ಕಾಮನಕೇರಿ ಗ್ರಾಮದ ರೈತ ಸಾಲಬಾಧೆಯಿಂದ ಕಂಗೆಟ್ಟು ನೇಣಿಗೆ ಶರಣು

ಬಸವನ ಬಾಗೇವಾಡಿ : ಸಾಲ ಬಾಧೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದಲ್ಲಿ ನಡೆದಿದೆ. ರೈತ ಹನುಮಂತ ಭೀಮಪ್ಪ ಹಂಚಲಿ (59 ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಬಿ.ಸಿ , ಬೆಳೆ ಸಾಲ, ಕೈ ಸಾಲ,ಬಂಗಾರ ಅಡ ಇಟ್ಟಿರುವ ಸಾಲ,ಗ್ರಾಮೀಣ ವಿಕಾಸ ಬ್ಯಾಂಕ್  ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕುದರಿ ಸಾಲವಾಡಗಿ ಸೇರಿದಂತೆ ಹತ್ತು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿದ್ದ ಎನ್ನಲಾಗಿದೆ. ಹೊದ ವರ್ಷದ ಬರಗಾಲ ಇದ್ದ ರಿಂದ ಹೊಲದಿಂದ ಅಪಾರ ನಷ್ಟ ಉಂಟಾಗಿತ್ತು. 10 ಎಕರೆ ಜಮೀನು ಹೊಂದಿದ್ರು ಕೂಡಾ ಯಾವುದೇ ಬೆಳೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದ. ಲಕ್ಷಗಟ್ಟಲೆ ಸಾಲವನ್ನು ತೀರಿಸಲಾಗದೆ ಕಂಗೆಟ್ಟಿದ್ದ ರೈತ ನೇಣಿಗೆ ಶರಣಾಗಿದ್ದಾನೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LOGO
Logo

Be the first to comment

Leave a Reply

Your email address will not be published.


*