ಹೂವಿನ‌ ಹಿಪ್ಪರಗಿ ನೆಮ್ಮದಿ ಕೇಂದ್ರದಲ್ಲಿ ದಿನವಿಡೀ ಕ್ಯೂ ನಿಂತರೂ ಸಿಗ್ತಿಲ್ಲ ದಾಖಲೆ!

ಹೂವಿನ‌ ಹಿಪ್ಪರಗಿ ಜುಲೈ  10 :   ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು ಜಾತಿ ಆದಾಯ ಪ್ರಮಾಣ ಪತ್ರ ಬೇಕು, ವಿದ್ಯಾರ್ಥಿಗಳ ಸ್ಕಾಲರ್‌ಷಿಪ್‌ಗೆ ಅರ್ಜಿ ಹಾಕಬೇಕು. ಕೋರ್ಟ್‌ನಲ್ಲಿ ಕೇಸಿಗೆ ಪಹಣಿ, ಮ್ಯುಟೇಷನ್‌ಬೇಕು…, ಹೀಗೆ ಹಲವು ಪ್ರಮಾಣ ಪತ್ರಗಳಿಗಾಗಿ ಹೂವಿನ‌‌ ಹಿಪ್ಪರಗಿ ಉಪ ತಹಶಿಲ್ದಾರರ ಕಚೇರಿ ನೆಮ್ಮದಿ ಕೇಂದ್ರಕ್ಕೆ ಬರುವ ಜನರಿಗೆ ಸರ್ವರ್‌ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು ಜಾತಿ ಆದಾಯ ಪ್ರಮಾಣ ಪತ್ರ ಬೇಕು, ವಿದ್ಯಾರ್ಥಿಗಳ ಸ್ಕಾಲರ್‌ಷಿಪ್‌ಗೆ ಅರ್ಜಿ ಹಾಕಬೇಕು. ಕೋರ್ಟ್‌ನಲ್ಲಿ ಕೇಸಿಗೆ ಪಹಣಿ, ಮ್ಯುಟೇಷನ್‌ಬೇಕು…, ಹೀಗೆ ಹಲವು ಪ್ರಮಾಣ ಪತ್ರಗಳಿಗಾಗಿ ತಾಲೂಕು ಕಚೇರಿ ನೆಮ್ಮದಿ ಕೇಂದ್ರಕ್ಕೆ ಬರುವ ಜನರಿಗೆ ಸರ್ವರ್‌ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನೆಮ್ಮದಿ ಕೇಂದ್ರದಲ್ಲಿ ದಿನ ಪೂರ್ತಿ ಕಾದರೂ ಕೆಲಸವಾಗದೆ ಮತ್ತೆ ನಾಳೆಗೂ ಸರತಿ ಸಾಲಲ್ಲಿ ಕಾಯುವ ದೃಶ್ಯ ಉಪ ತಹಶಿಲ್ದಾರರ ಕಚೇರಿಯಲ್ಲಿ ಪ್ರತಿದಿನ ಸರ್ವೇ ಸಾಮಾನ್ಯವೆನಿಸಿದೆ. ದಾಖಲೆ ಪಡೆಯಲು ಹೋದಾಗ ನೆಮ್ಮದಿ ಕೇಂದ್ರದವರು ಒಂದಲ್ಲಾ ಒಂದು ನೆಪವೇಳಿ ಬಂದವರನ್ನು ವಾಪಸ್ಸು ಕಳುಹಿಸುವುದನ್ನು ಚಾಳಿಯಾಗಿಸಿಕೊಂಡಿದೆ. ಸರ್ವರ್‌ ಬ್ಯುಸಿ, ನೆಟ್‌ವರ್ಕ್‌ ಇಲ್ಲ, ಪ್ರಿಂಟ್‌ ಸರಿಯಿಲ್ಲ, ಮಧ್ಯಾಹ್ನ ಊಟದ ಸಮಯ ಎಂದು ಏನೆಲ್ಲಾ ಸಬೂಬುಗಳನ್ನು ಹೇಳಲು ಸಾಧ್ಯವೋ ಅವೆಲ್ಲವುಗಳನ್ನು ಹೇಳಿ ಬಂದವರನ್ನು ಸಾಗುಹಾಕುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ಸರತಿಯಲ್ಲಿ ಜಗಳ: ಸರತಿಯಲ್ಲಿ ನಿಂತು ದಿನಪೂರ್ತಿ ಕಾಯುವವರು ಅಕಸ್ಮಾತ್‌ ನೆಮ್ಮದಿ ಕೇಂದ್ರವನ್ನು ನೋಡಲು ಬಂದವರ ಮೇಲೂ ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಸಾಮಾನ್ಯವಾಗಿದೆ. ತಮಗಿಂತಲೂ ಮುಂದೆ ಮತ್ತೊಬ್ಬರು ಬಂದು ಸೇರಿಕೊಂಡರೆ ತಡವಾಗಬಹುದೆಂದು ಈ ರೀತಿ ಗಲಾಟೆ ಮುಂದಾಗುತ್ತಿದ್ದಾರೆ.

