ಏವೂರ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ ಉದ್ಘಾಟಿಸಿದರು. ಹನುಮಾಕ್ಷಿ ಗೋಗಿ, ಗೌಡಪ್ಪಗೌಡ ಕಾಮನೆಟಗಿ, ಮಲ್ಲನಗೌಡ ಪಾಟೀಲ, ರಾಜು ಧಣ , ಕ್ರಷ್ಣಯ್ಯ ಗುತ್ತೇದಾರ ಇದ್ದರು.
ಕೆಂಭಾವಿ : ಮಕ್ಕಳಲ್ಲಿ ಆತ್ಮಾಭಿಮಾನ, ಆತ್ಮವಿಶ್ವಾಸ, ಧೈರ್ಯ ಹಾಗೂ ಜ್ಞಾನವನ್ನು ಧಾರೆಯರೆಯುವವನೆ ನಿಜವಾದ ಶಿಕ್ಷಕ ಎಂದು ಖ್ಯಾತ ಇತಿಹಾಸ ತಜ್ಞೆ ಹನುಮಾಕ್ಷಿ ಗೋಗಿ ಅಭಿಪ್ರಾಯಪಟ್ಟರು.
ಏವೂರ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾದಾನ ಎಲ್ಲ ದಾನಗಳಿಗೂ ಅತ್ಯಂತ ಶ್ರೇಷ್ಠವಾಗಿದ್ದು ಅದನ್ನು ಕಲಿಸುವಾಗ ಶಿಕ್ಷಕರು ಶ್ರೆದ್ಧೆಯಿಂದ ಮಕ್ಕಳಿಗೆ ಪಾಠ ಮಾಡಿದರೆ ಅಷ್ಟೆ ಶ್ರೆದ್ಧೆಯಿಂದ ವಿದ್ಯಾರ್ಥಿಗಳು ಶಿಕ್ಷಕರ ಪಾಠವನ್ನು ಆಲಿಸಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳಲ್ಲಿ ಧೈರ್ಯ ಹಾಗೂ ಜ್ಞಾನವನ್ನು ಧಾರೆಯರೆಯುವವನೆ ನಿಜವಾದ ಶಿಕ್ಷಕ : ಹನುಮಾಕ್ಷಿ ಗೋಗಿ
ನಮ್ಮ ಇಡೀ ಜೀವನದ ಹಸಿವನ್ನು ವಿದ್ಯೆ ನೀಗಿಸಲಿದ್ದು ಅಂಥಾ ವಿದ್ಯಾಎಗಳನ್ನು ಮಕ್ಕಳು ಶಿಕ್ಷಕರಿಂದ ಕಲಿಯಬೇಕು,. ಸಂಸ್ಕಾರ ಸಂಸ್ಕೃತಿ ಹುಟ್ಟುವುದೆ ಶಿಕ್ಷಣದಿಂದ. ಅಂಥಾ ಉತ್ತಮ ಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದ ಅವರು ಇಂಥಾ ಗ್ರಾಮಾಂತರ ಪ್ರದೇಶಗಳಲ್ಲಿ ಇಲ್ಲಿಯ ಜನ ಶಿಕ್ಷಕರ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರೃಉಣ ಆಗಿದ್ದೇನೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶಾತಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶ ಗುರು ಪರಂಪರೆ ಹೊಂದಿರುವ ದೇಶ, ಪ್ರಾಚೀನ ಕಾಲದಿಂದಲೂ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನ ನೀಡಲಾಗಿದ್ದು ಗುರುವಿನ ಮಹತ್ವವನ್ನು ರಾಮಾಯಣ ಮಹಾಭಾರತದಂಥಾ ಮಹಾನ ಕಥೆಗಳಲ್ಲಿ ನಾವು ಕೇಳಿ ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇಂಥಾ ಗರುವಂದನಾ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯುವುದು ಅಪರೂಪ ಈ ಕಾರ್ಯಗಳಿಂದ ಗುರು ಶಿಷ್ಯರ ಜೊತೆಗೆ ಸ್ನೇಹಿತರ ಸಮ್ಮಿಲನವೂ ಆಗುತ್ತದೆ ಎಂದು ತಮ್ಮ ಸಂತಸ ಹಂಚಿಕೊಂಡರು.
ಗ್ರಾಮದ ಮುಖಂಡ ಮಲ್ಲನಗೌಡ ಪಾಟೀಲ ಮಾತನಾಡಿದರು. ಮರೆಪ್ಪ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.ಗೌಡಪ್ಪಗೌಡ ಕಾಮನೆಟಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ, ರಾಜುಧಣ , ಸಂಗಯ್ಯ ಮಠಪತಿ, ಶಾಂತಗೌಡ ಪಾಟೀಲ, ಜೀವನರಾವ ಕುಲಕರ್ಣಿ, ಮಹಾಂತಯ್ಯ ಹಿರೇಮಠ, ಕೃಷ್ಣಯ್ಯ ಗುತ್ತೇದಾರ, ಗೊಲ್ಲಾಳಪ್ಪ ಅಂಗಡಿ, ನಿಂಗಪ್ಪ ಪೂಜಾರಿ, ದೇವೇಂದ್ರ ಕರ್ನಾಳ, ಬಸವರಾಜ ಕುಮಸಗಿ, ಫತ್ರುನ್ನಿಸಾ ಬೇಗಂ, ಸಂಗಪ್ಪ ಪೂಜಾರಿ ಇದ್ದರು. ಮುಖ್ಯಗುರು ವಿಠ್ಠಲ ಚೌವ್ಹಾಣ ನಿರೂಪಣೆ ಮಾಡಿದರು, ಕೆಎಮ್‌ಎಫ್ ಜಂಟಿ ನಿರ್ದೇಶಕ ಚಂದ್ರಶೇಖರ ಪತ್ತಾರ ಸ್ವಾಗತಿಸಿದರು, ರಾಜಶೇಖರ ಪತ್ತಾರ ವಂದಿಸಿದರು.
Be the first to comment