ಬಾಗಲಕೋಟೆ:ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ಈ ಬಾರಿ ರಕ್ಷಾಬಂಧನ ಆಚರಣೆಯ ದಿನಾಂಕದಲ್ಲಿ ಗೊಂದಲವಿದೆ. ಕೆಲವರು ಆಗಸ್ಟ್ 30 ರಾಖಿ ಹಬ್ಬದವೆಂದರೆ ಕೆಲವರು ಆಗಸ್ಟ್ 31 ಎನ್ನುತ್ತಿದ್ದಾರೆ. ಹಾಗಾದರೆ ರಕ್ಷಾಬಂಧನದ ಆಚರಣೆ ಯಾವಾಗ, ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಕ್ಷಾಬಂಧನ ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ. ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷದ ರಾಖಿ ಹಬ್ಬ ಇನ್ನೇನು ಸಮೀಪದಲ್ಲಿದೆ.
ದೃಕ್ ಪಂಚಾಂಗದ ಪ್ರಕಾರ ರಕ್ಷಾಬಂಧನ ಅಥವಾ ರಾಖಿ ಹಬ್ಬದ ಆಚರಣೆ ಆಗಸ್ಟ್ 30ರ ಬುಧವಾರದಂದು ಬರಲಿದೆ. ಆದರೆ ಭದ್ರಕಾಲಾದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭಮುಹೂರ್ತವಾಗಿದೆ.
ಆಗಸ್ಟ್ 30 ರಂದು ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 30ರ ರಾತ್ರಿ 9.01ರ ನಂತರ ರಕ್ಷಾಬಂಧನ ಆಚರಣೆಯನ್ನು ಪ್ರಾರಂಭಿಸಬೇಕು. ಯಾಕೆಂದರೆ 9.01ಕ್ಕೆ ಭದ್ರ ಕಾಲದ ಮುಕ್ತಾಯದವಾಗುತ್ತದೆ.
ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಪೂರ್ಣಿಮೆ ದಿನ ರಕ್ಷಾ ಬಂಧನ ಆಚರಣೆ ಇರುತ್ತದೆ. ಆದರೆ ಈ ಬಾರಿ ಅಧಿಕ ಮಾಸವಿದೆ. ಅಧಿಕ ಮಾಸದ ಪ್ರಭಾವದಿಂದ ರಕ್ಷಾಬಂಧನ ಹಬ್ಬವನ್ನ ಉತ್ತರ ಭಾರತದಲ್ಲಿ ಎರಡು ದಿನ ಆಚರಿಸ್ತಾರೆ. ಈ ಬಾರಿ ಆಗಸ್ಟ್ 30 ಹಾಗೂ 31 ಎರಡೂ ದಿನಗಳಲ್ಲಿ ಹಬ್ಬದ ಆಚರಣೆ ಇದೆ. ಅಧಿಕೃತವಾಗಿ 31ನೇ ತಾರೀಖು ಆಚರಿಸಬೇಕು ಅಂತ ಪಂಚಾಂಗ ಹೇಳುತ್ತದೆ. ಇದಕ್ಕೆ ಕಾರಣ ಆಗಸ್ಟ್ 30ನೇ ತಾರೀಕನ್ನು ಭದ್ರಕಾಲ ಎಂದು ಪರಿಗಣಿಸಲಾಗುದೆ. ಭದ್ರಕಾಲ ಎಂದರೆ ಅಶುಭ ದಿನ ಎಂದು ಅರ್ಥ.ಅವತ್ತು ರಾಖಿ ಕಟ್ಟಿದ್ರೆ ಅಣ್ಣಂದಿರಿಗೆ ಕೆಟ್ಟದಾಗುತ್ತೆ ಅಂತ ನಂಬಿಕೆ. ಹೀಗಾಗಿ ಭದ್ರಕಾಲದಲ್ಲಿ ಹಬ್ಬ ಆಚರಿಸದೆ ಮರುದಿನ ಆಚರಿಸಬೇಕು ಅಂತ ಪಂಚಾಂಗ, ಶಾಸ್ತ್ರ ಹೇಳುತ್ತದೆ. ಇದಕ್ಕೆ ಪುರಾಣಗಳ ಐತಿಹ್ಯ ಕೂಡ ಇದೆ. ಭದ್ರಕಾಲದಲ್ಲಿ ಶೂರ್ಪನಖಿ ಅವನ ಅಣ್ಣ ರಾವಣನಿಗೆ ರಾಖಿ ಕಟ್ಟಿದ್ದಳಂತೆ. ಅದೇ ವರ್ಷ ರಾವಣನ ಸಾವು ಕೂಡ ಆಗಿತ್ತು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಭದ್ರಕಾಲ ಅಂದ್ರೆ ಹಬ್ಬ ಆಚರಿಸೋಕೆ ಕೆಟ್ಟ ದಿನ ಎಂದು ಅರ್ಥ.ಒಟ್ಟಿನಲ್ಲಿ ಇಂದು ರಾಖಿ ಕಟ್ಟದೆ ಮರುದಿನ ಕಟ್ಟುವುದು ಉತ್ತಮ.
Be the first to comment