ಆದಾಯ, ಜಾತಿ ಪ್ರಮಾಣ ಪತ್ರಗಳಿಗೆ ಹೆಚ್ಚಿದ ಬೇಡಿಕೆ: ಶಾಲಾ ಕಾಲೇಜುಗಳಿಗೆ ದಾಖಲಾತಿ ಸಮಯವಾದ್ದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಅನಿವಾರ್ಯವಾಗಿ ಬೇಕಿರುವುದರಿಂದ ಕಷ್ಟವಾದರೂ ಸರಿಯೇ ಕಾದು ಪ್ರಮಾಣ ಪತ್ರಗಳನ್ನು ಪಡೆದೇ ತೀರಬೇಕು ಎಂದು ಪೋಷಕರು ಬಂದಿರುತ್ತಾರೆ. ಆದರೆ ಅವುಗಳು ಸೂಕ್ತ ಸಮಯಕ್ಕೆ ಒದಗಿಸುವಲ್ಲಿ ನೆಮ್ಮದಿ ಕೇಂದ್ರ ವಿಫಲವಾದ ಕಾರಣ ಶಾಲಾ ಕಾಲೇಜುಗಳ ದಾಖಲೆಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಪ್ರತಿದಿನ ಸ್ಥಗಿತಗೊಳುವ ನೆಮ್ಮದಿ ಕೇಂದ್ರ ಸರ್ವರ್‌ : ಕಳೆದ ಕೆಲದಿನಗಳಿಂದ ಸರ್ವರ್‌ ತಾಸು ಎರಡು ತಾಸಿಗೊಮ್ಮೆ ಸ್ಥಗಿತವಾಗಿದ್ದ ನೆಮ್ಮದಿ ಕೇಂದ್ರ ಒಂದೊಂದಿನವಂತರು ಸಂಪೂರ್ಣವಾಗಿ ಬಂದ್‌ ಆಗಿತ್ತೆ. ಇದಕ್ಕೆ ಕಾರಣವನ್ನು ಕೇಳಿದಾಗ ಪ್ರಿಂಟರ್‌ನಲ್ಲಿ ಕಾಟ್ರಿಜ್‌ ಮುಗಿದಿದೆ. ಪ್ರಿಂಟ್‌ಔಟ್‌ ಸರಿಯಾಗಿ ಬರುತ್ತಿಲ್ಲ, ಸರ್ವರ್‌ ಪ್ರಾಬ್ಲಂ ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳು ಬಂದವರಿಗೆ ಸಾಗ ಹಾಕುತ್ತಿದ್ದರು.

