ಏಳನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ|ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ ಪಟ್ಟಣದ ಜನತೆ

ವರದಿ‌: ಸಿದ್ದರಾಮ ಅಫಜಲಪುರ

ಭೀಮೆಗೆ ಬಂದ ನೀರನ್ನು ಸೇವಿಸಿ ಉಪವಾಸ ಹಿಂಪಡೆಯುತ್ತೇನೆ ನಾಟೀಕಾರ

ಅಫಜಲಪುರ 20 :ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತು ಆಲಮಟ್ಟಿ,ನಾರಾಯಣಪುರದಿಂದ ನೀರು ಹರಿಸುವಂತೆ ಆಗ್ರಹಿಸಿ ಹೋರಾಟಗಾರ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಬುಧವಾರ ನಡೆದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.ಬೆಳಿಗ್ಗೆಯಿಂದಲೇ ಪಟ್ಟಣದ ವರ್ತಕರು ಸ್ವಯಂ ಘೋಷಿಸಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದರು,ಸಾರಿಗೆ ಸಂಪರ್ಕ ಸ್ಥಗಿತವಾಗಿದ್ದರಿಂದ ಕಲಬುರಗಿ, ವಿಜಯಪುರ, ಸೋಲಾಪೂರ ಜಿಲ್ಲೆಗಳ ಸಂಚಾರಕ್ಕೆ ಪರದಾಡುವಂತಾಯಿತು.ಸುಮಾರು 8 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡಿದರು.

ಜಿಲ್ಲಾಡಳಿತ ಬಳಗಾನೂರ ಕೆರೆಯಿಂದ ನೀರು ಹರಿಸುತ್ತೇವೆ ಎಂದು ಬರವಸೆ ನೀಡಿದ್ದು ಸಂತಸ ತಂದಿದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ನೀರು ಹರಿಸಲು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.ಭೀಮೆಗೆ ಬಂದ ನೀರನ್ನು ಸೇವಿಸಿ ಉಪವಾಸ ಹಿಂಪಡೆಯುತ್ತೇನೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿ,ಅಧಿಕಾರಿಗಳು ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ನೀರು ಹರಿಸಲು ಪ್ರಯತ್ನ ಮಾಡುತ್ತಿದ್ದಾರೆ,ಉಜನಿ ಜಲಾಶಯದ ಕಡೆಗೆ ಹೆಚ್ಚನ ಒತ್ತು ನೀಡಬೇಕು.ಭೀಮಾ ತೀರದ ಅನ್ನದಾತ ಸುಖವಾಗಿದ್ದಾಗ ಮಾತ್ರ ಸಮೃದ್ಧಿಯ ನಾಡು ಕಟ್ಟಲು ಸಾಧ್ಯವಾಗುತ್ತದೆ.ಉಜನಿ ಜಲಾಶಯದಿಂದ ಸದ್ಯ ನೀರು ಸಿಗದಿದ್ದರೆ ಮುಂದೆ ನಮಗೆ ನೀರು ಸಿಗುವುದೇ ಇಲ್ಲ.ನೀರು ಬಂದ ನಂತರ ನಾನು ದೆಹಲಿಗೆ ತೆರಳಿ ವಕೀಲರ ಮೂಲಕ ರೈತ ಹಿತಾಸಕ್ತಿ ಧಾವೆ ಹೂಡಲು ತಯಾರಿ ನಡೆಸಿದ್ದೇನೆ.ರೈತರು ಹಣ ಸಂಗ್ರಹಿಸಿ ಕಾನೂನು ಹೋರಾಟ ಮಾಡಲು ಹೊರೆಯಾಗುತ್ತದೆ,ಸರಕಾರ ಮಧ್ಯಸ್ಥಿಕೆ ವಹಿಸಬೇಕು‌.ರೈತರ ಹಿತಾಸಕ್ತಿಗೆ ಬೆಂಬಲಿಸುತ್ತಿರುವ ತಾಲೂಕಿನ ಜನತೆಗೆ ಧನ್ಯವಾದಗಳು ಎಂದು ಹೇಳಿದರು.

 

