ಬುಲ್ಸಗಳ ಕೋಟೆ’-ಹರಾಜಿನ ಬಳಿಕ ಬೆಂಗಳೂರು ಬುಲ್ಸ್‌ ತಂಡ ಹೇಗಿದೆ ನೋಡಿ

 

ಹನ್ನೊಂದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ಶುಕ್ರವಾರ ರಾತ್ರಿ (ಆಗಸ್ಟ್‌ 16) ಅಂತ್ಯವಾಯಿತು. ಬೆಂಗಳೂರು ಬುಲ್ಸ್ ತಂಡ ಹರಾಜಿನಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಿದೆ. ಇವರ ಪೈಕಿ ಅತ್ಯಂತ ದುಬಾರಿ ಆಟಗಾರ ರೈಡರ್‌ ಅಜಿಂಕ್ಯ ಪವಾರ್‌. ಇವರನ್ನು ಬುಲ್ಸ್‌ ತಂಡ 1.107 ಕೋಟಿ ರೂ. ಗಳನ್ನು ನೀಡಿ ಖರೀದಿಸಿದೆ. ಮತ್ತೊಂದು ವಿಶೇಷ ಸಂಗತಿ ಏನೆಂದರೆ ತಮ್ಮ ಹಳೆ ಆಟಗಾರ ಪ್ರದೀಸ್‌ ನರ್ವಾಲ್‌ ಅವರನ್ನು ಮರಳಿ ಕರೆದುಕೊಂಡಿದೆ. ಹರಾಜಿನ ಬಳಿಕ ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ತಂಡವನ್ನು ಇಲ್ಲಿ ವಿವರಿಸಲಾಗಿದೆ.

ಹೈಲೈಟ್ಸ್‌:
ಹನ್ನೊಂದನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆಯು ಶುಕ್ರವಾರ ಅಂತ್ಯವಾಗಿದೆ.
ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ಆಟಗಾರರ ವಿವರ ಇಲ್ಲಿದೆ.
1.107 ಕೋಟಿ ರೂಗಳನ್ನು ಪಡೆದ ಅಜಿಂಕ್ಯ ಪವಾರ್‌ ಬುಲ್ಸ್‌ ಪರ ಅತ್ಯಂತ ದುಬಾರಿ ಆಟಗಾರ.

ಮುಂಬೈ: “ಬರೆವರು ಹೊಸದೊಂದು ಶಾಸನ, ಸೃಷ್ಟಿಸುವರು ಇತಿಹಾಸ. ಬಲಾಢ್ಯರಲ್ಲಿ ಬಲಾಢ್ಯರು, ಬಲಭೀಮ ಚಾಣಕ್ಯರು ತುಂಬಿರುವ ಈ ತಂಡ, ನಿಜಕ್ಕೂ ‘ಕಿಂಗ್’ಗಳೂರು!” ಇದು ಹನ್ನೊಂದನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಬೆಂಗಳೂರು ಬುಲ್ಸ್‌ ತಂಡ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಬರೆದಿರುವ ಸಾಲುಗಳು. ಕನ್ನಡದ ಈ ಪ್ರೇರಕ ಸಾಲುಗಳನ್ನು ಓದಿದ ಬಳಿಕ, ಬುಲ್ಸ್‌ ಮುಂದಿನ ಬಾರಿ ಚಾಂಪಿಯನ್‌ ಆಗಬೇಕೆಂಬ ಹಸಿವನ್ನು ಹೊಂದಿದೆ ಎಂಬುದು ಸಾಬೀತಾಗಿದೆ.

ಎರಡು ದಿನಗಳ ಕಾಲ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ಬುಲ್ಸ್ ತಂಡ ಒಟ್ಟು 7 ಆಟಗಾರರನ್ನು ಖರೀದಿಸಿದೆ. ಆ ಮೂಲಕ ಉಳಿಸಿಕೊಂಡಿರುವ ಸೌರಭ್‌ ನಂದಲ್ ನಾಯಕತ್ವದ ಬುಲ್ಸ್‌ ತಂಡವನ್ನು ಬಲಿಷ್ಠಗೊಳಿಸಲಾಗಿದೆ. ಅಜಿಂಕ್ಯ ಪವಾರ್‌, ಪ್ರದೀಪ್ ನರ್ವಾಲ್‌ ಸೇರಿದಂತೆ ನಾಲ್ಕು ರೈಡರ್‌ಗಳು ಬೆಂಗಳೂರು ತಂಡಕ್ಕೆ ಬಂದಿದ್ದಾರೆ

ಪ್ರೋ ಕಬಡ್ಡಿ ಆಕ್ಷನ್‌ನಲ್ಲಿ ಬೆಂಗಳೂರು ಬುಲ್ಸ್ ತಂಡ, ಸ್ಟಾರ್‌ ರೈಡರ್‌ ಅಜಿಂಕ್ಯ ಪವಾರ್‌ ಅವರನ್ನು 1.107 ಕೋಟಿ ರೂ. ಗಳನ್ನು ಖರೀದಿಸಿದೆ. ಇದರ ಜೊತೆಗೆ ಮುಖ್ಯವಾಗಿ ಪ್ರೊ ಕಬಡ್ಡಿ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು 70 ಲಕ್ಷ ರೂ. ಗಳಿಗೆ ಮರಳಿ ಕರೆದುಕೊಂಡಿದೆ. ಮತ್ತೊಂದೆಡೆ ಯು ಮುಂಬಾ ಮಾಜಿ ರೈಡರ್‌ 63 ಲಕ್ಷ ರೂ. ಗಳಿಗೆ ಜೈ ಭಗ್ವಾನ್ ಅವರನ್ನು ಕೂಡ ಸೇರಿಸಿಕೊಂಡಿದೆ.

