ಹಸಿವು ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಸರ್ಕಾರದ ಧ್ಯೇಯ – ರಹೀಂ ಖಾನ್
ವಿಜಯಪುರ ಆಗಸ್ಟ್ 13 : ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಂ ಖಾನ್ ರವರು ವಿಜಯಪುರದ ಪ್ರವಾಸದ ವೇಳೆ ಸಿಂಧಗಿಯ ತಾಲ್ಲೂಕು ಆಸ್ಪತ್ರೆ ಬಳಿ ಇರುವ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದರು. ಸದ್ಯ ಇಂದಿರಾ ಕ್ಯಾಂಟಿನ್ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು. ಅತೀ ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದಿರಾ ಕ್ಯಾಂಟಿನ್ ಮಾನ್ಯ ಮುಖ್ಯಮಂತ್ರಿಗಳ ಕನಸಿನ ಯೋಜನೆಯಾಗಿದೆ ಹಾಗೂ ಇಂದಿರಾ ಕ್ಯಾಂಟಿನ್ ನಿಂದ ರಾಜ್ಯದಲ್ಲಿ ದಿನನಿತ್ಯ ಸಾವಿರಾರು ಜನಗಳ ಹಸಿವು ನೀಗುತ್ತಿದೆ. ಸರ್ಕಾರದ ಈ ಮಹತ್ತರವಾದ ಯೋಜನೆಯನ್ನು ಇನ್ನಷ್ಟು ಜನಗಳಿಗೆ ತಲುಪಿಸಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ ಹಾಗೂ ರಾಜ್ಯದಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು. ಹಸಿವು ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಸರ್ಕಾರದ ಧ್ಯೇಯ
Be the first to comment