ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಬ್ಬರ ನಡುವೆ ಜಟಾಪಟಿ

 

ಇಂಡಿ: ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಬ್ಬರ ನಡುವೆ ಪೈಪೋಟಿ ನಡೆದಿದ್ದು, ಓರ್ವ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಸೋಮವಾರ ನಡೆದಿದೆ.

ಪ್ರತಿಭಟನೆ ನಡೆಸುತ್ತಿರುವ ಇಓ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಜುಲೈ 29 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಪಂಚಾಯತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪಂಚಾಯತ್‌ ಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು.

ಮತ್ತೆ ಸರ್ಕಾರ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಾ ಪಂಚಾಯತ್ ಕಾರ್ಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ, ನಾನು ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರ ಕಳೆದಿದೆ. ಆದರೆ ಒಂದೇ ವಾರದಲ್ಲಿ ಮತ್ತೆ ವರ್ಗಾವಣೆ ಹೇಗೆ ಸಾಧ್ಯ? ಜುಲೈ 29ರ ವರೆಗೆ ಸರ್ಕಾರ ವರ್ಗಾವಣೆಗೆ ದಿನಾಂಕ ನಿಗದಿಗೊಳಿಸಿತ್ತು, ಆದರೂ ಸಹ ಜುಲೈ 31 ರಂದು ಆದೇಶ ಹೊರಡಿಸಿ ಇಂಡಿ ತಾಲೂಕ ಪಂಚಾಯತ್ ಕಚೇರಿಗೆ ಬಾಬುರಾವ್ ರಾಠೋಡ ಅವರನ್ನು ಹೆಚ್ಚುರಿಯಾಗಿ ನಿಯುಕ್ತಿಗೊಳಿಸಿರುವುದು ಎಷ್ಟು ಸರಿ? ಎಂದು ಗುರುಶಾಂತಪ್ಪ ಬೆಳ್ಳುಂಡಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಅವರು ಸರ್ಕಾರ ನನ್ನನ್ನು ಏಕೆ ಕಡೆಗಣಿಸುತ್ತಿದೆ? ನಾನೊಬ್ಬ ನಿವೃತ್ತ ಸೈನಿಕನಾಗಿದ್ದರೂ ಸಹ ನನಗೆ ಯಾವುದೇ ಗೌರವ ನೀಡದೆ ಏಕಾಏಕಿ ಬೇರೆ ಬೇರೆ ಕಡೆ ವರ್ಗಾವಣೆ ಮಾಡುತ್ತಿರುವುದು ಎಷ್ಟು ಸರಿ? ನಾನು ಧರಣಿ ಕುಳಿತ ಸ್ಥಳಕ್ಕೆ ಯಾರೂ ಬಂದಿಲ್ಲ, ನಾನು ಸತ್ತ ಮೇಲೆ ನನ್ನ ಮಕ್ಕಳಿಗೆ 5 ಲಕ್ಷ ಪರಿಹಾರ ಕೊಡಲು ಬರುತ್ತಾರೆಯೇ? ಆಗ ನನಗೆ ಬಂದು ಸಾಂತ್ವನ ಹೇಳಲು ಸಾಧ್ಯವೇ ಎಂದು ದುಃಖಭರಿತರಾಗಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.

LOGO

Be the first to comment

Leave a Reply

Your email address will not be published.


*