ಜಿಲ್ಲಾ ಸುದ್ದಿಗಳು
ಸುರಪುರ:
ದೇಶದ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡಿ ಹೋರಾಟ ನಡೆಸಿದ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊ ಬ್ಬರ ಕರ್ತವ್ಯವಾಗಿದೆ. ಹುತಾತ್ಮರ ಆದರ್ಶದ ಬದುಕು ನಮ್ಮೆಲ್ಲರಿಗೆ ಪ್ರೇರಣೆ ಹಾಗೂ ಮಾರ್ಗಸೂಚಿಯಾಗಿದೆ ಎಂದು ತಾ.ಪಂ ಇಓ ಬಸವರಾಜ ಸಜ್ಜನ್ ತಿಳಿಸಿದರು.
ನಗರದ ತಾ.ಪಂ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗ ಳ ಆಶ್ರಯದಲ್ಲಿ ‘ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುರಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ಕಾರ್ಯಕ್ರಮದಲ್ ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಸಜ್ಜನ್ ಮಾತನಾಡಿದರು.
“ದೇಶದ ಏಕತೆ ಹಾಗೂ ಒಗ್ಗಟ್ಟಿಗಾಗಿ ಶ್ರಮಿಸುವ ಗುರುತರ ವಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ನಮ್ಮ ದೇಶ, ನೆಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸ ುವುದು ಅಗತ್ಯವಾಗಿದೆ. ದೇಶಕ್ಕಾಗಿ ಹೋರಾಡಿ
ಸ್ಮರಣಾರ್ಥ ಬೆಂಗಳೂರಿನಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. (ಅಮೃತ ವಾಟಿಕಾ) ಅದಕ್ಕಾಗಿ ಪ್ರತಿ ಗ್ರಾಪಂದಿಂದ ಅಮೃತ ಕ ಳಸಯಾತ್ರೆಯ ಮೂಲಕ ಸಂಗ್ರಹಿಸಿದ ಮಣ್ಣು ಕಲಬುರಗಿ ನೆಹರೂ ಯುವ ಕೇಂದ್ರದ ಮೂಲಕ ರವಾನಿಸಲಾಗುತ್ತದೆ’ ಎಂದು
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕದಾರ,ಬಿ ಎಸ್ , ರಾಠೋಡ
ತಾಲೂಕ್ ದಂಡಾಧಿಕಾರಿಗಳು ಸುರಪುರ ವಿಜಯಕುಮಾರ್ ,
ಸಾಯಕ ನಿರ್ದೇಶಕರು ಸುರಪುರ ರವಿಚಂದ್ರನ್ ಲಕ್ಕುಂಡಿ , ಮಾಜಿ ಸೈನಿಕರು ಭಾಗಿಯಾಗಿದ್ದರು ,ಎಲ್ಲಾ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಎನ್ ಆರ್ ಎಲ್ ಎಮ್ ಸಿಬ್ಬಂದಿಗಳು ಭಾಗಿಯಾಗಿದ್ದರು , ಹಾಗೂ ಪಿಡಿಓ ಭಾಗವಹಿಸಿದ್ದರು.
Be the first to comment