ಕಲಬುರಗಿ : ದಿ.ವಿಠ್ಠಲ ಹೇರೂರ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ ಇದೇ ಡಿ.17ರಂದು ಬೆಳಗ್ಗೆ 10.30ಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಒಂದು ದಿನದ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಟ್ರಸ್ಟ್ ಆಶ್ರಯದ ಸ್ವಾಭಿಮಾನಿ ಶ್ರೀ ವಿಠ್ಠಲ ಹೇರೂರ್ ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಈ ಚಿಂತನಗೋಷ್ಠಿಯಲ್ಲಿ ಜಾತಿ ಗಣತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ’ ಕುರಿತು ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಸಾಹಿತಿ ಕೆ.ಎನ್.ಲಿಂಗಪ್ಪ ಅವರು ಉಪನ್ಯಾಸ ನೀಡಲಿದ್ದಾರೆ ಎಂದರು.
ಸಂಸದ ಡಾ.ಉಮೇಶ್ ಜಾಧವ್, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಡಾ.ತಳವಾರ್ ಸಾಬಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶ್ರೀ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಅಭಿಷೇಕ್ ಶಾಮ್ ಕುಮಾರ್, ಸದಸ್ಯರಾದ ಪ್ರೊ.ಗಿರಿಮಲ್ಲಪ್ಪ ಹರವಾಳ, ಶರಣಬಸಪ್ಪ ದೊಡ್ಡಮನಿ, ಚಂದ್ರಶೇಖರ ಕೊಠಾರದಸ್ತಿ, ಸೋಮಶೇಖರ ನಾಗಾವಿ ಇದ್ದರು.
Be the first to comment