೆ ಹಂಚಿಕೆಗಾಗಿ 10% ಕ್ಕಿಂತ ಹೆಚ್ಚಿನ ಕೊಡುಗೆ ಲಭ್ಯವಿರುವುದಿಲ್ಲ.

ಐಪಿಒ ಬುಕ್‌ ರನ್ನಿಂಗ್‌ ಲೀಡ್ ಮ್ಯಾನೇಜರ್ಸ್!
ಟ್ರೂ ಆಲ್ಟ್‌ ಬಯೋ ಎನರ್ಜಿ ಐಪಿಒ ಬುಕ್‌-ರನ್ನಿಂಗ್‌ ಲೀಡ್ ಮ್ಯಾನೇಜರ್‌ಗಳಾಗಿ DAM ಕ್ಯಾಪಿಟಲ್‌ ಅಡ್ವೈಸರ್ಸ್ ಲಿಮಿಟೆಡ್‌ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್‌ ಲಿಮಿಟೆಡ್‌ ಇರಲಿದ್ದು, ಬಿಗ್‌ಶೇರ್‌ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ ಆಫರ್‌ಗೆ ರಿಜಿಸ್ಟಾರ್ ಆಗಿ ಕಾರ್ಯ ನಿರ್ವಹಿಸಲಿದೆ.

ಟ್ರೂ ಆಲ್ಟ್‌ ಬಯೋ ಎನರ್ಜಿ ಕಂಪನಿ ಮಾಹಿತಿ
ಮಾರ್ಚ್‌ 2021ರಲ್ಲಿ ಕರ್ನಾಟಕ ಮಾಜಿ ಮಧ್ಯಮ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿಯ ಮಗ ವಿಜಯ್‌ಕುಮಾರ್ ಮುರುಗೇಶ್‌ ನಿರಾಣಿ ಅವರು ಟ್ರೂಆಲ್ಟ್‌ ಬಯೋಎನರ್ಜಿ ಸ್ಥಾಪಿಸಿದರು. ಮಾರ್ಚ್‌ 31, 2024ರಲ್ಲಿ 1400 KLPDಯ ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಮೂಲಕ ಕಂಪನಿಯು ಪ್ರಸ್ತತ ಭಾರತದಲ್ಲಿ ಅತಿದೊಡ್ಡ ಎಥೆನಾಲ್ ಉತ್ಪಾದಕ ಕಂಪನಿಯಾಗಿ ಗುರುತಿಸಿಕೊಂಡಿದೆ. 2024ರ ಆರ್ಥಿಕ ವರ್ಷದಲ್ಲಿ ಟ್ರೂ ಆಲ್ಟ್‌ ಎಥೆನಾಲ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3.7% ಮಾರುಕಟ್ಟೆಯನ್ನು ಹೊಂದಿದೆ ಎಂದು CRISIL ವರದಿ ಹೈಲೆಟ್ ಮಾಡಿದೆ. ಇದೀಗ ಐಪಿಒ ಮೂಲಕ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಪಟ್ಟಿಯಾಗಲು ಪ್ರಸ್ತಾಪಿಸಲಾಗಿದೆ.

ಟ್ರೂ ಆಲ್ಟ್‌ ಬಯೋಎನರ್ಜಿ 2024ರ ಹಣಕಾಸು ವರ್ಷದಲ್ಲಿ 1,223.40 ಕೋಟಿ ರೂಪಾಯಿ ಏಕೀಕೃತ ಆದಾಯಗಳಿಸಿದೆ. ಮತ್ತು ತೆರಿಗೆ ನಂತರದ ಲಾಭವು 31.81 ಕೋಟಿ ರೂಪಾಯಿ ದಾಖಲಾಗಿದೆ.

Disclaimer : ಇಲ್ಲಿ ಒದಗಿಸಿದ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ತಿಳಿಸುವುದು ಮುಖ್ಯವಾಗಿದೆ. ಹೂಡಿಕೆದಾರರಾಗಿ, ಹಣವನ್ನು ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. ‘ಎಕನಾಮಿಕ್ ಟೈಮ್ಸ್ ಕನ್ನಡ’ ಯಾವುದೇ ಹಣವನ್ನು ಹೂಡಿಕೆ ಮಾಡಲು ಯಾರಿಗೂ ಸಲಹೆ ನೀಡುವುದಿಲ್ಲ ಹಾಗೂ ನಿಮ್ಮ ಹೂಡಿಕೆಗೆ ಲೇಖಕರಾಗಲಿ ಅಥವಾ ಎಕನಾಮಿಕ್ ಟೈಮ್ಸ್ ಕನ್ನಡ ಜವಾಬ್ದಾರರಲ್ಲ.

LOGO

Be the first to comment

Leave a Reply

Your email address will not be published.


*