ಜೇವರ್ಗಿ: ಪತ್ರಿಕೆಗಳು ಕೇವಲ ಆ ಕಾರ್ಯಕ್ರಮ ಈ ಕಾರ್ಯಕ್ರಮಗಳ ಸುದ್ದಿ ಮಾಡದೆ,ಸಮಾಜ ಮುಖಿ ಕಾರ್ಯದತ್ತ ದಾಪುಗಾಲು ಇಡಬೇಕು ಎಂದು ಕೆಕೆ ಅರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ಜನರ್ಲಿಸ್ಟ್ ಯೂನಿಯನ್ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಜಯ್ ಧರ್ಮಸಿಂಗ್ ಹೇಳಿದರು.
ಪತ್ರಿಕೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿ ಅಥವಾ ಸಾಮಾಜಿಕ ಸಮಸ್ಯೆಗಳ ಮೇಲೆ ಗಮನಹರಿಸಬೇಕು.ಇಂದು ಎಂದು ಅವರು ನುಡಿದರು.
ಕಾರ್ಯಕ್ರಮ ಉದ್ದೇಶಿಸಿ ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಬಿ ಸೀರಿ,ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಹರನಾಳ ಹಾಗೂ ಇತರರು ಮಾತನಾಡಿ,ಇಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಏಕಕಾಲದಲ್ಲಿ ಹಮ್ಮಿಕೊಂಡಿದ್ದು ಅರ್ಥಪೂರ್ಣ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು
ಇದೆ ಸಂದರ್ಭದಲ್ಲಿ ಸಮಾಜ ಸೇವಾ ರತ್ನ ಶಾಂತಪ್ಪ ಕೂಡಲಗಿ,ಮಾಧ್ಯಮ ರತ್ನ ಖ್ಯಾತ ಪತ್ರಕರ್ತ ಈರಣ್ಣ ಹಾದಿಮನಿ,ಕನ್ನಡದ ಸಾಹಿತ್ಯ ರತ್ನ ಎಸ್ ಕೆ ಬಿರಾದಾರ, ಸಂಗೀತ ರತ್ನ ಸುಧಾ ಭಗವಂತರಾಯ ಬೆಣ್ಣೂರ ರವರಿಗೆ ತ್ರಿವಿಧ ದಾಸೋಹಿ ಡಾ.ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯಮಟ್ಟದ ಗುರುದೇವ ಪ್ರಶಸ್ತಿ ವಿಜೇತರಾದ ಡಾ.ಧರ್ಮಣ್ಣ ಕೆ ಬಡಿಗೇರ ಹಾಗೂ ದಾನಮ್ಮ ಕಾಲೇಜಿನ ಪ್ರಾಚಾರ್ಯ ಜಗದೀಶ್ ಎಸ್ ಉಕನಾಳಕರ್ ರವರಿಗೆ ಸಾವಿರಾರು ಜನಸ್ತೋಮ ನಡುವೆ ಸಾರೋಟನಲ್ಲಿ ಮೇರವಣಿಗೆ ಮಾಡಿ ಗುರು ನಮನ ಸಲ್ಕಿಸಿದ್ದು,ಪತ್ರಿಕಾ ಕ್ಷೇತ್ರದಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮ.
ಪಟ್ಟಣದ ಮಿನಿ ವಿಧಾನ ಸೌಧದಿಂದ,ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ,ಅಖಂಡೇಶ್ವರ ವೃತ್ತದ ಮೂಲಕ ರಾಯಣ್ಣ ಸರ್ಕಲ್ ನಿಂದ ಕನ್ನಡ ಭವನದವರೆಗೆ ನಡೆಯಿತು. ಮೇರವಣಿಗೆಗೆ ಬಾಜಾ ಬಜಂತ್ರಿ ಡೊಳ್ಲುಗಳ ನಾದ ಸಂಗಮ ಮತ್ತು ಕುಂಬ ಕಳಸ ಹಾಗೂ ನೃತ್ಯಗಳು ಮೇರವಣಿಗೆ ಮತ್ತಷ್ಟು ಮೇರಗು ನೀಡಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತ್ರಿವಿಧ ದಾಸೋಹಿ ಹಾಗೂ ಅನ್ನದ ಮಠ ಎಂದೆ ಪ್ರಖ್ಯಾತಿ ಪಡೆದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ,ಡಾ.