ಒಟ್ಟಾರೆ ದಿನದ 24 ಗಂಟೆ ಕೆಲಸ ಮಾಡಿದರೂ ನೀಗದಷ್ಟು ಕೆಲಸಗಳಿರುವಾಗ ಇರುವ ಒಂದು ನೆಮ್ಮದಿ ಕೇಂದ್ರವೂ ಜನರಿಗೆ ಯಾವುದಕ್ಕೂ ಎಟುಕದಂತಾಗಿದೆ. ಶಾಲಾ ಕಾಲೇಜುಗಳ ದಾಖಲಾತಿಗಳು ಹೆಚ್ಚಿರುವ ಪ್ರಸಕ್ತ ಸಂದರ್ಭದಲ್ಲಿ ನೆಮ್ಮದಿ ಕೇಂದ್ರವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಜನರ ಸಂಕಷ್ಟಗಳನ್ನು ನೀಗುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ, 

ನಾನು ಪ್ರಥಮ ವರ್ಷದ ಬಿಎ ಬಸವೇಶ್ವರ ಪದವಿ ವಿದ್ಯಾಲಯ ಬಸವನ ಬಾಗೇವಾಡಿ ವಾಡಿಯಲ್ಲಿ ಓದುತ್ತಿದೆನೆ. ನಾನು ನನ್ನ ಕಾಸ್ಟಗಾಗಿ ಎಲ್ಲ ಸರಿಯಾದ ದಾಖಲೆ ಹೊಂದಿಗೆ ಅರ್ಜಿ ಹಾಕಿದೆ ಕಾಸ್ಟ ನಲ್ಲಿ‌ ನನ್ನ ತಂದೆಯ ಶರಣಪ್ಪ ಎಂದು ಬರಬೇಕಿತ್ತು ಕಂಪ್ಯೂಟರ್ ಆಪರೇಟರ್ ಶಿವಾನಂದ‌ ಚೌಧರಿ ರ ತಪ್ಪಿನಿಂದ ಶ್ರಾಣಪ್ಪ ಎಂದು ಬಂದಿದೆ ಇದನು‌ ಸರಿ‌ಪಡಿಸಿಕೋಡಿ ಎಂದು ಒಂದುವಾರದಿಂದ ಅಲೆಯುತ್ತಿದೆನೆ.ಬಾಗೇವಾಡಿ ಹೂವಿನ ಹಿಪ್ಪರಗಿಗೆ ಅಲ್ಲಿಸುತ್ತಿದ್ದಾರೆ ವಿನಾ: ಸರಿ ಪಡಿಸಿಕೋಡುತ್ತಿಲ್ಲ ನಾನು ಕಾಜೇಜು ತರಗತಿ ಬಿಟ್ಟು ನಿತ್ಯ ಅಲೆಯುವಂತಾಗಿದೆ

ವಿರೇಶ ತಂದೆ ಶರಣಪ್ಪ ಬೂದಿಹಾಳ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಸಾ:ಕಾಮನಕೇರಿ

 

ನನ್ನ ಮಗಳನ್ನು ಪದವಿಗೆ ಸೇರಿಸಬೇಕಾಗಿದು ಕೊನೆಯ ದಿನಾಂಕ ಸಮೀಪಿಸುತ್ತಿದೆ, ಕೋನೆಯ ದಿನಾಂಕದ ನಂತರ ದಂಡ ಕಟ್ಟಬೇಕು. ಆದ್ದರಿಂದ ಸುಮಾರು ಒಂದು ವಾರದಿಂದ ಹುವಿನ ಹಿಪ್ಪರಗಿ ನೆಮ್ಮದಿ ಕೇಂದ್ರಕ್ಕೆ ಜಾತಿ ಪ್ರಮಾಣ ಪತ್ರಕ್ಕಾಗಿ ತಿರುಗಾಡುತ್ತಿದ್ದೇನೆ. ಈವರೆಗೂ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಲಾಗಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ.
-ಹೆಸರೇಳಲಿಚ್ಚಿಸದ ನೊಂದ ಮಹಿಳೆ.

LOGO
Logo

Be the first to comment

Leave a Reply

Your email address will not be published.


*