ಧರಣಿ ಸತ್ಯಾಗ್ರಹದಲ್ಲಿ ಕಲಬುರಗಿ ಎಡಿಸಿ ರಾಯಪ್ಪ ಹುಣಸ್ಯಾಳ ಮಾತನಾಡಿ,ಕಳೆದ ಆರು ದಿನಗಳಿಂದ ಭೀಮಾನದಿಗೆ ಉಜನಿ,ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ನೀರು ಬಿಡುವಂತೆ ಪ್ರಯತ್ನ ಮಾಡಲಾಗುತ್ತಿದೆ.ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಕಲಬುರಗಿಯ ಪ್ರದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ಅವರು ಪತ್ರ ಬರೆದು ಅಫಜಲಪುರ ತಾಲೂಕಿನ ಸೊನ್ನ ಭೀಮಾ ಬ್ಯಾರೇಜ್ ನಲ್ಲಿ 0.411 ಟಿಎಂಸಿ ನೀರಿದ್ದು,ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ನಾರಾಯಣಪುರ ಜಲಾಶಯದಿಂದ ಕೆಬಿಜೆಎನ್ಎಲ್ ಕಾಲುವೆ 84 ಮೂಲಕ ಬಳಗಾನೂರ ಕೆರೆಯ ವಿತರಣಾ ಕಾಲುವೆಗಳಾದ 13 ಮತ್ತು 14 ರ ಮುಖಾಂತರ ಸೊನ್ನ ಬ್ಯಾರೇಜ್ ಗೆ ನೀರು ಹರಿಸಲು ಪತ್ರ ವ್ಯವಹಾರ ಮಾಡಲಾಗಿದೆ.ಅಲ್ಲದೇ ಕಲಬುರಗಿ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ ಸೋಲಾಪೂರ ಜಿಲ್ಲಾಧಿಕಾರಿಗಳಿಗೆ ಉಜನಿ ಜಲಾಶಯದಿಂದ ನೀರು ಹರಿಸಲು ಪತ್ರ ಬರೆದಿದ್ದಾರೆ.ಅದಕ್ಕಾಗಿ ಉಪವಾಸ ಸತ್ಯಾಗ್ರಹ ಹಿಂಪಡೆಯಲು ಮನವಿ ಮಾಡಿದರು.

 

ಸತ್ಯಾಗ್ರಹದಲ್ಲಿ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು,ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು,ನಿರಂಜನ ಶ್ರೀ,ಶಾಂತಲಿಂಗ ಶಿವಾಚಾರ್ಯರು,ವೀರಮಹಾಂತ ಶಿವಾಚಾರ್ಯರು,ಮರುಳಾರಾಧ್ಯ ಶಿವಾಚಾರ್ಯರು,ಶಂಭುಲಿಂಗ ಶಿವಾಚಾರ್ಯರು,ಕಲ್ಲಾಲಿಂಗ ಶಿವಾಚಾರ್ಯರು,ತಹಸಿಲ್ದಾರ ಸಂಜೀವಕುಮಾರ ದಾಸರ,ಡಿವೈಎಸ್ಪಿ ಮಹಮ್ಮದ ಶರೀಫ ರಾವೂತರ್,ಕೆಎನ್ಎನ್ಎಲ್ ಇಇ ಸಂತೋಷ ಸಜ್ಜನ,ಪ್ರಮುಖರಾದ ಮಕ್ಬುಲ್ ಪಟೇಲ್,ಅವ್ವಣ್ಣ ಮ್ಯಾಕೇರಿ ಬಸವರಾಜ ಸಪ್ಪನಗೊಳ, ,ಸಂತೋಷ ದಾಮಾ, ಪಪ್ಪು ಪಟೇಲ್,ಚಂದು ದೇಸಾಯಿ,ಚಿದಾನಂದ ಮಠ, ರಾಜೇಂದ್ರ ಸರದಾರ ರಾಜು ಚವ್ಹಾಣ ಪಿಡ್ಡಪ್ಪ ಜಾಲಗಾರ,,ದಯಾನಂದ ದೊಡ್ಡಮನಿ,ಚಂದ್ರಶೇಖರ ಕರಜಗಿ, ಮಲ್ಲಿಕಾರ್ಜುನ ನಿಂಗದಳ್ಳಿ, ಗಂಗಾಧರ ಶ್ರೀಗಿರಿ, ಮಹೇಶ್ ಆಲೇಗಾಂವ, ಶಂಕರ ಮ್ಯಾಕೇರಿ, ರಾಜೇಂದ್ರ ಪಾಟೀಲ, ಬಸಣ್ಣ ಗುಣಾರಿ, ಬಸವರಾಜ ಚಾಂದಕವಟೆ, ಶಂಕರಗೌಡ ಪಾಟೀಲ್, ಶೈಲೇಶ ಗುಣಾರಿ, ಉಮೇಶ ಕಲಶೆಟ್ಟಿ, ಪ್ರಭಾವತಿ ಮೇತ್ರಿ, ಶಾಂತಕುಮಾರ ಅಂಜುಟಗಿ,ಮಹಾರಾಯ ಅಗಸಿ, ರಾಜಕುಮಾರ ಉಕ್ಕಲಿ, ರಾಜೇಂದ್ರ ಸರ್ದಾರ, ಶ್ರೀಕಾಂತ ದಿವಾಣಜಿ, ಶೈಲೇಶ್ ಗುಣಾರಿ,, ಮಹಾಂತೇಶ ತಳವಾರ, ಮಹಾಂತಗೌಡ ಪಾಟೀಲ, ಕಲ್ಯಾಣಿ ಸಿಂದಗೇರಿ, ಭೀಮರಾಯ ತಳವಾರ,ಭೇಶಂಕರಾಯ ಶಿವಣಗಿ, ಸದಾಶಿವ ಗೌರ, ಇತರರಿದ್ದರು.ಪಟ್ಟಣದ ವ್ಯಾಪಾರಸ್ಥರು,ವಿವಿಧ ಸಂಘ, ಸಂಘಟನೆ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದರು ಬಂದ್ ಗೆ ಮಹಿಳೆಯರು ಸಾಥ್ ನೀಡಿದರು.

Be the first to comment

Leave a Reply

Your email address will not be published.


*