ವಸತಿ ನಿಲಯದ ಮಕ್ಕಳ ಹಾಸಿಗೆ ಕಳ್ಳತನ . ಆರೋಪ

ಶಹಾಪುರ ಡಿ.15 :: ಕೆಂಭಾವಿ ಪಟ್ಟಣದ ಸಮೀಪ ಮಲ್ಲಾ(ಬಿ) ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಈ ಚೆಗೆ ಬಂದಿದ್ದ ಸುಮಾರು 25 ಬೆಡ್‌ಗಳನ್ನು ಅಧಿಕಾರಿಗಳೇ ಯಾರು ಇಲ್ಲದ ಸಮಯದಲ್ಲಿ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಈ ಕುರಿತು ಸುರಪುರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿರು ವ ಅವರು, ವಸತಿ ನಿಲಯದ ವಾರ್ಡನ್ ಹಾಗೂ ಹಿಂದುಳಿದ ವರ್ಗಗ ಳ ಕಲ್ಯಾಣ ಇಲಾಖೆ ತಾಲೂಕು 25 ಬೆಡ್ ಗಳನ್ನು ರಾತ್ರಿ 12ರ ಹೊತ್ತಿನಲ್ಲಿ ಹೊರ ಸಾಗಹಾಕಿದ್ದಾರೆ. ಅದನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ ದಾರೆ. ಅದಲ್ಲದೆ ವಸತಿ ನಿಲಯ ಹಂದಿಗಳ ತಾಣವಾಗಿದೆ. ಸ್ವಚ್ಛತೆಯು ಸಂಪೂರ್ಣ ಮರೀಚಿಕೆಯಾಗಿದೆ. ಕೋಣೆಯ ಬಾಗಿಲುಗಳು ಮುರಿದು ಹೋಗಿವೆ,

ತಹಸೀಲ್ದಾರ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಮನವಿ

ಕೋಣೆಯ ತುಂಬಾ ಗಬ್ಬು ವಾಸನೆ ಬಡಿಯುತ್ತದೆ. ಮಕ್ಕಳು ಮಲಗಲು ತುಂಬ ಕಷ್ಟ ಪಡುವ ಸ್ಥಿತಿಯಿದೆ. ಸಿಸಿ ಕ್ಯಾಮೆರಾ ಇದ್ದರೂ ಮಾಡಲಾಗಿದೆ ಎಂದು ತಿಳಿಸಿದ್ ದಾರೆ. 2003

ವಸತಿ ನಿಲಯದ ವಾರ್ಡ್‌ ತನ್ನ ಮನಸ್ಸಿಗೆ ಬಂದಾಗ ಬರುತ್ತತಾರೆ. ಮಕ್ಕಳ ಬಗ್ಗೆ ಸ್ವಲವೂ ಕಾಳಜಿಯಿಲ್ಲ. ಬಡ ಮಕ್ಕಳಿಗಾಗಿ ಸರಕಾರದಿಂದ ಬರುವ ಸವಲತ್ತುಗಳನ್ನು ದುರ್ಬಳಕೆ ಮಾಡಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಮ್ಮ ಕಾರ್ಯಾಲಯ ದ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಘಟಕ ಅಧ್ಯಕ್ಷ ದೇವಿಂದ್ರಪ್ಪ ದೊರಿ, ರಾಯಪ್ಪಗೌಡ ಹದ ನೂರ, ವಿಜಯರಾಜ ನಾಯಕ ಎಚ್ಚರಿಸಿದ್ದಾರೆ.

ಕೆಂಭಾವಿ ಸಮೀಪದ ಮಲ್ಲಾ(ಬಿ) ‌,ಗ್ರಾಮದಲ್ಲಿರುವ ಡಿ.ದೇವರರಾಜ ಅರಸು ಹಿಂದುಳಿದ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ 25 ಬೆಡ್ಗಳನ್ನು ಕಳ್ಳತನ ನ ಕರ್ನಾಟಕ ರಾಜ್ಯ  ರೈತ ಸಂಘ ಹಾಗೂ ರೈತ ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

Be the first to comment

Leave a Reply

Your email address will not be published.


*