ನಾಯಕ ಸೌರಭ್ ನಂದಲ್‌ ಹಾಗೂ ರೋಹಿತ್‌ ಕುಮಾರ್‌ ಇಬ್ಬರು ಡಿಫೆಂಡರ್‌ಗಳು ಬೆಂಗಳೂರು ಬುಲ್ಸ್‌ ತಂಡದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದ್ದಾರೆ. ಇದೀಗ ಅತ್ಯುತ್ತಮ ಡಿಫೆಂಡಿಂಗ್‌ ಹಾಗೂ ರೈಡಿಂಗ್ ವಿಭಾಗಗಳು ಅತ್ಯಂತ ಬಲಿಷ್ಠವಾಗಿದೆ.

https://x.com/BengaluruBulls/status/1824474256278798628

ಹರಾಜಿನಲ್ಲಿ ಬೆಂಗಳೂರು ಬುಲ್ಸ್‌ ಖರೀದಿಸಿದ ಆಟಗಾರರು
ಅಜಿಂಕ್ಯ ಅಶೋಕ್ ಪವಾರ್ – ರೈಡರ್ | 1.107 ಕೋಟಿ ರೂ
ಪರ್ದೀಪ್ ನರ್ವಾಲ್ – ರೈಡರ್ | 70 ಲಕ್ಷ ರೂ
ಹಸುನ್ ತೊಂ ಥಾಂಗ್ಕ್ರೂಯಾ – ಡಿಫೆಂಡರ್ ರೈಟ್ ಕಾರ್ನರ್ | 13 ಲಕ್ಷ ರೂ
ಪ್ರಮೋತ್ ಸೈಸಿಂಗ್ – ರೈಡರ್ | 13 ಲಕ್ಷ ರೂ
ನಿತಿನ್ ರಾವಲ್ – ಆಲ್‌ರೌಂಡರ್ | INR 13 ಲಕ್ಷ ರೂ
ಜೈ ಭಗವಾನ್ – ರೈಡರ್ | 63 ಲಕ್ಷ ರೂ
ಜತಿನ್ – ರೈಡರ್ | 13 ಲಕ್ಷ ರೂ

ಬೆಂಗಳೂರು ಬುಲ್ಸ್‌ ಉಳಿಸಿಕೊಂಡ ಆಟಗಾರರು
ಸೌರಭ್ ನಂದಲ್ – ಡಿಫೆಂಡರ್ ರೈಟ್ ಕಾರ್ನರ್
ಪೊನ್‌ಪರ್ತಿಬನ್ ಸುಬ್ರಮಣಿಯನ್ – ಡಿಫೆಂಡರ್ ರೈಟ್ ಕವರ್
ಸುಶೀಲ್ – ರೈಡರ್
ರೋಹಿತ್ ಕುಮಾರ್ – ಡಿಫೆಂಡರ್ ಲೆಫ್ಟ್ ಕವರ್
ಆದಿತ್ಯ ಶಂಕರ್ ಪೊವಾರ್ – ಡಿಫೆಂಡರ್ ಎಡ ಮೂಲೆ
ಅಕ್ಷಿತ್ – ಲೆಫ್ಟ್ ರೈಡರ್
ಅರುಳ್ನಂತಬಾಬು – ಡಿಫೆಂಡರ್ ರೈಟ್ ಕಾರ್ನರ್
ಪಾರ್ತೀಕ್ – ಡಿಫೆಂಡರ್ ಲೆಫ್ಟ್ ಕವರ್

ಬೆಂಗಳೂರು ಬುಲ್ಸ್‌ ಸಂಪೂರ್ಣ ತಂಡ
ರೈಡರ್ಸ್‌: ಅಜಿಂಕ್ಯ ಅಶೋಕ್ ಪವಾರ್‌, ಪ್ರದೀಪ್ ನರ್ವಾಲ್‌, ಪ್ರಮೋತ್ ಸೈಸಿಂಗ್, ಜೈ ಭಗವಾನ್‌, ಜತಿನ್, ಸುಶೀಲ್‌, ಅಕ್ಷಿತ್‌
ಡಿಫೆಂಡರ್ಸ್: ಹಸುನ್‌ ಥಾಂಗ್ಕ್ರೂಯಾ, ಸೌರಭ್ ನಂದಲ್‌, ಪೊನ್‌ಪರ್ತಿಬನ್ ಸುಬ್ರಮಣಿಯನ್, ರೋಹಿತ್‌ ಕುಮಾರ್‌, ಆದಿತ್ಯ ಶಂಕರ್‌ ಪವಾರ್, ಅರುಳ್ನಂತಬಾಬು, ಪಾರ್ತೀಕ್
ಆಲ್‌ರೌಂಡರ್‌: ನಿತಿನ್ ರಾವಲ್‌.

LOGO

 

 

 

Be the first to comment

Leave a Reply

Your email address will not be published.


*