ಹೋರಾಟಗಾರ ಶಿವಕುಮಾರ ನಾಟೀಕಾರ ಆರೋಗ್ಯ ಚಿಂತಾಜನಕ ! ಆಸ್ಪತ್ರೆಗೆ ರವಾನೆ

ವರದಿ : ಸಿದ್ದರಾಮ ಅಫಜಲಪುರ

ಅಫಜಲಪುರ 22 :ಕಳೆದ ಒಂದು ವಾರದಿಂದ ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಜನ,ಜಾನುವಾರುಗಳ ನೀರಿನ ಹಾಹಾಕಾರ ನೀಗಿಲು ನೀರು ಬಿಡುವವಂತೆ ಒತ್ತಾಯಿಸಿ ಅಫಜಲಪುರ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಶಿವಕುಮಾರ ನಾಟೀಕಾರ ಹಠಾತ್ತನೆ ಅಸ್ವಸ್ಥರಾಗಿದ್ದು ಅವರನ್ನು ವಿಜಯಪುರದ ಆಸ್ಪತ್ರೆಗೆ ರವಾನಿಸಲಾಗಿದೆ

ಶಿವಕುಮಾರ ನಾಟೀಕಾ‌ರ ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.ಈ ಹಂತದಲ್ಲಿ ಅಧಿಕಾರಿಗಳು ಪ್ರತಿದಿನ ಬಂದು ನಾಟೀಕಾರ ಜತೆ ಮಾತನಾಡಿ,ಉಪವಾಸ ಸತ್ಯಾಗ್ರಹ ಕೈ ಬಿಡಲು ಮನವಿ ಮಾಡಿದ್ದರು.

ಈಗ ಚುನಾವಣೆಯೂ ಇದೆ.ಇನ್ನೊಂದೆಡೆ ಉಜನಿಯಲ್ಲಿ ನೀರಿಲ್ಲವೆಂದು ಮಹಾರಾಷ್ಟ್ರ ಸರಕಾರ ಹೇಳುತ್ತಿದೆ.ನಮ್ಮ ರಾಜ್ಯದಲ್ಲಿನ ಕೃಷ್ಣಾ ಮತ್ತು ಆಲಮಟ್ಟಿದಿಂದ ನೀರು ಬಿಡಿಸುವ ಪ್ರಯತ್ನಗಳನ್ನು ನಡೆದಿದೆ ಎಂದು ಹೇಳಿದ್ದರು.ಆದರೆ,ನಮ್ಮ ಸರಕಾರವೂ ಕೂಡ ಕೃಷ್ಣಾ ಅಥವಾ ಆಲಮಟ್ಟಿದಿಂದ ನೀರು ಬಿಡಿಸುವ ಪ್ರಕ್ರಿಯೆಯನ್ನು ಆಮೆಗತಿಯಲ್ಲಿ ಮಾಡಲಾಗುತ್ತಿತ್ತು.ಇದರಿಂದಾಗಿ ದಿನಗಳು ದೂಡಲಾಯಿತೇ ವಿನಃ ಚರ್ಚೆಯ ಅಂತಿಮ ರೂಪ ಫಲಿತಾಂಶವಾಗಿ ಹೊರ ಬೀಳಲಿಲ್ಲ ಮತ್ತು ನೀರು ಬಿಡುಸುವ ಪ್ರಯತ್ನಗಳು ವಿಳಂಭವಾದವು ಎಂದು ಶುಕ್ರವಾರ ಬೆಳಗ್ಗೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ ನಾಟೀಕಾರ್,ವಿಜಯಪುರ, ಕಲಬುರಗಿ ಜಿಲ್ಲೆಯ ಜನರು,ರಾಜಕಾರಣಿಗಳು,ಶಾಸಕರು ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ತೋರಿದ ಬೆಂಬಲವನ್ನು ನೆನಪಿಸಿಕೊಂಡರು.

ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯ ನೀರನ್ನು ಕೃಷ್ಣ ಮತ್ತು ಆಲಮಟ್ಟಿದಿಂದ ಬಿಡಿಸಲು ಕಲಬುರಗಿ ಆರ್ ಸಿ ಮತ್ತು ಬೆಳಗಾವಿ ಆರ್ ಸಿ ಮಧ್ಯದ ಸರಣಿ ವಿಸಿ ಸಭೆಗಳು ಫಲ ನೀಡುತಿಲ್ಲ ಎಂದು ದುಗುಡ ವ್ಯಕ್ತ ಪಡಿಸಿದ್ದರು.ಅಲ್ಲದೆ, ನೀರು ಬರದೇ ಹೋದರೆ ಮುಂದಿನ ದಿನಗಳಲ್ಲಿ ಉಂಟಾಗುವ ಭೀಕರ ಹಾಹಾಕಾರಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಈ ಮಧ್ಯೆ ಮಾರ್ಚ 7ರಂದು ಮಹಾರಾಷ್ಟ್ರ ಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದರೂ ಮಹಾರಾಷ್ಟ್ರ ಸರಕಾರ ಸ್ಪಂಧಿಸಿಲ್ಲ.ಇದರಿಂದಾಗಿ ನೀರು ಬಿಡುವ ಪ್ರಕ್ರಿಯೆಯಲ್ಲೂ ವಿಳಂಭವಾಗಿದೆ.

ಸತ್ಯಾಗ್ರಹಕ್ಕೆ ನಿತೀನ್ ಗುತ್ತೇದಾರ್ ಬೆಂಬಲ

ಕಳೆದ ಒಂದು ವಾರದಿಂದ ಭೀಮಾನದಿಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಆಗಮಿಸಿ ಬೆಂಬಲ ಸೂಚಿಸಿ ಮಾತನಾಡಿದ ಅವರು,ಮಾರ್ಚ್ 20ರಂದು ಅಫಜಲಪುರ ಪಟ್ಟಣ ಬಂದ್ ಮಾಡಿ ಶ್ರೀಗಳು,ಎಲ್ಲ ಪಕ್ಷದ ಮುಖಂಡರು, ಜನಸಾಮಾನ್ಯರು ಸೇರಿಕೊಂಡು ಹೋರಾಟ ನಡೆಸಿದರೂ ಸಹ ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರೂ ಭೇಟಿ ನೀಡಬೇಕಾಗಿತ್ತು.

ಸತತ 8 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದೀರಿ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಹೀಗಾಗಿ ತಕ್ಷಣ ನೀವು ಉಪವಾಸ ಕೈಬಿಟ್ಟು ಹೋರಾಟ ಮುಂದುವರಿಸಿ ಒಂದು ವೇಳೆ ಸ್ಪಂದಿಸದಿದ್ದರೆ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡೋಣ ಜಿಲ್ಲಾಡಳಿತಕ್ಕೆ ಕಿವಿ,ಮಾನವೀಯತೆ ಯಾವುದು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಕುಮಾರ ಪೋಟೋ ಇಟ್ಟು ಹೋರಾಟ ಮುಂದುವರಿಕೆ

ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹೋರಾಟಗಾರ ಶಿವಕುಮಾರ ನಾಟೀಕಾರ ಆರೋಗ್ಯದಲ್ಲಿ ಏರು ಪೇರು ಕಂಡಿದ್ದರಿಂದ ಬಿಜಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇದರಿಂದಾಗಿ ಸತ್ಯಾಗ್ರಹ ಸ್ಥಳದಲ್ಲಿ ಅವರ ಅಭಿಮಾನಿಗಳು,ಕಾರ್ಯಕರ್ತರು,ಹೋರಾಟದಲ್ಲಿ ಪಾಲ್ಗೊಂಡಿದ್ದ ಜನಸಾಮಾನ್ಯರು ಒಗ್ಗಟ್ಟಾಗಿ ಶಿವಕುಮಾರ ನಾಟೀಕಾರ ಪೋಟೋ ಇಟ್ಟುಕೊಂಡು ಹೋರಾಟ ಮುಂದುವರಿಸಿದ್ದಾರೆ.

ಈ ಸಂದರ್ಭದಲ್ಲಿ ದಿಲೀಪ್ ಪಾಟೀಲ್,ವಿಶ್ವನಾಥ ರೇವೂರ, ರಾಜಶೇಖರ ಜಿಡ್ಡಗಿ, ರಮೇಶ್ ಬಾಕೆ,ಪುಟ್ಟು ಸಜ್ಜನ್,ರವಿ ಕುಲಾಲಿ,ರಾಜುಗೌಡ ಅವರಳ್ಳಿ, ಗುರು ಸಾಲಿಮಠ, ಜ್ಯೋತಿಪ್ರಕಾಶ್ ಪಾಟೀಲ್, ಸುಭಾಷ್ ರಾಠೋಡ, ಸುನೀಲ್ ಶೆಟ್ಟಿ, ಧಾನು ಪತಾಟೆ, ಪ್ರಭಾವತಿ ಮೇತ್ರಿ,ರಾಜಕುಮಾರ ಉಕ್ಕಲಿ , ಶ್ರೀಕಾಂತ ಲಿಗಾ ಸಹಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*