ಅಜಯಸಿಂಗ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ಚಂದ್ರಶೇಖರ ಹರನಾಳ,ಶಾಂತಪ್ಪ ಕೂಡಲಗಿ,ಚನ್ನಮಲ್ಲಯ್ಯ ಹಿರೇಮಠ, ಮರೆಪ್ಪ ಬಡಿಗೇರ, ರಾಜಶೇಖರ ಸೀರಿ,ತಹಸೀಲ್ದಾರ ಮಲ್ಲಣ್ಣ ಯಲಗೋಡ, ಡಾ.ಸಿದ್ದು ಪಾಟೀಲ್, ಶಂಭುಲಿಂಗ್, ಈರಣ್ಣ ಹಾದಿಮನಿ,ಡಿ ಬಿ ಪಾಟೀಲ್, ಎಸ್ ಕೆ ಬಿರಾದಾರ, ಕಲ್ಯಾಣಕುಮಾರ್ ಸಂಗಾವಿ ಗಂವ್ಹಾರ, ನದೀಮ ಮಳ್ಳಿಕರ,ಸಿದ್ರಾಮ ಕಟ್ಟಿ, ಭಗವಂತ್ರಾಯ ಬೆಣ್ಣೂರ, ಶ್ರೀಹರಿ ಕರಕಿಹಳ್ಳಿ, ಮರೆಪ್ಪ ಸರಡಗಿ ಅಕ್ಕನ ಬಳಗದ ಎಲ್ಲಾ ಸದಸ್ಯರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಗಣ್ಯರು ಸಮಾಜ ಸೇವಕರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜನರ್ಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷರಾದ ಧನರಾಜ ರಾಠೋಡ ಮುತ್ತಕೋಡ ವಹಿಸಿದ್ದರು. ಸ್ವಾಗತ ಭಗವಂತ್ರಾಯ ಬೆಣ್ಣೂರ,ನಿರೂಪಣೆ ಸಿದ್ರಾಮ ಕಟ್ಟಿ ಹಾಗೂ ಪ್ರಾಸ್ತಾವೀಕವಾಗಿ ತಾಲ್ಲೂಕು ಅಧ್ಯಕ್ಷ ಮರೆಪ್ಪ ಬೇಗಾರ ಮಾತನಾಡಿದರು. ಇದೆ ಕಾರ್ಯಕ್ರಮದಲ್ಲಿ ಯಡ್ರಾಮಿ ತಾಲ್ಲೂಕಿನ ಕರ್ನಾಟಕ ಜನರ್ಲಿಸ್ಟ್ ಯೂನಿಯನ್ ಅಧ್ಯಕ್ಷರನ್ನಾಗಿ ಸಂಜೆವಾಣಿ ವರದಿಗಾರರಾದ ಮಡಿವಾಳಪ್ಪ ಯತ್ನಾಳ ರವರನ್ನು ನೇಮಿಸಲಾಯಿತು.
ಜೇವರ್ಗಿ ತಾಲ್ಲೂಕಿನಲ್ಲಿ ಐತಿಹಾಸಿಕ ಪತ್ರಿಕಾ ದಿನಾಚರಣೆ.
ಪತ್ರಕರ್ತರು ಸಮಾಜಮುಖಿಯತ್ತ ದಾಪುಗಾಲು ಇಡಿ ಅಜಯಸಿಂಗ್ ಕರೆ.
” ಗುರುಗಳ ಭವ್ಯ ಮೇರವಣಿಗೆ ಸಾರ್ವಜನಿಕರಿಂದ ಮೆಚ್ಚುಗೆ ನುಡಿ.
ರಾಜ್ಯಮಟ್ಟದ ಗುರುದೇವ ಪ್ರಶಸ್ತಿ ಬಡಿಗೇರ ಹಾಗೂ ಉಕನಾಳಕರ್ ಮಡಲಿಗೆ.
ಬಾಜಾ ಬಜಂತ್ರಿ,ಡೊಳ್ಳುಗಳ ನಾದ ಸಂಗಮ.
ಮಿನಿ ವಿಧಾನಸೌಧದಿಂದ ವೇದಿಕೆವರೆಗೆ ಗುರುಗಳ ಭವ್ಯ ಮೇರವಣಿಗೆ.
ಸಮಾಜಮುಖಿ ಸೇವೆಗೈದ ಸಾಧಕರಿಗೆ ನಲ್ಮೇಯ ಸನ್ಮಾನ.
ಪ್ರಶಸ್ತಿಗಳು ಸಾಧಕರಿಗೆ ಮಾತ್ರ ಲಭಿಸುತ್ತವೆ
ಯಾವುದೇ ಪ್ರಶಸ್ತಿ ಸಮ್ಮಾನಗಳು ಆದರ್ಶ ವ್ಯ್ತಕ್ತಿಗಳಿಗೆ ಮಾತ್ರ ಲಭಿಸುತ್ತವೆ. ಅವರ ಕಾರ್ಯದಕ್ಷತೆ, ಸಮಾಜಮುಖಿ ಕಾರ್ಯವನ್ನು ಪರಿಗಣಿಸಿ ನೀಡಲಾಗುತ್ತದೆ. ಪ್ರಶಸ್ತಿಗಗಳ ಬೆನ್ನಿಗೆ ಹೋಗದೆ ಪ್ರಶಸ್ತಿಗಳು ತಮ್ಮ ಬೆನ್ನತ್ತಿ ಬಂದಿರುವುದು ತಮ್ಮ ಕಾರ್ಯ ಚಟುವಟಿಕೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ವರದಿ. ಸಿದ್ದನಗೌಡ ಪಾಟೀಲ ಜೇವರ್ಗಿ ತಾಲೂಕ
Be the first to comment