“ಗ್ರಾಮ ಆರೋಗ್ಯ ಕಾರ್ಯಕ್ರಮ: ಗ್ರಾಮಸ್ಥರ ವಿವಿಧ ಆರೋಗ್ಯ ತಪಾಸಣೆ”

ವರದಿ:ಉಮೇಶಗೌಡ ಹಿಂಗಣಿ ಚಡಚಣ

ಚಡಚಣ: ತಾಲೂಕಿನ ಧೂಳಖೇಡ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ಗ್ರಾಮಸ್ಥರ ಆರೋಗ್ಯ ತಪಾಸಣೆಯನ್ನು ಗುರುವಾರ ನಡೆಸಲಾಯಿತು…

ಗ್ರಾಮದ ಚಿಕ್ಕ ಮಕ್ಕಳಿಂದ ವಯೋ ವೃದ್ಧರ ವರೆಗೆ ಗ್ರಾಮಸ್ಥರ ಬಿಪಿ, ಸಕ್ಕರೆ ಕಾಯಿಲೆ, ಕೆಮ್ಮು, ಶೀಥ ಸೇರಿ ವಿವಿಧ ರೀತಿಯ ಆರೋಗ್ಯ ಸಂಬಂಧಿ ಕಾಯಿಲೆಗಳ ತಪಾಸಣೆಯನ್ನು ಮಾಡಿ, ಔಷಧೋಪಚಾರ ನೀಡಲಾಯಿತು…

ಈ ಆರೋಗ್ಯ ತಪಾಸಣೆಯಲ್ಲಿ ಗ್ರಾಮದ 150 ಕ್ಕೂ ಅಧಿಕ ಜನರು ಆರೋಗ್ಯದ ತಪಾಸಣೆಯ ಸದುಪಯೋಗ ಪಡೆದುಕೊಂಡರು.

 

ಈ ವೇಳೆ ಗಂಗಾಧರ್ ಮೇತ್ರಿ ಸಮುದಾಯ ಆರೋಗ್ಯ ಅಧಕಾರಿಗಳು, ಜಾಸ್ಮಿನ್ ಪಿಂಜಾರ ಪ್ರಾಥಮಿಕ ಸುರಕ್ಷಣ ಅಧಿಕಾರಿಗಳು, ಜಯಶ್ರೀ ಕೆ. ಎಚ್.ಪಿ.ಟಿ ಹಾಗೂ ಆಶಾ ಕಾರ್ಯಕರ್ತರಾದ ರೇಣುಕಾ ಧೂಳಖೇಡ, ಆರ್.ಎಸ್ ಕಾಂಬಳೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*