ಕೋಲಿ ಬೆಸ್ತ ಸಮಾಜ ಹಾಗೂ ಹಾಸನ ಜಿಲ್ಲೆ ಸಾಂಪ್ರದಾಯಿಕ ಮೀನುಗಾರರಿಂದ  ಪ್ರತಿಭಟನೆ

ವರದಿ :: ಸೂರ್ಯಪ್ರಕಶ ಕೋಲಿ‌ ಬೆಂಗಳೂರು

ಕೋಲಿ ಬೆಸ್ತ ಸಮುದಾಯದ ಮುಖಂಡರಾದ
ಪದ್ಮಶಿವನಂಜು ಹಾಗೂ ಸಾಂಪ್ರದಾಯಿಕ ಮೀನುಗಾರರ
ಜಂಟಿ ನಾಯಕತ್ವದಲ್ಲಿ ಹಾಸನ ಜಿಲ್ಲೆ ಸಾಂಪ್ರದಾಯಿಕ ಮೀನುಗಾರರಿಂದ ಹಾಸನ ನಗರದಲ್ಲಿ ಪ್ರತಿಭಟನೆ.!

ಹಾಸನ :: ಹಾಸನ ಜಿಲ್ಲೆಯ ಕೋಲಿ ಬೆಸ್ತ ಸಮಾಜ ಹಾಗೂ ಸಾಂಪ್ರದಾಯಿಕ ಮಿನುಗಾರರ
ನಿಯೋಗವು ಹಾಸನ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜಿಲ್ಲೆಯ ಸಾಂಪ್ರದಾಯಿಕ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರವಾಗಿ ಪರಿಹಾರ
ದೊರಕಿಸಿಕೊಡುವಂತೆ ಸಾಂಪ್ರದಾಯಿಕ ಮೀನುಗಾರಿಗೆ ನ್ಯಾಯನೀಡಬೇಕು ಎಂದು ಆಗ್ರಹಸಿ ಪ್ರತಿಭಟನೆ ಮಾಡಿದರು


 ಹಾಸನ ಜಿಲ್ಲಾ ಮೀನುಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದಿದ್ದರೆ  ಹಾಸನ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಿರಂತರ ಧರಣಿ ಸತ್ಯಾಗ್ರಹದ ಹಾಗೂ ಪ್ರತಿಭಟನೆ ಮಾಡಲಾದ ವುದು ಎಂದು ಕೋಲಿ ಬೆಸ್ತ ಸಮುದಾಯದ ಮುಖಂಡರಾದ ಪದ್ಮಶಿವನಂಜು  ಹೇಳಿದರು. 
ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ
ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ
ಸಂತ್ರಸ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ
ಅಪರ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಪರಿಶೀಲಿಸಿ
ಪರಿಹಾರಿಸುವುದಾಗಿ ಭರವಸೆ ನೀಡಿದರು.

 

LOGO
Logo

Be the first to comment

Leave a Reply

Your email address will not be published.


*