ಪೋಲಿಸ್ ಕರ್ತವ್ಯ ಕೂಟದಲ್ಲಿ ಅತೀ ಹೆಚ್ಚು ಪದಕ ಗಳಿಸಿದ ಸಿ ಪಿ ಐ ಮಲ್ಲಿಕಾರ್ಜುನ ಡಪ್ಪಿನ ರವರಿಗೆ : ಮಡಿವಾಳ ನಾಯ್ಕೋಡಿ ಗೆಳೆಯರ ಬಳಗದಿಂದ ಸನ್ಮಾನ

ಇಂಡಿ 19 : : ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಸ್ಪರ್ದೆಯಲ್ಲಿ ಇಂಡಿಯ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ.ಡಪ್ಪಿನ ರವರು ಆರು ಚಿನ್ನದ ಪದಕ ಪಡೆದು ವಿಜಯಪುರ ಜಿಲ್ಲಾ ಪೋಲಿಸ ವಿಭಾಗದ ಗೌರವ ಹೆಚ್ಚಿಸಿದ್ದಾರೆ. ಕರ್ತವ್ಯ ಕೂಟದಲ್ಲಿ ಅತಿ ಹೆಚ್ಚು ಪದಗಳನ್ನು ಗೆದ್ದು ಸಾಧನೆ ಮಾಡಿದ ಇಂಡಿ ತಾಲ್ಲೂಕ ಸಿಪಿಆಯ್ ಶ್ರೀ ಮಲ್ಲಿಕಾರ್ಜುನ ಡಪ್ಪಿನ ರವರಿಗೆ ಮಡಿವಾಳ ನಾಯ್ಕೋಡಿ ಹಾಗೂ ಗೆಳೆಯರ ಬಳಗ ಶಾಲು ಹೊದಿಸಿ ಸನ್ಮಾನಿಸಿದ್ದರು.

ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕಾ ತಳವಾರ ಸಮಾಜದ ಅಧ್ಯಕ್ಷರಾದ ಶ್ರೀ ಧರ್ಮರಾಜ ವಾಲಿಕಾರ , ಸಮಾಜದ ಯುವ ಮುಖಂಡರಾದ ಹುಚ್ಚಪ್ಪ ತಳವಾರ ಮಲ್ಲಣ್ಣ ನಾಯ್ಕೋಡಿ (ಬೆಂಗಳೂರು), ಮಾಹಾಂತೇಶ N ನಾಯ್ಕೋಡಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*