ಬೆಂಗಳೂರು: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ಸಪ್ಟೆಂಬರ್ 27, ಶುಕ್ರವಾರ ದಂದು ಬೆಂಗಳೂರಿನ ಪ್ರತಿಷ್ಠಿತ ರಂಗಮಂದಿರವಾದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಯಿಂದ ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ ಹಾಗೂ ವಿಶ್ವಕರ್ಮ ಶ್ರೀ ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಂಸ್ಥೆಯು ಆಯೋಜಿಸುವ ವಾರ್ಷಿಕ ಸಮಾರಂಭ ಇದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಮಹೋತ್ಸವದ “ಆಹ್ವಾನ ಪೋಸ್ಟರ್” ಬಿಡುಗಡೆ ಸಮಾರಂಭದಲ್ಲಿ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ. ಬಿ. ಎಂ. ಉಮೇಶ್ ಕುಮಾರ್ ಅವರು ಮಾತನಾಡಿ “ಈ ವರ್ಷದ ಸಮಾರಂಭವು ಅತ್ಯಂತ ವೈವಿಧ್ಯತೆಯಿಂದ ಕೂಡಿರಲಿದ್ದು, ವಿಶ್ವಕರ್ಮ ಸಮುದಾಯದ ಹಾಗೂ ಸರ್ವ ಸಮುದಾಯದ ಯತಿವರೇಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಣ್ಯ ಸಚಿವರು, ಸಂಸದರು, ಶಾಸಕರು, ಹಲವು ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಸಹ ಕಾರ್ಯಕ್ರಮದಲ್ಲಿ ನಮ್ಮ ಜೊತೆಯಾಗಲಿದ್ದು, ಈ ಸಂದರ್ಭದಲ್ಲಿ ವಿಶ್ವಕರ್ಮ ಶ್ರೀ ಮತ್ತು ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಈಗಾಗಲೇ ಸಮಾರಂಭದ ಪೂರ್ವ ತಯಾರಿ ಭರದಿಂದ ಸಾಗಿದ್ದು, ಈ ಮೂಲಕ ಸಮಸ್ತ ವಿಶ್ವಕರ್ಮರ ಸಹಕಾರವನ್ನು ಕೋರುತ್ತಿದ್ದೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಲ್ಪಿ ಹೊನ್ನಪ್ಪ ಚಾರ್, ಶ್ರೀ ಮಧುಸೂದನ್, ಡಾ.ಬಿ.ಆರ್ ಹಿರೇಮಠ್, ಚಿತ್ತಾರ ಶಿವಕುಮಾರ್, ಎಸ್. ರವಿ , ಬಾಬು ಪತ್ತಾರ್, ಜಿ.ಶಂಕರ್, ಈಶ್ವರ ಆಚಾರಿ,ಚಳ್ಳಕೆರೆ ಶ್ರೀ ಪ್ರಸನ್ನ ಕುಮಾರ್, ಶಿಲ್ಪಿ ನಂಜುಂಡಸ್ವಾಮಿ, ಶ್ರೀ ಚಂದ್ರ ಆಚಾರ್ ಹಾಗೂ ಅನೇಕ
ವಿಶ್ವಕರ್ಮ ಸಮಾಜದ ಮುಖಂಡರು ಮತ್ತು ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಮುಖ್ಯ ಕಾರ್ಯದರ್ಶಿ ಕೆ. ಚಂದ್ರಶೇಖರ ಆಚಾರಿ ಹಾಗೂ ಉಪಾಧ್ಯಕ್ಷ ಎಸ್. ನಂಜುಂಡ ಪ್ರಸಾದ್ ಉಪಸ್ಥಿತರಿದ್ದರು.
Be the first to comment