ಉತ್ತರ ಕರ್ನಾಟಕ ಭಾಗದ ಜೀವನಾಡಿ ಆಲಮಟ್ಟಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಮೂಲಕ ಆ ಭಾಗದ ರೈತರಲ್ಲಿ ಸಂತಸ ಹೆಚ್ಚಿದೆ. ಇನ್ನು ಕರ್ನಾಟಕದ 14 ಜಲಾಶಯಗಳ ಪೈಕಿ 3 ಜಲಾಶಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಂಪೂರ್ಣ ಭರ್ತಿಯಾಗಿವೆ. ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಶನಿವಾರ ತಡರಾತ್ರಿ ಭರ್ತಿ.
ರಾಜ್ಯದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ 163 ಟಿಎಂ ನೀರು ಹೆಚ್ಚು ಶೇಖರಣೆ.
ವರಾಹಿ, ತುಂಗಭದ್ರಾ ಹಾಗೂ ವಾಣಿ ವಿಲಾಸ ಸಾಗರ ಡ್ಯಾಂಗಳಲ್ಲಿ ನೀರು ಶೇ. 70 ಆಸುಪಾಸಿನಲ್ಲಿದೆ.
ಬೆಂಗಳೂರು: ಉತ್ತರ ಕರ್ನಾಟಕ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಶನಿವಾರ ತಡರಾತ್ರಿ ಸಂಪೂರ್ಣ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ತುಂಗಭದ್ರಾ ಹೊರತು ಪಡಿಸಿ ರಾಜ್ಯದ ಇತರೆ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.
ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ಗರಿಷ್ಠ ಎತ್ತರ 519.60 ಮೀಟರ್‌ವರೆಗೆ ನೀರು ಸಂಗ್ರಹಿಸಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ರಾಜ್ಯದ ಬೆಳಗಾವಿ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿಸುರಿದ ಮಳೆಯಿಂದಾಗಿ ಜಲಾಶಯ ಜುಲೈ ತಿಂಗಳ ಅಂತ್ಯದಲ್ಲೇ ಬಹುತೇಕ ಭರ್ತಿಯಾಗುತ್ತಿತ್ತು. ಆದರೆ ಪ್ರವಾಹ ಉಂಟಾಗದಿರಲೆಂದು ಕೇಂದ್ರ ಜಲ ಆಯೋಗದ ನೀತಿಯನ್ವಯ ಭರ್ತಿ ಮಾಡಿರಲಿಲ್ಲ. ಈಗ ಮತ್ತೆ ಮಹಾದಲ್ಲಿ ಮಳೆ ಆರಂಭವಾಗಿದ್ದರಿಂದ ಜಲಾಶಯ ಭರ್ತಿ ಮಾಡಲಾಗಿದೆ. ಶನಿವಾರ ಸಂಜೆ ಗರಿಷ್ಠ 123.081 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 22,432 ಕ್ಯುಸೆಕ್ ಇದ್ದರೆ, 15,000 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿತ್ತು.
795 ಟಿಎಂಸಿ ನೀರು ಸಂಗ್ರಹ
ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ, ರಾಜ್ಯದ 14 ಜಲಾಶಯಗಳ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 895 ಟಿಎಂಸಿ ಆಗಿದೆ. ಸದ್ಯ 795 ಟಿಎಂಸಿ ನೀರಿದೆ. ಇನ್ನು ಕಳೆದ ವರ್ಷ ಈ ವೇಳೆಗೆ 632 ಟಿಎಂಸಿ ಮಾತ್ರ ಸಂಗ್ರಹವಾಗಿತ್ತು. ಈ ಮೂಲಕ ಕಳೆದ ವರ್ಷಕ್ಕಿಂತ 163 ಟಿಎಂ ನೀರು ಹೆಚ್ಚು ಶೇಖರಣೆಯಾಗಿದೆ.
3 ಡ್ಯಾಂಗಳಲ್ಲಿ ಮಾತ್ರ ಶೇ. 70 ರಷ್ಟು ನೀರು
ಸದ್ಯ ಕರ್ನಾಟಕದಲ್ಲಿ 3 ಪ್ರಮುಖ ಡ್ಯಾಂಗಳಲ್ಲಿ ಮಾತ್ರ ಮುಕ್ಕಾಲು ಭಾಗ ನೀರಿದೆ. ಉಳಿದ ಜಲಾಶಯಗಳು ಶೇ. 95 ಕ್ಕೂ ಹೆಚ್ಚು ನೀಡಿದೆ. ವರಾಹಿ, ತುಂಗಭದ್ರಾ ಹಾಗೂ ವಾಣಿ ವಿಲಾಸ ಸಾಗರ ಡ್ಯಾಂಗಳಲ್ಲಿ ನೀರು ಶೇ. 70 ಆಸುಪಾಸಿನಲ್ಲಿದೆ.
ಜಲಾಶಯ ಗರಿಷ್ಠಮಟ್ಟ (ಮೀಟರ್) ಇಂದಿನ ಮಟ್ಟ (ಮೀಟರ್) ನೀರು ಸಂಗ್ರಹ ಸಾಮರ್ಥ್ಯ(TMC) ಸದ್ಯ ಸಂಗ್ರಹವಿರುವನೀರು (TMC)
ಕೆಆರ್‌ಎಸ್ 38.04 37 49.45 47.5
ಹಾರಂಗಿ 871.38 870 8.5 8
ಕಬಿನಿ 696.1 695 19.5 18.5
ಹೇಮಾವತಿ 890 890 37.1 36
ಲಿಂಗನಮಕ್ಕಿ 554 553 151.7 144
ಸೂಪಾ 564 558 145.3 122
ವರಾಹಿ 594 589 31.1 21
ತುಂಗಭದ್ರಾ 497 494 105 71
ಮಲಪ್ರಭಾ 633 633 37.7 34
ಘಟಪ್ರಭಾ 662 662 51 51
ಭದ್ರಾ 657 655 71.5 64
ಆಲಮಟ್ಟಿ 519 519 123 123
ನಾರಾಯಣಪುರ 492 492 33.3 33
ವಾಣಿವಿಲಾಸ ಸಾಗರ 652 648 30.4 19
Be the first to comment