ಅಖಿಲ ಭಾರತ ಅಂತರ ವಿ.ವಿ .ಮಹಿಳಾ ಬಾಲ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸ್ಪರ್ಧೆಗೆ ಬೆಂಗಳೂರಿನ ಡಿ.ಆರ್. ಸಹನಾ ಕು. ಮಹೇಶ್ವರಿ ಜಮಾದಾರ ಮತ್ತು ಕೀರ್ತಿ ಆಯ್ಕೆ.
ಬೆಂಗಳೂರ :: ಕು. ಮಹೇಶ್ವರಿ ಕಲಬುರ್ಗಿ ಜಿಲ್ಲೆಯ ಅಪಜಲಪುರ ತಾಲೂಕಿನ ಹಾವನೂರ ಗ್ರಾಮದ ಶ್ರೀ ಬಸವರಾಜ ಜಮಾದಾರ ಅವರ ಮಗಳು
ಬೆಂಗಳೂರಿನ ಪೀಣ್ಯ ಪ್ರದೇಶದ ರಾಜಗೋಪಾಲ ನಗರದಲ್ಲಿ ವಾಸವಾಗಿರುವ ಹಿರಿಯ ಪತ್ರಕರ್ತರಾಗಿರುವ ಶ್ರೀ ಬಸವರಾಜ ಜಮಾದಾರ ಅವರ ಮಗಳು .ಕು. ಮಹೇಶ್ವರಿ ದಾಸರಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.
ಕುಮಾರಿ ಮಹೇಶ್ವರಿ ಮತ್ತು ಕಾಲೇಜಿನ ಇಬ್ಬರು ಪದವಿ ವಿದ್ಯಾರ್ಥಿನಿಯರ ಜೊತೆ ಚೆನ್ನೈನ ಅಣ್ಣ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 21 ರಿಂದ 24 ನೇ ತಾರೀಖಿನವರೆಗೆ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬಾಲ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿಯರ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ ಸ್ವಾಮಿ ಮಹಿಳಾ ತಂಡದ ತರಬೇತಿದಾರರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಅಬಿದಾ ಬೇಗಂ ಕಾಲೇಜಿನ ಎಲ್ಲ ಪ್ರಾದ್ಯಾಪಕರು ಅಧ್ಯಾಪಕರೇತರರು ಕ್ರೀಡಾ ಸಮಿತಿಯ ಸದಸ್ಯರು ಈ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.
ಶಿವಪುತ್ರಪ್ಪ ಜಮಾದಾರ ನಿವೃತ್ತ ಶಿಕ್ಷಕರು
ಕು. ಮಹೇಶ್ವರಿ ಬಸವರಾಜ ಜಮಾದಾರ ಅವರು ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟು ಕಲಬುರಗಿ ಜಿಲ್ಲೆಯ ಚಿಕ್ಕ ಹಾವನೂರ ಗ್ರಾಮದ ಹೆಮ್ಮೆಯ ಕ್ರೀಡಾಪಟು ಬಾಲ ಬ್ಯಾಡ್ಮಿಂಟನನಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಅಂತರ ವಿಶ್ವವಿದ್ಯಾಲಯ ಕ್ರೀಡಾಕ್ಕೆ ಆಯ್ಕೆಯಾಗಿದು ಸಂತಸದ ತಂದಿದೆ
ಉದ್ದಿಮೆದಾರರು ಹಾಗೂ ಸಂಘ ಸಂಸ್ಥೆಯಗಳು ಪ್ರತಿಭಾವಂತ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯ ಮತ್ತು ಟ್ಯಾಲೆಂಟ್ ಪ್ರತಿಭಾವಂತ ಕ್ರೀಡಾ ಪಟ್ಟುಗಳಲ್ಲಿ ಇದೆ.ಈವರೆಗೆ ಸರ್ಕಾರ,ಉದ್ಯಮದಾರು ಸಂಘ ಸಂಸ್ಥೆಯವರ ಪ್ರೋತ್ಸಾಹ ಸಿಗಲಿ ಎಂದು ನಮ್ಮ ವಾಹಿನಿ ಆಶಿಸುತ್ತದೆ
Be the first to comment